The New Indian Express
ಕೇಪ್ ಕೆನೆವೆರಾಲ್: ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಿಂಗಳುಗಳಿಂದ ತಂಗಿದ್ದ ನಾಲ್ವರು ಸ್ಪೇಸ್ ಎಕ್ಸ್ ಗಗನಯಾನಿಗಳು ಭೂಮಿಗೆ ಸುರಕ್ಷಿತವಾಗಿ ಹಿಂದಿರುಗಿದ್ದಾರೆ. ನಾಲ್ವರು ಗಗನಯಾನಿಗಳು 200 ದಿನಗಳನ್ನು ಅಂತರಿಕ್ಷದಲ್ಲಿ ಕಳೆದಿದ್ದರು ಎನ್ನುವುದು ವಿಶೇಷ.
ಇದನ್ನೂ ಓದಿ: ಬಾಹ್ಯಾಕಾಶ ನೀತಿ, ಅಂತರಿಕ್ಷ ಭದ್ರತೆ ಕುರಿತು ಭಾರತ- ಜಪಾನ್ ವಿಚಾರ ವಿನಿಮಯ
ಗಗನಯಾನಿಗಳಿದ್ದ ಕ್ಯಾಪ್ಸೂಲ್ ಗಲ್ಫ್ ಆಫ್ ಮೆಕ್ಸಿಕೊ ಪ್ರಾಂತ್ಯದಲ್ಲಿ ಭೂಮಿಯನ್ನು ಪ್ರವೇಶಿಸಿದೆ. ಪ್ರಖ್ಯಾತ ಎಲೆಕ್ಟ್ರಿಕ್ ಕಾರು ತಯಾರಿಕಾ ಸಂಸ್ಥೆ ಟೆಸ್ಲಾದ ಸ್ಥಾಪಕ ಎಲಾನ್ ಮಸ್ಕ್ ಒಡೆತನದ ಸಂಸ್ಥೆ ಸ್ಪೇಸ್ ಎಕ್ಸ್.
ಇದನ್ನೂ ಓದಿ: ಮೊದಲ ಬಾರಿಗೆ ಬಾಹ್ಯಾಕಾಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ; ಆಗಸಕ್ಕೆ ಹಾರುತ್ತಿರುವ ನಟಿ, ನಿರ್ದೇಶಕ ಇವರೇ
ನಾಲ್ವರು ಗಗನಯಾನಿಗಳು ಅಲ್ಲಿ ವಾಸ್ತವ್ಯ ಹೂಡಿದ್ದಾಗಲೇ ರಷ್ಯಾದ ಸಿನಿಮಾ ತಂಡ ಅಂತರಿಕ್ಷದಲ್ಲೇ ಸಿನಿಮಾ ಚಿತ್ರೀಕರಣ ನಡೆಸಲು ಬಾಹ್ಯಾಕಾಶ ನಿಲ್ದಾಣಕ್ಕೆ ಬಂದಿತ್ತು. ಅವರು 6 ತಿಂಗಳ ಕಾಲ ಅಲ್ಲಿ ತಂಗಲಿದ್ದಾರೆ.
ಇದನ್ನೂ ಓದಿ: ಭಾರತದ ಗಗನ್ ಯಾನ್ ಮಿಷನ್ ನ್ನು ಬೆಂಬಲಿಸುತ್ತೇವೆ: ಆಸ್ಟ್ರೇಲಿಯಾ ಬಾಹ್ಯಾಕಾಶ ಸಂಸ್ಥೆ ಉಪಮುಖ್ಯಸ್ಥ
ರಷ್ಯಾ ಸಿನಿಮಾ ತಂಡವನ್ನು ಬಾಹ್ಯಾಕಾಶ ನಿಲ್ದಾಣದಲ್ಲಿ ಹಿಂದೆ ಬಿಟ್ಟು ತಮ್ಮ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಾಲ್ವರು ಸ್ಪೇಸ್ ಎಕ್ಸ್ ಗಗನಯಾನಿಗಳು ವಾಪಸಾಗಿದ್ದಾರೆ.
ಇದನ್ನೂ ಓದಿ: ಬಾಹ್ಯಾಕಾಶದಿಂದ ಭೂಮಿಯನ್ನು ನೋಡುವುದು ಜೀವನವನ್ನು ಬದಲಾಯಿಸುವ ಅನುಭವ: ಗಗನಯಾತ್ರಿ ಸಿರಿಶಾ ಬಾಂದ್ಲಾ
ಹಿಂದಿರುಗುವ ವೇಳೆ ಅವರಿದ್ದ ನೌಕೆಯಲ್ಲಿ ಟಾಯ್ಲೆಟ್ ಕೆಟ್ಟು ಹೋಗಿತ್ತು. ಅದರಿಂದಾಗಿ ಶೌಚಕ್ಕೆ ಡಯಪರ್ ಬಳಸಬೇಕಾಗಿ ಬಂದಿತ್ತು. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ 8 ಗಂಟೆಗಳ ಸುದೀರ್ಘ ಪಯಣದ ನಂತರ ಸುರಕ್ಷಿತವಾಗಿ ವಾಪಸಾಗಿದ್ದಾರೆ.
ಇದನ್ನೂ ಓದಿ: ರಿಚರ್ಡ್ ಬ್ರಾನ್ಸನ್, ಭಾರತದ ಮೂಲದ ಸಿರೀಷಾ ಬಾಂದ್ಲಾ ಹೊತ್ತ ವಿಎಸ್ಎಸ್ ಯುನಿಟಿ ನೌಕೆ ಯಶಸ್ವಿ ಉಡಾವಣೆ, ಬಾಹ್ಯಾಕಾಶ ತಲುಪಿದ ಗಗನಯಾನಿಗಳು!