ಮಗನಿಗೆ ವಿಚ್ಛೇದನ ನೀಡಲು ಮುಂದಾದ ಸೊಸೆಯ ಹತ್ಯೆ: 74 ವರ್ಷದ ಭಾರತೀಯ ಅಮೇರಿಕನ್ ವೃದ್ಧನ ಬಂಧನ

ಮಗನಿಗೆ ವಿಚ್ಛೇದನ ನೀಡಲು ಮುಂದಾದ ಸೊಸೆಯನ್ನು ಹತ್ಯೆ ಮಾಡಿದ ಆರೋಪದಡಿ 74 ವರ್ಷದ ಭಾರತೀಯ ಅಮೇರಿಕನ್ ವೃದ್ಧನನ್ನು ಕ್ಯಾಲಿಫೋರ್ನಿಯಾ ಪೊಲೀಸರು ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಸ್ಯಾನ್ ಫ್ರಾನ್ಸಿಸ್ಕೋ: ಮಗನಿಗೆ ವಿಚ್ಛೇದನ ನೀಡಲು ಮುಂದಾದ ಸೊಸೆಯನ್ನು ಹತ್ಯೆ ಮಾಡಿದ ಆರೋಪದಡಿ 74 ವರ್ಷದ ಭಾರತೀಯ ಅಮೇರಿಕನ್ ವೃದ್ಧನನ್ನು ಕ್ಯಾಲಿಫೋರ್ನಿಯಾ ಪೊಲೀಸರು ಬಂಧಿಸಿದ್ದಾರೆ.

ಸಿತಾಲ್ ಸಿಂಗ್ ದೋಸಾಂಜ್ ತಮ್ಮ ಸೊಸೆ ಗುರ್ಪ್ರೀತ್ ಕೌರ್ ದೊಸಾಂಜ್ ಅವರನ್ನು ಕಳೆದ ವಾರ ಆಕೆ ಕೆಲಸ ಮಾಡುತ್ತಿದ್ದ ವಾಲ್ಮಾರ್ಟ್ ಸಂಸ್ಥೆಯ ಪಾರ್ಕಿಂಗ್ ಪ್ರದೇಶದಲ್ಲಿ ಹತ್ಯೆ ಮಾಡಿದ್ದರು. 

ಹತ್ಯೆಗೀಡಾದ ಮಹಿಳೆ ಶುಕ್ರವಾರದಂದು ತಮ್ಮ ಸಂಬಂಧಿಕರೊಬ್ಬರಿಗೆ ಕರೆ ಮಾಡಿ ಸಿತಾಲ್ ತಮಗಾಗಿ ಹುಡುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದು, ಪೊಲೀಸರಿಗೆ ತನಿಖೆಯಲ್ಲಿ ಬಯಲಾಗಿ, ಆರೋಪಿಯನ್ನು ಪತ್ತೆ ಮಾಡುವುದಕ್ಕೆ ಸಹಕಾರಿಯಾಗಿದೆ.

ಫೋನ್ ಕರೆ ಮುಗಿದ 5 ಗಂಟೆಗಳ ನಂತರ ವಾಲ್ಮಾರ್ಟ್ ನ ಸಹೋದ್ಯೋಗಿ ಗುರ್ಪ್ರೀತ್ ಮೃತದೇಹವನ್ನು ಪಾರ್ಕಿಂಗ್ ಲಾಟ್ ನಲ್ಲಿ ನೋಡಿದ್ದಾರೆ. ಗುರ್ಪ್ರೀತ್ ಗೆ ಎರಡು ಗುಂಡೇಟು ಬಿದ್ದಿದ್ದನ್ನು ಸಹೋದ್ಯೋಗಿ ಗಮನಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com