ಅಫ್ಘಾನಿಸ್ತಾನ ನೆಲ ತೊರೆದ ನಂತರ ಇದೇ ಮೊದಲ ಬಾರಿಗೆ ಅಮೆರಿಕ- ತಾಲಿಬಾನ್ ಮಾತುಕತೆ

2020ರ ಶಾಂತಿ ಒಪ್ಪಂದದಲ್ಲಿ ತಾಲಿಬಾನ್, ಐಸಿಸ್, ಅಲ್ ಖೈದಾ ಸೇರಿದಂತೆ ಹಲವು ಉಗ್ರಸಂಘಟನೆಗಳ ಜೊತೆ ಸಂಬಂಧ ಕಡಿದುಕೊಳ್ಳಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಈ ಕುರಿತಾಗಿ ಚರ್ಚೆ ನಡೆಯಲಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಕಾಬೂಲ್: ಆಫ್ಘನ್ ನೆಲವನ್ನು ತೊರೆದ ಅಮೆರಿಕ ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನ ಜೊತೆ ಮಾತುಕತೆ ನಡೆಸಲಿದೆ. ಅಕ್ಟೋಬರ್ 9 ಮತ್ತು 10 ಅದಕ್ಕಾಗಿ ಮುಹೂರ್ತ ನಿಗದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಸಿಲುಕಿಕೊಂಡಿರುವ ವಿದೇಶ ನಾಗರಿಕರು ದೇಶ ತೊರೆಯಲು ಅನುವು ಮಾಡಿಕೊಡುವ ವಿಚಾರವಾಗಿ ಈ ಮಾತುಕತೆ ನಡೆಯುತ್ತಿದೆ ಎನ್ನಲಾಗಿದೆ. 

ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನದಲ್ಲಿ ಠಿಕಾಣಿ ಹೂಡಿದ್ದ ಅಮೆರಿಕ ಅಗಸ್ಟ್ ತಿಂಗಳಾಂತ್ಯದಲ್ಲಿ ಜಾಗ ಖಾಲಿ ಮಾಡಿತ್ತು. ಕಲೆದೊಂದು ವರ್ಷದಿಂದಲೇ ಅಮೆರಿಕನ್ ಸೈನಿಕರ ತೆರವು ಕಾರ್ಯಾಚರಣೆ ಪ್ರಾರಂಭಗೊಂಡಿತ್ತು.

ಇದೀಗ ನಡೆಯಲಿರುವ ಮಾತುಕತೆಯಲ್ಲಿ 2020ರಲ್ಲಿ ತಾಲಿಬಾನ್ ಮತ್ತು ಅಮೆರಿಕ ನಡುವೆ ನಡೆದಿದ್ದ ಶಾಂತಿ ಒಪ್ಪಂದ ಹಾಗೂ ಭಯೋತ್ಪಾದನೆ ಕುರಿತಾಗಿಯೂ ಚರ್ಚೆ ನಡೆಯಲಿದೆ ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ತಿಳಿಸಿದ್ದಾರೆ.   

2020 ಶಾಂತಿ ಒಪ್ಪಂದದಲ್ಲಿ ತಾಲಿಬಾನ್ ಐಸಿಸ್, ಅಲ್ ಖೈದಾ ಸೇರಿದಂತೆ ಹಲವು ಉಗ್ರಸಂಘಟನೆಗಳ ಜೊತೆ ಸಂಬಂಧ ಕಡಿದುಕೊಳ್ಳಬೇಕು ಎಂದು ಅಮೆರಿಕ ಷರತ್ತು ವಿಧಿಸಿತ್ತು. ಅಲ್ಲದೆ ಅಮೆರಿಕ  ವಿರುದ್ಧ ಸಂಚು ನಡೆಸುವ ಉಗ್ರಸಂಘಟನೆಗಳಿಗೆ ತಾಲಿಬಾನ್ ಆಶ್ರಯ ನೀಡಬಾರದು ಎಂದೂ ತಾಕೀತು ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com