ನಿಗೂಢ ಕೆಮಿಕಲ್ ದಾಳಿ ಪ್ರಕರಣದಲ್ಲಿ ರಷ್ಯನ್ ಪ್ರಜೆ ಬಂಧನ: ಸ್ಕಾಟ್ ಲೆಂಡ್ ಯಾರ್ಡ್ ಪೊಲೀಸರ ಕಾರ್ಯಾಚರಣೆ

ಇಂಗ್ಲೆಂಡಿನ ಸ್ಯಾಲಿಸ್ಬೆರಿಯಲ್ಲಿ ವಾಸವಿದ್ದ ಮಾಜಿ ರಷ್ಯನ್ ಗೂಢಚಾರಿ ಸರ್ಗಿ ಸ್ಕ್ರಿಪಲ್ ಮೇಲೆ ಕೊಲೆ ಯತ್ನ ನಡೆದಿತ್ತು. ಅವರು ಹಠಾತ್ತನೆ ಅನಾರೋಗ್ಯಗೊಂಡು ಆಸ್ಪತ್ರೆ ಸೇರಿದ್ದರು. ಅವರ ಅನಾರೋಗ್ಯಕ್ಕೆ ನಿಗೂಢ ಕೆಮಿಕಲ್ ಶಸ್ತ್ರಾಸ್ತ್ರ ಪ್ರಯೋಗ ಕಾರಣ ಎನ್ನುವ ಗುಮಾನಿ ಮೂಡಿತ್ತು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಂಡನ್: ಸ್ಕಾಟ್ ಲೆಂಡ್ ಯಾರ್ಡ್ ಪೊಲೀಸರು 2018ರ ರಾಸಾಯನಿಕ ದಾಳಿಗೆ ಸಂಬಂಧಿಸಿದಂತೆ ರಷ್ಯ ಪ್ರಜೆಯನ್ನು ಬಂಧಿಸಿದ್ದಾರೆ. 

ಸರ್ಗಿ ಫೆಡೊತೊವ್ ಎಂಬಾತ ಬಂಧಿತ ವ್ಯಕ್ತಿ. ಆತನ ವಿರುದ್ಧ ಕೊಲೆ ಯತ್ನ, ಕೆಮಿಕಲ್ ಶಸ್ತ್ರಾಸ್ತ್ರ ಹೊಂದಿದ ಆರೋಪ ಸೇರಿದಂತೆ ಕೊಲೆ ಸಂಚು ಪ್ರಕರಣಗಳನ್ನು ದಾಖಲಿಸಿಕೊಳ್ಲಲಾಗಿದೆ. 

2018ರಲ್ಲಿ ಇಂಗ್ಲೆಂಡಿನ ಸ್ಯಾಲಿಸ್ಬೆರಿಯಲ್ಲಿ ವಾಸವಿದ್ದ ಮಾಜಿ ರಷ್ಯನ್ ಗೂಢಚಾರಿ ಸರ್ಗಿ ಸ್ಕ್ರಿಪಲ್ ಮೇಲೆ ಕೊಲೆ ಯತ್ನ ನಡೆದಿತ್ತು. ಅವರು ಹಠಾತ್ತನೆ ಅನಾರೋಗ್ಯಗೊಂಡು ಆಸ್ಪತ್ರೆ ಸೇರಿದ್ದರು. ಅನಾರೋಗ್ಯಕ್ಕೆ ಖಚಿತ ಕಾರಣ ತಿಳಿದುಬಂದಿರಲಿಲ್ಲ.

ಆದರೆ ಸರ್ಗಿ ಸ್ಕ್ರಿಪಲ್ ಅವರ ಅನಾರೋಗ್ಯಕ್ಕೆ ನಿಗೂಢ ಕೆಮಿಕಲ್ ಶಸ್ತ್ರಾಸ್ತ್ರ ಕಾರಣ ಎನ್ನುವ ಗುಮಾನಿ ಮೂಡಿತ್ತು. ಈ ಬಗ್ಗೆ ತನಿಖೆ ನಡೆಸಲಾಗಿ ಇಬ್ಬರನ್ನು ಬಂಧಿಸಲಾಗಿತ್ತು. ಇದೀಗ ಮೂರನೇ  ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೆಮಿಕಲ್ ದಾಳಿಯ ಹಿಂದೆ ರಷ್ಯಾದ ಉನ್ನತ ಮಟ್ಟದ ಅಧಿಕಾರಿಗಳ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com