ಇಂಡೋನೇಷ್ಯಾ ದ್ವೀಪರಾಷ್ಟ್ರ ಬಳಿ ಸಾಗರ ಗರ್ಭದಲ್ಲಿ 5.7 ತೀವ್ರತೆ ಭೂಕಂಪ: ಸುನಾಮಿ ಭೀತಿ?

ಇಂಡೊನೇಷ್ಯಾಗೆ ಸೇರಿದ ಸೇರಮ್ ದ್ವೀಪದಿಂದ 65 ಕಿ.ಮೀ ದೂರದಲ್ಲಿ, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಜಕಾರ್ತ: ಇಂಡೊನೇಷ್ಯಾ ದ್ವೀಪರಾಷ್ಟ್ರದ ಪೂರ್ವ ಭಾಗದಲ್ಲಿ ಸಾಗರಗರ್ಭದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.7 ತೀವ್ರತೆ ದಾಖಲಾಗಿದೆ. ಇದುವರೆಗೂ ಯಾವುದೇ ಸಾವು ನೋವಾಗಲಿ, ಹಾನಿಯಾಗಲಿ ಸಂಭವಿಸಿರುವುದು ಪತ್ತೆಯಾಗಿಲ್ಲ.

ಇಂಡೊನೇಷ್ಯಾಗೆ ಸೇರಿದ ಸೇರಮ್ ದ್ವೀಪದಿಂದ 65 ಕಿ.ಮೀ ದೂರದಲ್ಲಿ, ಭೂಮಿಯಿಂದ 10 ಕಿ.ಮೀ ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಭೂಕಂಪದಿಂದ ಸುನಾಮಿ ಏಳುವ ಭೀತಿ ಎದುರಾಗಿತ್ತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಂಡೋನೇಷ್ಯಾ ಭೂಗರ್ಭಶಾಸ್ತ್ರ ಇಲಾಖೆ ಭೂಕಂಪದಿಂದ ಸುನಾಮಿ ಏಳುವ ಯಾವುದೇ ಸಾಧ್ಯತೆಗಳನ್ನು ತಳ್ಳಿ ಹಾಕಿದೆ. ಇದರಿಂದಾಗಿ ಇಂಡೊನೇಷ್ಯಾದ ಕರಾವಳಿ ಪ್ರದೇಶದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com