The New Indian Express
ಬಾಗ್ದಾದ್: ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಅವರ ಹತ್ಯೆ ಸಂಚು ವಿಫಲಗೊಂಡು ಪ್ರಧಾನಿ ಸ್ವಲ್ಪದರಲ್ಲೇ ಪಾರಾದ ಆಘಾತಕಾರಿ ಘಟನೆ ಭಾನುವಾರ ನಡೆದಿದೆ. ಬಾಗ್ದಾದ್ ನ ಭದ್ರಕೋಟೆ ಎಂದೇ ಕರೆಯಲ್ಪಡುವ, ಸೇನೆಯ ಸರ್ಪಗಾವಲಿನಲ್ಲಿರುವ ಗ್ರೀನ್ ಜೋನ್ ಎಂಬಲ್ಲಿ ನೆಲೆಗೊಂಡ ಪ್ರಧಾನಿ ನಿವಾಸ ಬಳಿಯೇ ಈ ಘಟನೆ ನಡೆದಿದೆ ಎನ್ನುವುದು ತೀವ್ರ ಅಚ್ಚರಿಯ ಸಂಗತಿ.
ಇದನ್ನೂ ಓದಿ: ಬಾಗ್ದಾದ್ನಲ್ಲಿ ಅವಳಿ ಆತ್ಮಾಹುತಿ ಬಾಂಬ್ ದಾಳಿ, ಕನಿಷ್ಠ 28 ಮಂದಿ ಸಾವು
ಶಸ್ತ್ರಸಜ್ಜಿತ ಡ್ರೋನ್ ಮೂಲಕ ಪ್ರಧಾನಿ ಮೇಲೆ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ ಪ್ರಧಾನಿಯ ಅಂಗರಕ್ಷಕರು ಸೇರಿದಂತೆ ಒಟ್ಟು 7 ಮಂದಿ ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದಾರೆ.
ಇದನ್ನೂ ಓದಿ: ಖಾಸಿಮ್ ಸೊಲೈಮನಿ ಹತ್ಯೆ: ಟ್ರಂಪ್ ವಿರುದ್ಧ ಬಂಧನ ವಾರಂಟ್ ಜಾರಿಗೊಳಿಸಿದ ಇರಾಕ್ ನ್ಯಾಯಾಲಯ
ದಾಳಿ ಘಟನೆ ನಡೆದ ಸ್ವಲ್ಪ ಹೊತ್ತಿನಲ್ಲೇ ಇರಾಕ್ ಪ್ರಧಾನಿ ಮುಸ್ತಾಫಾ ಅಲ್ ಕದಿಮಿ ಟ್ವೀಟ್ ಮಾಡಿದ್ದು, ದೇವರ ದಯದಿಂದ ತಾವು ಸುರಕ್ಷಿತವಾಗಿದ್ದು, ಜನರೊಂದಿಗಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಇರಾಕ್ ನಲ್ಲಿ ಐಸಿಸ್ ಉಗ್ರರ ಭೀಕರ ದಾಳಿ; 13 ಮಂದಿ ಪೊಲೀಸರ ಸಾವು, ಹಲವರಿಗೆ ಗಾಯ
ಅಲ್ಲದೆ ದಾಳಿ ಘಟನೆ ನಡೆದ ನಂತರ ಹಿಂದಿನ ದಿನವೇ ನಿಗದಿಯಾಗಿದ್ದ ಟಿವಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ ಶಾಂತಚಿತ್ತರಾಗಿ ಕಂಡುಬಂಡಿದ್ದು ಅಚ್ಚರಿಗೆ ಕಾರಣವಾಗಿದೆ. ಇದುವರೆಗೂ ಯಾರೂ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಇದನ್ನೂ ಓದಿ: ಇರಾಕ್ ಆಸ್ಪತ್ರೆಯಲ್ಲಿ ಅಗ್ನಿ ಅನಾಹುತ, 54 ಮಂದಿ ಸಾವು
ಶಿಯಾ ಬಂಡುಕೋರ ಸಂಘಟನೆ ಮತ್ತು ಭದ್ರತಾ ಪಡೆಗಳ ನಡುವೆ ಸಂಘರ್ಷದ ವಾತಾವರಣ ದೇಶದಲ್ಲಿ ನಿರ್ಮಾಣಗೊಂಡಿತ್ತು. ಇರಾಕ್ ಸಂಸತ್ ಚುನಾವಣಾ ಫಲಿತಾಂಶವನ್ನು ಶಿಯಾ ಬಂಡುಕೋರ ಪರ ಸಂಘಟನೆಗಳು ವಿರೋಧಿಸಿದ್ದವು.
ಇದನ್ನೂ ಓದಿ: ಅಫ್ಗಾನ್ ಜೈಲಿನಿಂದ ಹೊರಬಂದ ಖೈದಿಗಳು ಐಸಿಸ್, ಅಲ್ಖೈದಾ ಉಗ್ರ ಸಂಘಟನೆಗೆ ಸೇರ್ಪಡೆ