ಪಾಕಿಸ್ತಾನ FM ಗಳಲ್ಲಿ ಭಾರತೀಯ ಹಾಡುಗಳ ಪ್ರಸಾರಕ್ಕೆ ಬ್ರೇಕ್!

ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಮುಖೇಶ್ ಅವರಂತಹ ಖ್ಯಾತ ಭಾರತೀಯ ಗಾಯಕರ ಹಾಡುಗಳು ಪಾಕಿಸ್ತಾನದಲ್ಲೂ ಜನಪ್ರಿಯವಾಗಿವೆ
ಬಾಲಿವುಡ್ ತಾರೆಯರು
ಬಾಲಿವುಡ್ ತಾರೆಯರು
Updated on

ಇಸ್ಲಾಮಾಬಾದ್: 26 ಪ್ರವಾಸಿಗರನ್ನು ಬಲಿ ಪಡೆದ ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪಾಕಿಸ್ತಾನದ ಎಫ್‌ಎಂ ರೇಡಿಯೋ ಕೇಂದ್ರಗಳು ಗುರುವಾರ ಭಾರತೀಯ ಹಾಡುಗಳ ಪ್ರಸಾರವನ್ನು ನಿಲ್ಲಿಸಿವೆ.

"ಪಾಕಿಸ್ತಾನ ಪ್ರಸಾರಕರ ಸಂಘ(ಪಿಬಿಎ) ದೇಶಾದ್ಯಂತ ಪಾಕಿಸ್ತಾನದ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಭಾರತೀಯ ಹಾಡುಗಳ ಪ್ರಸಾರವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಿದೆ" ಎಂದು ಪಿಬಿಎ ಪ್ರಧಾನ ಕಾರ್ಯದರ್ಶಿ ಶಕೀಲ್ ಮಸೂದ್ ಹೇಳಿದ್ದಾರೆ.

ಲತಾ ಮಂಗೇಶ್ಕರ್, ಮೊಹಮ್ಮದ್ ರಫಿ, ಕಿಶೋರ್ ಕುಮಾರ್ ಮತ್ತು ಮುಖೇಶ್ ಅವರಂತಹ ಖ್ಯಾತ ಭಾರತೀಯ ಗಾಯಕರ ಹಾಡುಗಳು ಪಾಕಿಸ್ತಾನದಲ್ಲೂ ಜನಪ್ರಿಯವಾಗಿವೆ ಮತ್ತು ಲಾಹೋರ್‌ನ ಎಫ್‌ಎಂ ರೇಡಿಯೋ ಕೇಂದ್ರಗಳು ಪ್ರತಿದಿನ ಅವುಗಳನ್ನು ಪ್ರಸಾರ ಮಾಡುತ್ತವೆ.

ಬಾಲಿವುಡ್ ತಾರೆಯರು
ಭಾರತ ಸೇನೆ ದಾಳಿ ಆತಂಕ: ಕರಾಚಿ, ಲಾಹೋರ್ ವಾಯುಪ್ರದೇಶ ತಾತ್ಕಾಲಿಕ ಮುಚ್ಚಿದ ಪಾಕಿಸ್ತಾನ

ಎರಡು ದೇಶಗಳ ನಡುವಿನ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಎಫ್‌ಎಂ ರೇಡಿಯೋ ಕೇಂದ್ರಗಳಲ್ಲಿ ಭಾರತೀಯ ಹಾಡುಗಳ ಪ್ರಸಾರವನ್ನು ತಕ್ಷಣವೇ ನಿಲ್ಲಿಸುವಂತೆ ಸರ್ಕಾರ, ಸಂಘಕ್ಕೆ ನಿರ್ದೇಶನ ನೀಡಿದೆ ಎಂಬ ಊಹಾಪೋಹಗಳ ನಡುವೆ ಪಾಕಿಸ್ತಾನ ಮಾಹಿತಿ ಸಚಿವ ಅಟ್ಟಾ ತರಾರ್ ಅವರು ಪಿಬಿಎ ನಿರ್ಧಾರವನ್ನು ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com