ಗೆಟ್ ಲಾಸ್ಟ್: ಭಾರತೀಯ ಮಾಧ್ಯಮಗಳ ಕುರಿತ ಚೀನಾ ಹೇಳಿಕೆಗೆ ತೈವಾನ್ ಕಠಿಣ ತಿರುಗೇಟು!

ಕಮ್ಯುನಿಸ್ಟ್​ ರಾಷ್ಟ್ರ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು ಹೇರುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ತೈವಾನ್​ನ ಭಾರತೀಯ ಸ್ನೇಹಿತರ ಉತ್ತರ ಒಂದೇ. ಅದು ಗೆಟ್ ಲಾಸ್ಟ್​ (ತೊಲಗು)! ಎಂದು ತೈವಾನ್ ಚೀನಾಗೆ ಕಟು ಸಂದೇಶ ರವಾನಿಸಿದೆ.
ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್
ತೈವಾನ್ ಅಧ್ಯಕ್ಷೆ ತ್ಸೈ ಇಂಗ್-ವೆನ್

ನವದೆಹಲಿ: ಕಮ್ಯುನಿಸ್ಟ್​ ರಾಷ್ಟ್ರ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು ಹೇರುವ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ತೈವಾನ್​ನ ಭಾರತೀಯ ಸ್ನೇಹಿತರ ಉತ್ತರ ಒಂದೇ. ಅದು ಗೆಟ್ ಲಾಸ್ಟ್​ (ತೊಲಗು)! ಎಂದು ತೈವಾನ್ ಚೀನಾಗೆ ಕಟು ಸಂದೇಶ ರವಾನಿಸಿದೆ.

ತೈವಾನ್​ ರಾಷ್ಟ್ರೀಯ ದಿನಾಚರಣೆ ಪ್ರಯುಕ್ತ ಭಾರತೀಯ ಮಾಧ್ಯಮಗಳಲ್ಲೂ ಪುಟಗಟ್ಟಲೆ ಜಾಹೀರಾತು ಪ್ರಕಟವಾಗಿತ್ತು. ತೈವಾನ್​ ರಾಷ್ಟ್ರೀಯ ದಿನಾಚರಣೆಯ ಹಿನ್ನೆಲೆಯಲ್ಲಿ ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್-ವೆನ್ ಭಾವಚಿತ್ರ ಇರುವ ಜಾಹೀರಾತು ಭಾರತೀಯ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದರಿಂದ ಚೀನಾ ಮತ್ತೊಮ್ಮೆ  ಭಾರತದ ವಿರುದ್ಧ ಮುಗಿಬಿದ್ದಿತ್ತು. ಭಾರತೀಯ ಮಾಧ್ಯಮ ಜಗತ್ತಿಗೆ ತಪ್ಪು ಸಂದೇಶವನ್ನು ರವಾನಿಸಬಾರದು. ತೈವಾನ್ ಒಂದು ದೇಶವೇ ಅಲ್ಲ. ಅದು ರಿಪಬ್ಲಿಕ್ ಆಫ್ ಚೀನಾದ ಒಂದು ಭಾಗ. ಭಾರತೀಯ ಮಾಧ್ಯಮಗಳು ನಿಯಮ ಉಲ್ಲಂಘನೆ ಮಾಡಬಾರದು ಎಂದು ಚೀನಾ ರಾಯಭಾರಿ ಸೂಚಿಸಿದ್ದರು.

ಇದಕ್ಕೆ ಅಷ್ಟೇ ಖಡಕ್ ಆಗಿ ಪ್ರತಿಕ್ರಿಯೆ ನೀಡಿರುವ ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು, 'ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ಅದಕ್ಕೆ ತನ್ನದೇ ಆದ ಮಾಧ್ಯಮ ಸಿದ್ಧಾಂತಗಳಿವೆ, ಹಾಗೂ ಸ್ವಾತಂತ್ರ್ಯವೂ ಇದೆ. ಆದರೆ, ಕಮ್ಯುನಿಸ್ಟ್​ ರಾಷ್ಟ್ರವಾಗಿರುವ ಚೀನಾ ಭಾರತದ ಮೇಲೆ ತನ್ನ ನೀತಿಯನ್ನು  ಹೇರುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ತೈವಾನ್​ನ ಭಾರತೀಯ ಸ್ನೇಹಿತರ ಉತ್ತರ ಒಂದೇ. ಅದು ಗೆಟ್ ಲಾಸ್ಟ್​ (ತೊಲಗು)!' ಎಂದು ಟ್ವೀಟ್ ಮೂಲಕ ಚೀನಾಗೆ ಉತ್ತರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com