ಕೆನಡಾದಲ್ಲಿ ನಟಿ ರಂಭಾ ಕಾರು ಭೀಕರ ಅಪಘಾತ: ಪುತ್ರಿಗೆ ಗಾಯ

ನಟಿ ರಂಭಾ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ರಂಭಾ ಅವರ ಪುತ್ರಿ ಸಾಶಾ ತೀವ್ರ ಗಾಯಗೊಂಡಿದ್ದಾರೆ.
ನಟಿ ರಂಭಾ
ನಟಿ ರಂಭಾ
Updated on: 

ನಟಿ ರಂಭಾ ಅವರ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ರಂಭಾ ಅವರ ಪುತ್ರಿ ಸಾಶಾ ತೀವ್ರ ಗಾಯಗೊಂಡಿದ್ದಾರೆ.

ಅಪಘಾತದಲ್ಲಿ ರಂಭಾ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದರೆ, ಅವರ ಕಿರಿಯ ಪುತ್ರಿಗೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಚಿಕಿತ್ಸೆ ಬಳಿಕ ರಂಭಾ ಅವರು ಮನೆಗೆ ವಾಪಸ್ಸಾಗಿದ್ದು, ಪುತ್ರಿಗೆ ಮಾತ್ರ ಚಿಕಿತ್ಸೆ ಇನ್ನೂ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಘಟನೆ ಬಗ್ಗೆ ಸ್ವತಃ ರಂಭಾ ಅವರೇ ಸಾಮಾಜಿಕ ಜಾಲತಾಣ ಇನ್'ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದು, ಪುತ್ರಿ ಅತಿ ಶೀಘ್ರದಲ್ಲಿ ಗುಣಮುಖರಾಗುವಂತೆ ಪ್ರಾರ್ಥಿಸಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ರಂಭಾ ಮತ್ತು ಪತಿ ಇಂದ್ರಕುಮಾರ್ ಪದ್ಮನಾಥನ್ ಅವರು, ಕೆನಡಾದ ಒಂಟಾರಿಯೊ ಪ್ರಾಂತ್ಯದ ರಾಜಧಾನಿ ಟೊರೊಂಟೊದಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಇಬ್ಬರು ಪುತ್ರಿಯರಿದ್ದು, ಓರ್ವ ಪುತ್ರನಿದ್ದಾನೆ.

ಟೊರೊಂಟೊದಲ್ಲೇ ದಂಪತಿಗಳು ಮಕ್ಕಳಿಗೆ ಶಿಕ್ಷಣ ಕೂಡ ಕೊಡಿಸುತ್ತಿದ್ದು, ನಿನ್ನೆ ಶಾಲೆ ಮುಗಿಸಿಕೊಂಡು ಮಕ್ಕಳನ್ನು ಕರೆತರುವಾಗ ಕಾರು ಅಪಘಾತಕ್ಕೀಡಾಗಿದೆ. ರಂಭಾ ಚಲಾಯಿಸುತ್ತಿದ್ದ ಕಾರು ಬಲ ಬದಿಯಿಂದ ಬಂದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗುತ್ತಿದೆ.

ರಂಭಾ ಚಲಾಯಿಸುತ್ತಿದ್ದ ಕಾರಿನಲ್ಲಿ ಇಬ್ಬರು ಮಕ್ಕಳು ಮತ್ತು ಮಕ್ಕಳನ್ನು ನೋಡಿಕೊಳ್ಳುತ್ತಿರುವ ಕೆಲಸದಾಕೆ ಇದ್ದರು ಎಂದು ಹೇಳಲಾಗುತ್ತಿದ್ದು, ಕಿರಿಯ ಪುತ್ರಿ ಸಾಶಾಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಉಳಿದಂತೆ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.ಈ ಎಲ್ಲ ವಿವರಗಳನ್ನು ಸ್ವತಃ ರಂಭಾ ಅವರೇ ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ.

ಮತ್ತೊಂದು ಕಾರಿನಿಂದ ಡಿಕ್ಕಿಯಾಗಿ ಹಾನಿಯಾಗಿರುವ ತಮ್ಮ ಕಾರಿನ ಫೋಟೋ ಮತ್ತು ಮಗಳು ಆಸ್ಪತ್ರೆಯ ಬೆಡ್​ ಮೇಲೆ ಮಲಗಿರುವ ಫೋಟೋವನ್ನು ರಂಭಾ ಶೇರ್​ ಮಾಡಿಕೊಂಡಿದ್ದು, ಮಕ್ಕಳನ್ನು ಶಾಲೆಯಿಂದ ಪಿಕಪ್​ ಮಾಡಿಕೊಂಡು ಬರುವಾಗ ಎದುರಿಗೆ ಬಂದ ಕಾರೊಂದು ಡಿಕ್ಕಿ ಹೊಡೆಯಿತು. ನಾನು ಮತ್ತು ನನ್ನ ಮಕ್ಕಳು ಸಣ್ಣಪುಟ್ಟ ಗಾಯಗಳೊಂದಿಗೆ ಸುರಕ್ಷಿತರಾಗಿದ್ದೇವೆ. ನನ್ನ ಪುಟ್ಟ ಮಗಳು ಸಾಶಾ ಇನ್ನೂ ಆಸ್ಪತ್ರೆಯಲ್ಲೇ ಇದ್ದಾಳೆ. ಕೆಟ್ಟ ದಿನ ಮತ್ತು ಕೆಟ್ಟ ಸಮಯ. ದಯವಿಟ್ಟು ನಮಗಾಗಿ ಪ್ರಾರ್ಥಿಸಿ ಎಂದು ರಂಭಾ ಕೇಳಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com