Quad summit: ನಾವು ಯಾರ ವಿರುದ್ಧವೂ ಅಲ್ಲ- ಪ್ರಧಾನಿ ಮೋದಿ; ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ ಎಂದ ಅಮೆರಿಕ ಅಧ್ಯಕ್ಷ ಬೈಡನ್!

ಅಮೆರಿಕದ ಡೆಲವೇರ್ ನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು.
Quad summit
ಕ್ವಾಡ್ ಸಭೆಯಲ್ಲಿ ಪ್ರಧಾನಿ ಮತ್ತು ಅಮೆರಿಕ ಅಧ್ಯಕ್ಷ ಜೋ ಬೈಡನ್
Updated on

ವಾಷಿಂಗ್ಟನ್: ನಾವು ಯಾರ ವಿರುದ್ಧವೂ ಅಲ್ಲ. ಪ್ರಜಾಪ್ರಭುತ್ವ ಮೌಲ್ಯಗಳ ಆಧಾರದ ಮೇಲೆ ಕ್ವಾಡ್ ದೇಶಗಳು ಒಟ್ಟಾಗಿ ಕೆಲಸ ಮಾಡುವುದು ಇಡೀ ಮಾನವೀಯತೆಗೆ ಬಹಳ ಮುಖ್ಯವಾಗಿದೆ ಎಂದು ಪ್ರಧಾನಿ ಮೋದಿ ಹಾಟ್ ಮೈಕ್ ನಲ್ಲಿ ಹೇಳಿದರು.

ಅಮೆರಿಕದಲ್ಲಿ ನಡೆಯುತ್ತಿರುವ ಕ್ವಾಡ್​ ಶೃಂಗಸಭೆ 2024ರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, 'ನಾವು ಯಾರ ವಿರುದ್ಧವೂ ಅಲ್ಲ. ನಾವೆಲ್ಲರೂ ನಿಯಮಾಧಾರಿತ ಅಂತಾರಾಷ್ಟ್ರೀಯ ಆದೇಶ, ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವ ಮತ್ತು ಎಲ್ಲಾ ಸಮಸ್ಯೆಗಳ ಶಾಂತಿಯುತ ಪರಿಹಾರವನ್ನು ಬೆಂಬಲಿಸುತ್ತೇವೆ ಎಂದರು.

ಆರೋಗ್ಯ, ಭದ್ರತೆ, ನಿರ್ಣಾಯಕ ಉದಯೋನ್ಮುಖ ತಂತ್ರಜ್ಞಾನಗಳು, ಹವಾಮಾನ ಬದಲಾವಣೆ ಮತ್ತು ಸಾಮರ್ಥ್ಯ ನಿರ್ಮಾಣದಂತಹ ಕ್ಷೇತ್ರಗಳಲ್ಲಿ ಕ್ವಾಡ್ ದೇಶಗಳು ಅನೇಕ ಸಕಾರಾತ್ಮಕ ಮತ್ತು ಅಂತರ್ಗತ ಉಪಕ್ರಮಗಳನ್ನು ತೆಗೆದುಕೊಂಡಿವೆ ಎಂದರು. ಅಂತೆಯೇ 2025 ರಲ್ಲಿ ಭಾರತದಲ್ಲಿ ಕ್ವಾಡ್ ಶೃಂಗಸಭೆಯನ್ನು ಆಯೋಜಿಸುವ ಬದ್ಧತೆಯನ್ನು ಪ್ರಧಾನಿ ಮೋದಿ ಪುನರುಚ್ಚರಿಸಿದರು.

ಚೀನಾ ನಮ್ಮನ್ನು ಪರೀಕ್ಷಿಸುತ್ತಿದೆ

ಇದೇ ವೇಳೆ ಮಾತನಾಡಿದ ಅಮೆರಿಕ ಅಧ್ಯಕ್ಷ ಜೋ ಬೈಡನ್, 'ಚೀನಾ 'ಕ್ವಾಡ್‌' ಸದಸ್ಯ ರಾಷ್ಟ್ರಗಳನ್ನು ಪರೀಕ್ಷಿಸುತ್ತಿದೆ. ಕ್ಸಿ ಜಿನ್‌ಪಿಂಗ್‌ (ಚೀನಾ ಅಧ್ಯಕ್ಷ) ದೇಶೀಯ ಆರ್ಥಿಕ ಸವಾಲುಗಳು ಹಾಗೂ ಪ್ರಕ್ಷುಬ್ಧತೆಯನ್ನು ನಿಯಂತ್ರಿಸುವುದರ ಮೇಲೆ ಗಮನ ಕೇಂದ್ರೀಕರಿಸಿದ್ದಾರೆ ಎಂದು ಭಾವಿಸಿದ್ದೇವೆ.

ಚೀನಾ ಅಧ್ಯಕ್ಷರು ರಾಜತಾಂತ್ರಿಕ ಅವಕಾಶಗಳನ್ನೇ ಖರೀದಿಸಲು ನೋಡುತ್ತಿದ್ದಾರೆ. ದೇಶದ ಹಿತದೃಷ್ಟಿಯಿಂದ ಅವರು ಆಕ್ರಮಣಕಾರಿಯಾಗಿ ಸಾಗುತ್ತಿದ್ದಾರೆ ಎಂದು ನನಗನಿಸುತ್ತಿದೆ ಎಂದರು.

ಅಂತೆಯೇ ಆಕ್ರಮಣಕಾರಿಯಾಗಿ ನಡೆದುಕೊಳ್ಳುವುದು ಇಂಡೋ–ಪೆಸಿಫಿಕ್‌ ಭಾಗದ ನಮ್ಮನ್ನೆಲ್ಲ ಆರ್ಥಿಕತೆ, ತಂತ್ರಜ್ಞಾನ ಸೇರಿದಂತೆ ವಿವಿಧ ರೀತಿಯಲ್ಲಿ ಪರೀಕ್ಷಿಸುತ್ತಿದೆ. ಅದೇ ವೇಳೆ, ತೀವ್ರ ಸ್ಪರ್ಧೆಗೆ ತೀವ್ರ ರಾಜತಾಂತ್ರಿಕತೆ ಅಗತ್ಯವಾಗುತ್ತದೆ ಎಂಬುದನ್ನು ನಂಬಿದ್ದೇವೆ ಎಂದು ಬೈಡನ್ ಹೇಳಿದರು.

Quad summit
ಅಮೆರಿಕ: ಫಿಲಡೆಲ್ಫಿಯಾಗೆ ಪ್ರಧಾನಿ ಮೋದಿ ಆಗಮನ; ಕ್ವಾಡ್ ಶೃಂಗಸಭೆಗೂ ಮುನ್ನ ಬೈಡೆನ್ ಜತೆ ದ್ವಿಪಕ್ಷೀಯ ಮಾತುಕತೆ

ಅಮೆರಿಕದ ಡೆಲವೇರ್ ನಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ರಾಷ್ಟ್ರಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಮೂರು ದಿನಗಳ ಅಮೆರಿಕ ಪ್ರವಾಸದ ಮೊದಲ ಹಂತದಲ್ಲಿ ಪ್ರಧಾನಿ ಮೋದಿ ಶನಿವಾರ ಬೆಳಗ್ಗೆ ಅಮೆರಿಕದ ಫಿಲಡೆಲ್ಫಿಯಾ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಕ್ವಾಡ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಮೊದಲು, ಅವರು ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದರು.

ಚೀನಾ ಕೇಂದ್ರ ಬಿಂದು

ದಕ್ಷಿಣ ಚೀನಾ ಸಮುದ್ರ ಮತ್ತು ಪೂರ್ವ ಚೀನಾ ಸಮುದ್ರ ಪ್ರದೇಶಗಳಲ್ಲಿ ಪ್ರಾದೇಶಿಕ ವಿವಾದಗಳನ್ನು ಚೀನಾ ಸೃಷ್ಟಿಸಿದೆ. ದಕ್ಷಿಣ ಚೀನಾ ಸಮುದ್ರದ ಮೇಲೆ ಸಾರ್ವಭೌಮತ್ವ ಪ್ರತಿಪಾದಿಸುತ್ತಿರುವ ಚೀನಾ ನಡೆಯನ್ನು ವಿಯೆಟ್ನಾಂ, ಮಲೇಷ್ಯಾ, ಫಿಲಿಪ್ಪೀನ್ಸ್‌, ಬ್ರೂನೈ ಮತ್ತು ತೈವಾನ್ ತೀವ್ರವಾಗಿ ವಿರೋಧಿಸುತ್ತಿವೆ.

ಏನಿದು ಹಾಟ್ ಮೈಕ್?

ಭಾಷಣಕಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲು ಮತ್ತು ಪ್ರಸಾರ ಮಾಡಲು ಹಾಟ್ ಮೈಕ್‌ ಅಥವಾ ಮೈಕ್ರೊಫೋನ್‌ ಬಳಸಲಾಗುತ್ತದೆ. ಭಾಷಣಕಾರರು ಇಲ್ಲದ ಸಂದರ್ಭದಲ್ಲಿಯೂ ಅವುಗಳನ್ನು ಬಳಸಬಹುದು. ದಾಖಲಿಸಲಾಗಿರುವ ಧ್ವನಿ ಕೆಲವೊಮ್ಮೆ ಭಾಷಣಕಾರರ ಅರಿವಿಗೆ ಬಾರದೆ ಪ್ರಸಾರವಾಗುತ್ತವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com