ನಿಷೇಧಿತ ಉಗ್ರ ಸಂಘಟನೆ ಜೊತೆ ಸರ್ಕಾರ ಮಾತುಕತೆ: ಪಾಕ್ ಗೃಹಸಚಿವ ಸಮರ್ಥನೆ
ಇಸ್ಲಾಮಾಬಾದ್: ಪಾಕಿಸ್ತಾನಿ ತಾಲಿಬಾನ್ ಎಂದೇ ಕುಖ್ಯಾತಿ ಪಡೆದಿರುವ ನಿಷೇಧಿತ ಉಗ್ರಸಂಘಟನೆ ಟಿಟಿಪಿ(ತೆಹ್ರೀಕ್ ಇ ತಾಲಿಬಾನ್ ಪಾಕಿಸ್ತಾನ್) ಜೊತೆ ಪಾಕ್ ಸರ್ಕಾರ ಮಾತುಕತೆಯಲ್ಲಿ ನಿರತವಾಗಿರುವುದನ್ನು ಪಾಕ್ ಗೃಹಸಚಿವ ಶೇಖ್ ರಶೀದ್ ಸಮರ್ಥಿಸಿಕೊಂಡಿದ್ದಾರೆ.
ಟಿಟಿಪಿ ಉಗ್ರಗಾಮಿ ಸಂಘಟನೆ ಪಾಕ್- ಆಫ್ಘಾನಿಸ್ತಾನ ಗಡಿಯಲ್ಲಿ ಕಾರ್ಯಾಚಿಸುತ್ತಿದೆ. ಅಫ್ಘಾನಿಸ್ತಾನ ತಾಲಿಬಾನಿಗಳ ಸಹಾಯದಿಂದ ಟಿಟಿಪಿ ಸಂಘಟನೆಯೊಂದಿಗೆ ಪಾಕ್ ಸರ್ಕಾರ ಮಾತುಕತೆ ನಡೆಸುತ್ತಿದೆ. ಇದರಿಂದಾಗಿ ಬಿಕ್ಕಟ್ಟುಗಳು ತಲೆದೋರುವುದಿಲ್ಲ, ಬಗೆಹರಿಯಲಿದೆ ಎಂದು ಪ್ರಧಾನಿ ಇಮ್ರಾನ್ ಖಾನ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.
ಇದನ್ನೂ ಓದಿ: ಪಾಕಿಸ್ತಾನ: ಧರ್ಮ ನಿಂದನೆ ಎಸಗಿದ್ದ ಮಹಿಳೆಗೆ ಮರಣದಂಡನೆ
ಇಮ್ರಾನ್ ಖಾನ್ ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅದರಲ್ಲೂ ಟಿಟಿಪಿ ಉಗ್ರರ ದಾಳಿಯಲ್ಲಿ ಬಲಿಯಾದವರ ಕುಟುಂಬಗಳು ಇಮ್ರಾನ್ ಖಾನ್ ವಿರುದ್ಧ ಸಿಡಿದೆದ್ದಿದ್ದವು.
Related Article
ರಾಜಪ್ರಭುತ್ವದ ಕತಾರ್ ನಲ್ಲಿ ಇದೇ ಮೊದಲ ಬಾರಿಗೆ ಶಾಸಕಾಂಗ ಮಂಡಳಿ ಮತದಾನ
ದಕ್ಷಿಣ ಕೊರಿಯ ನಮಗೆ ಮರ್ಯಾದೆ ಕೊಟ್ಟರೆ ಮಾತ್ರ ಮಾತುಕತೆ: ಉತ್ತರ ಕೊರಿಯ ಸರ್ವಾಧಿಕಾರಿ ಕಿಮ್ ಜಾಂಗ್ ಸಹೋದರಿ
ಎನ್ ಆರ್ ಎಫ್ ಬೆಂಬಲಿಗನ ಮಗುವನ್ನು ಹತ್ಯೆಗೈದ ತಾಲಿಬಾನ್: ಅಫ್ಘಾನಿಸ್ತಾನದಲ್ಲಿ ಮುಂದುವರಿದ ರಿವೆಂಜ್ ಕಿಲ್ಲಿಂಗ್
ವಿಮಾನ ಸಂಚಾರ ಪುನರಾರಂಭಿಸಲು ತಾಲಿಬಾನ್ ನಾಯಕತ್ವದ ಅಫ್ಘಾನಿಸ್ತಾನ ಸರ್ಕಾರ ಭಾರತಕ್ಕೆ ಮನವಿ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ