ಕೆನಡಾ ಪ್ರಧಾನಿ ಜಸ್ಟಿನ್‌ ಟ್ರೂಡೊ ದಂಪತಿ ವಿಚ್ಛೇದನ: 18 ವರ್ಷಗಳ ವೈವಾಹಿಕ ಜೀವನ ಅಂತ್ಯ

ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊ ಹಾಗೂ ಪತ್ನಿ ಸೋಫಿ ಗ್ರೆಗೊರಿ  ತಮ್ಮ 18 ವರ್ಷಗಳ ವೈವಾಹಿಕ ಜೀವನವನ್ನು ಮುರಿದುಕೊಳ್ಳುವುದಾಗಿ ಘೋಷಿಸಿದ್ದಾರೆ.
ಜಸ್ಟಿನ್ ಟ್ರೂಡೊ ಹಾಗೂ ಪತ್ನಿ ಸೋಫಿ ಗ್ರೆಗೊರಿ 
ಜಸ್ಟಿನ್ ಟ್ರೂಡೊ ಹಾಗೂ ಪತ್ನಿ ಸೋಫಿ ಗ್ರೆಗೊರಿ 

ಒಟ್ಟಾವ: ಕೆನಡಾ ಪ್ರಧಾನಮಂತ್ರಿ ಜಸ್ಟಿನ್ ಟ್ರೂಡೊ ಹಾಗೂ ಪತ್ನಿ ಸೋಫಿ ಗ್ರೆಗೊರಿ  ತಮ್ಮ 18 ವರ್ಷಗಳ ವೈವಾಹಿಕ ಜೀವನವನ್ನು ಮುರಿದುಕೊಳ್ಳುವುದಾಗಿ ಘೋಷಿಸಿದ್ದಾರೆ.

ಹಲವು ಅರ್ಥಪೂರ್ಣ ಹಾಗೂ ಕ್ಲಿಷ್ಟಕರ ಮಾತುಕತೆ ಬಳಿಕ ನಾವಿಬ್ಬರು ಬೇರೆಯಾಗುತ್ತಿದ್ದೇವೆ ಎನ್ನುವ ವಿಚಾರವನ್ನು ನಾನು ಮತ್ತು ಸೋಫಿ ಹಂಚಿಕೊಳ್ಳುತ್ತಿದ್ದೇವೆ‘ ಎಂದು ಟ್ರೂಡೊ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ತಮ್ಮ ಸಂಬಂಧದಲ್ಲಿ ಈ ಹಿಂದೆ ಬಂದ ಕಷ್ಟಗಳ ಬಗ್ಗೆ ಮಾತನಾಡಿದ ದಂಪತಿ, ವಿಚ್ಛೇದಿತರಾಗುವುದಾಗಿ ಹೇಳಿದ್ದಾರೆ. ಕೆಲ ವರ್ಷಗಳಿಂದ ಇಬ್ಬರು ಸಾರ್ವಜನಿಕವಾಗಿ ಭಾರಿ ವಿರಳವಾಗಿ ಕಾಣಿಸಿಕೊಳ್ಳುತ್ತಿದ್ದರು. ಟ್ರುಡೊ (51) ಹಾಗೂ ಸೋಫಿ (48) 2015ರಲ್ಲಿ ವಿವಾಹವಾಗಿದ್ದರು. ಅವರಿಗೆ 9, 14 ಹಾಗೂ 15 ವರ್ಷದ ಮೂರು ಮಕ್ಕಳಿದ್ದಾರೆ.

ಟ್ರೂಡೊ ಅವರ ತಂದೆ ಕೂಡ ಅಧಿಕಾರದಲ್ಲಿದ್ದಾಗಲೇ ವಿಚ್ಛೇದನ ಪಡೆದಿದ್ದರು. ಟ್ರೂಡೊ ಅವರ ತಂದೆ ಮಾಜಿ ಪ್ರಧಾನಿ ಪಿರೆ ಟ್ರೂಡೊ, 1977ರಲ್ಲಿ ಪತ್ನಿ ಮಾರ್ಗರೇಟ್ ಅವರಿಂದ ಬೇರೆಯಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com