'ಕೊರೋನಾ ವೈರಸ್ ಮೂಲ ಪತ್ತೆ ಮಾಡಿ': ಚೀನಾ ವಿರುದ್ಧದ ಅಮೆರಿಕ ನಿಲುವಿಗೆ ಭಾರತದ ಬಳಿಕ ಬ್ರಿಟನ್ ಬೆಂಬಲ

ಕೊರೋನಾ ವೈರಸ್ ವಿಚಾರವಾಗಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ಪದೇ ಪದೇ ಹಿನ್ನಡೆಯಾಗುತ್ತಿದ್ದು, ಕೋವಿಡ್-19 ವೈರಸ್ ಮೂಲ ಪತ್ತೆ ಮಾಡುವ ವಿಚಾರದಲ್ಲಿ ಅಮೆರಿಕ ತಳೆದಿರುವ ನಿಲುವಿಗೆ ಭಾರತ ಬೆಂಬಲ ನೀಡಿದ ಬೆನ್ನಲ್ಲೇ ಬ್ರಿಟನ್ ಕೂಡ ಈ ಕುರಿತು ತನ್ನ ಧನಿ ಎತ್ತಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ವೈರಸ್ ವಿಚಾರವಾಗಿ ಈಗಾಗಲೇ ಜಾಗತಿಕ ಮಟ್ಟದಲ್ಲಿ ಪದೇ ಪದೇ ಹಿನ್ನಡೆಯಾಗುತ್ತಿದ್ದು, ಕೋವಿಡ್-19 ವೈರಸ್ ಮೂಲ ಪತ್ತೆ ಮಾಡುವ ವಿಚಾರದಲ್ಲಿ ಅಮೆರಿಕ ತಳೆದಿರುವ ನಿಲುವಿಗೆ ಭಾರತ ಬೆಂಬಲ ನೀಡಿದ ಬೆನ್ನಲ್ಲೇ ಬ್ರಿಟನ್ ಕೂಡ ಈ ಕುರಿತು ತನ್ನ ಧನಿ ಎತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆಯನ್ನು ಉದ್ದೇಶಿಸಿ ಮಾತನಾಡಿರುವ ಬ್ರಿಟನ್, ಪ್ರಪ್ರಥಮ ಭಾರಿಗೆ ಮಾನವರಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡ ಚೀನಾಕ್ಕೆ ಹೊಸದಾಗಿ ಮತ್ತೆ ತಜ್ಞರ ನಿಯೋಗವನ್ನು ರವಾನೆ ಮಾಡಿ ಕೋವಿಡ್-19 ವೈರಸ್ ನ ಸಂಭವನೀಯ ಮೂಲಗಳ ಬಗ್ಗೆ ಆಳವಾಗಿ ತನಿಖೆ ನಡೆಸಬೇಕು ಎಂದು  ಆಗ್ರಹಿಸಿದೆ.

ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಯ ಒಂದು ತಂಡ ಮತ್ತು ಚೀನಾದ ವೈದ್ಯರ ಒಂದು ತಂಡ ಮೊದಲು ವೈರಸ್ ಸೋಂಕು ಕಾಣಿಸಿಕೊಂಡ ವುಹಾನ್ ಗೆ ತೆರಳಿ ತನಿಖೆ ನಡೆಸಿ ವರದಿ ಬಿಡುಗಡೆ ಮಾಡಿದ್ದರು. ಕೊರೋನಾ ವೈರಸ್ ಸಾಂಕ್ರಾಮಿಕ ಹೇಗೆ ಸ್ಫೋಟವಾಯಿತು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಾಲ್ಕು  ಊಹಾತ್ಮಕ ವರದಿಗಳನ್ನು ಮುಂದಿಟ್ಟಿತು. ಕೊರೋನಾ ವೈರಸ್ ಪ್ರಾಣಿಗಳ ಮೂಲಕ ಮಾನವರಿಗೆ ಹಬ್ಬಿದ್ದು, ಪ್ರಮುಖವಾಗಿ ಬಾವಲಿಗಳಿಂದ ಜನರಲ್ಲಿ ಹಬ್ಬಿತ್ತು ಎಂದು ಹೇಳಿತ್ತು. ಅಲ್ಲದೆ ವುಹಾನ್ ವೈರಸ್ ಲ್ಯಾಬ್ ನಿಂದ ಸೋಂಕು ಪ್ರಸರಣವಾಗಿಲ್ಲ.. ಲ್ಯಾಬ್ ನಿಂದ ಸೋಂಕು ಪ್ರಸರಣ ಅಸಂಭವ ಎಂದೂ ಚೀನಾ  ವಾದವನ್ನೇ ಪ್ರತಿಪಾದಿಸಿತ್ತು.  

ಹೀಗಾಗಿ ಜಿನೀವಾದಲ್ಲಿರುವ ಅಮೆರಿಕ ರಾಜತಾಂತ್ರಿಕ ಮಿಷನ್, ವಿಶ್ವ ಆರೋಗ್ಯ ಸಂಸ್ಥೆಯು ಕೊರೋನಾ ವೈರಸ್ ಮೂಲದ ಶೋಧದ ಕುರಿತು ನಡೆಸಿರುವ ಮೊದಲ ಹಂತದ ಸಂಶೋಧನೆ ಮತ್ತು ತನಿಖೆ ಶ್ಲಾಘನೀಯವೇ ಆದರೂ ಅಧ್ಯಯನದಿಂದ ಬಂದ ವರದಿ ಪೂರ್ಣಪ್ರಮಾಣದಲ್ಲಿಲ್ಲ ಮತ್ತು ಅನಿರ್ದಿಷ್ಟವಾದಗದ್ದು. ಹೀಗಾಗಿ ಸಮಯೋಚಿತ, ಪಾರದರ್ಶಕ, ಪುರಾವೆ ಆಧಾರಿತ ಮತ್ತು ತಜ್ಞರ ನೇತೃತ್ವದ 2 ನೇ ಹಂತದ ಅಧ್ಯಯನಕ್ಕೆ ಚೀನಾಕ್ಕೆ ಮತ್ತೆ ನಿಯೋಗವನ್ನು ಕಳುಹಿಸಬೇಕು ಎಂದು ಗುರುವಾರ ಆಗ್ರಹಿಸಿತ್ತು.  

ಜಿನೀವಾದಲ್ಲಿ ಡಬ್ಲ್ಯುಎಚ್‌ಒ ವಾರ್ಷಿಕ ಸಭೆಗೆ ದಿನಗಣನೆ ಆರಂಭವಾಗಿರುವಂತೆಯೇ ಅಮೆರಿಕದ ಈ ಹೇಳಿಕೆ ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಅಲ್ಲದೆ ಸ್ವತಃ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಕೊರೋನಾ ವೈರಸ್ ಮೂಲದ ಕುರಿತು ಅಮೆರಿಕ ವಿಜ್ಞಾನಿಗಳು ಮತ್ತು ತಜ್ಞರು ನಡೆಸುತ್ತಿರುವ ಶೋಧ ಕಾರ್ಯದ ವೇಗವನ್ನು ದ್ವಿಗುಣಗೊಳಿಸಿ 90 ದಿನಗಳಲ್ಲಿ ಅದರ ವರದಿ ನೀಡುವಂತೆ ತಮ್ಮ ಗುಪ್ತಚರ ಸಂಸ್ಥೆಗಳಿಗೆ ಸೂಚಿಸಿದ್ದರು.ಇದಕ್ಕೆ ಭಾರತ ಕೂಡ ಬೆಂಬಲ ಸೂಚಿಸಿತ್ತು. ಇದೀಗ ಇದೇ ವಿಚಾರವಾಗಿ ಬ್ರಿಟನ್ ಕೂಡ ತನ್ನ ಧನಿ ಗೂಡಿಸಿದ್ದು, ಈ ಬಗ್ಗೆ ಮಾತನಾಡಿರುವ ಜಿನೀವಾದಲ್ಲಿನ ಬ್ರಿಟಿಷ್ ರಾಯಭಾರಿ ಸೈಮನ್ ಮ್ಯಾನ್ಲೆ ಅವರು, ಮೊದಲ ಹಂತದ ಅಧ್ಯಯನವು "ಯಾವಾಗಲೂ ಪ್ರಕ್ರಿಯೆಯ ಪ್ರಾರಂಭವಾಗಬೇಕೇ ಹೊರತು ಅಂತ್ಯವಲ್ಲ ಎಂದು ಹೇಳುವ ಮೂಲಕ 2ನೇ ಹಂತದ ಅಧ್ಯಯನಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೆ ಮೊದಲ ಹಂತದ ಸಂಪೂರ್ಣ ದತ್ತಾಂಶಗಳು, ಮೂಲ ದತ್ತಾಂಶ ಮತ್ತು ಮಾದರಿಗಳನ್ನು" ಸ್ವತಂತ್ರ ತಜ್ಞರಿಗೆ ದೊರೆಯುವಂತೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com