ಮಿಸೌರಿ ಮಾರಾಟ ಮಳಿಗೆಯಲ್ಲಿ ಗುಂಡಿನ ದಾಳಿ: ಓರ್ವ ಸಾವು, ಮೂವರಿಗೆ ಗಾಯ

ಅಮೆರಿಕದ ಮಿಸ್ಸೌರಿಯಲ್ಲಿ ಮಾರಾಟ ಮಳಿಗೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಮಾಧ್ಯಮ ವರದಿ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಮಾಸ್ಕೋ: ಅಮೆರಿಕದ ಮಿಸ್ಸೌರಿಯಲ್ಲಿ ಮಾರಾಟ ಮಳಿಗೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಇತರ ಮೂವರು ಗಾಯಗೊಂಡಿದ್ದಾರೆ ಎಂದು ಅಮೆರಿಕ ಮಾಧ್ಯಮ ವರದಿ ಮಾಡಿದೆ.

ಡಬ್ಲ್ಯುಐಎಸ್ ಟಿವಿ ವರದಿಯಂತೆ, ಅರ್ಕಾನ್ಸಾಸ್‌ನ ಗಡಿಯ ಸಮೀಪವಿರುವ ಪಟ್ಟಣವಾದ ಕೊಶ್ಕೊನೊಂಗ್‌ನಲ್ಲಿರುವ ಸ್ನ್ಯಾಪ್ಪಿ ಮಾರ್ಟ್ ಕನ್ವೀನಿಯನ್ಸ್ ಮಳಿಗೆಯಲ್ಲಿ ಶನಿವಾರ ಮುಂಜಾನೆ ಶೂಟಿಂಗ್ ನಡೆದಿದೆ.

ಗುಂಡಿನ ದಾಳಿಯಲ್ಲಿ ಗಾಯಗೊಂಡ ಮೂವರೂ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಮಿಸ್ಸೌರಿ ರಾಜ್ಯ ಹೆದ್ದಾರಿ ಗಸ್ತು ಪಡೆಯ ಸಾರ್ಜೆಂಟ್ ಜೆಫ್‍ ಕಿಂಡರ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com