ಶ್ರೀಲಂಕಾ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ಪ್ರಮಾಣವಚನ ಸ್ವೀಕಾರ

54 ವರ್ಷದ ನ್ಯಾಷನಲ್ ಪೀಪಲ್ಸ್ ಪವರ್(ಎನ್‌ಪಿಪಿ) ನಾಯಕಿಗೆ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ಪ್ರಮಾಣ ವಚನ ಬೋಧಿಸಿದರು.
ಹರಿಣಿ ಅಮರಸೂರ್ಯ
ಹರಿಣಿ ಅಮರಸೂರ್ಯ
Updated on

ಕೊಲಂಬೊ: ಶ್ರೀಲಂಕಾದ ನೂತನ ಪ್ರಧಾನಿಯಾಗಿ ಹರಿಣಿ ಅಮರಸೂರ್ಯ ಅವರು ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದ್ದು, 2000ನೇ ಇಸವಿಯಲ್ಲಿ ಸಿರಿಮಾವೋ ಬಂಡಾರನಾಯಕೆ ನಂತರ ಪ್ರಧಾನಿ ಹುದ್ದೆ ಅಲಂಕರಿಸಿದ ಎರಡನೇ ಮಹಿಳೆ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.

54 ವರ್ಷದ ನ್ಯಾಷನಲ್ ಪೀಪಲ್ಸ್ ಪವರ್(ಎನ್‌ಪಿಪಿ) ನಾಯಕಿಗೆ ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ದಿಸ್ಸಾನಾಯಕೆ ಅವರು ಪ್ರಮಾಣ ವಚನ ಬೋಧಿಸಿದರು.

ದಿಸ್ಸಾನಾಯಕೆ ಅವರೇ ಹರಿಣಿ ಅಮರಸೂರ್ಯ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದು, ಅವರೊಂದಿಗೆ ಮೂವರು ಸಚಿವರನ್ನು ಸಹ ನೇಮಕ ಮಾಡಿದ್ದಾರೆ.

ಹರಿಣಿ ಅಮರಸೂರ್ಯ
ಶ್ರೀಲಂಕಾ ಅಧ್ಯಕ್ಷೀಯ ಚುನಾವಣೆ: ಅನುರಾ ಡಿಸಾನಾಯಕೆ ವಿಜಯಿ ಎಂದು ಚುನಾವಣಾ ಆಯೋಗ ಘೋಷಣೆ

ಹರಿಣಿ ಅಮರಸೂರ್ಯ ಅವರಿಗೆ ನ್ಯಾಯ, ಶಿಕ್ಷಣ, ಕಾರ್ಮಿಕ, ಕೈಗಾರಿಕೆಗಳು, ವಿಜ್ಞಾನ ಮತ್ತು ತಂತ್ರಜ್ಞಾನ, ಆರೋಗ್ಯ ಮತ್ತು ಹೂಡಿಕೆ ಸಚಿವರ ಖಾತೆಗಳನ್ನು ನೀಡಲಾಗಿದೆ.

ಅಧ್ಯಕ್ಷೀಯ ಚುನಾವಣೆಯ ನಂತರ ದಿನೇಶ್ ಗುಣವರ್ಧನ ಅವರು ಶ್ರೀಲಂಕಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅವರ ಸ್ಥಾನಕ್ಕೆ ಹರಿಣಿ ಅವರನ್ನು ನೇಮಕ ಮಾಡಲಾಗಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಗಳಿಸಿದ್ದ 56 ವರ್ಷದ ದಿಸ್ಸಾನಾಯಕೆ ಅವರು ಭಾನುವಾರ ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com