'ನಾನು ಸೇರಿದಂತೆ 14 ಮಿಲಿಯನ್ ಸ್ವಯಂ ಸೇವಕರು ಇರಾನ್ ಗಾಗಿ ಪ್ರಾಣ ತ್ಯಾಗ ಮಾಡಲು ಸಿದ್ಧ- ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್!

14 ಮಿಲಿಯನ್ ಅಂಕಿಅಂಶ ರಾಜ್ಯ ಮಾಧ್ಯಮ ಈ ಹಿಂದೆ ವರದಿ ಮಾಡಿದ ಅಂದಾಜುಗಳಿಗಿಂತ ದುಪ್ಪಟ್ಟು ಆಗಿದೆ. ಇದು ಸಂಘರ್ಷವು ಮುಂದುವರೆದಂತೆ ಪ್ರಚಾರಗಳು ಮತ್ತು ಮಾಧ್ಯಮದ ಮೂಲಕ ಸಂಗ್ರಹಿಸಿದ ಸ್ವಯಂಸೇವಕರ ಸಂಖ್ಯೆಯನ್ನು ಉಲ್ಲೇಖಿಸಿದೆ.
President Masoud Pezeshkian
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್
Updated on

ಟೆಹರಾನ್: ಸದ್ಯ ನಡೆಯತ್ತಿರುವ ಸಂಘರ್ಷದಲ್ಲಿ ನಾನು ಸೇರಿದಂತೆ 14 ಮಿಲಿಯನ್ ಇರಾನಿಯನ್ನರು ಸ್ವಯಂ ಪ್ರೇರಿತರಾಗಿ ತಮ್ಮ ಪ್ರಾಣ ತ್ಯಾಗ ಮಾಡಲು ಸಿದ್ಧರಿದ್ದೇವೆ ಎಂದು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಹೇಳಿದ್ದಾರೆ.

ಹಾರ್ಮುಜ್ ಜಲಸಂಧಿಯ ಮೇಲೆ ತನ್ನ ನಿರ್ಬಂಧವನ್ನು ತೆರವುಗೊಳಿಸದಿದ್ದರೆ ಇರಾನಿನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆದರಿಕೆಗೂ ಮುನ್ನ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಸೌದ್ ಪೆಜೆಶ್ಕಿಯಾನ್ ಈ ರೀತಿಯ ಪೋಸ್ಟ್ ಮಾಡಿದ್ದಾರೆ.

14 ಮಿಲಿಯನ್ ಅಂಕಿಅಂಶ ರಾಜ್ಯ ಮಾಧ್ಯಮ ಈ ಹಿಂದೆ ವರದಿ ಮಾಡಿದ ಅಂದಾಜುಗಳಿಗಿಂತ ದುಪ್ಪಟ್ಟು ಆಗಿದೆ. ಇದು ಸಂಘರ್ಷವು ಮುಂದುವರೆದಂತೆ ಪ್ರಚಾರಗಳು ಮತ್ತು ಮಾಧ್ಯಮದ ಮೂಲಕ ಸಂಗ್ರಹಿಸಿದ ಸ್ವಯಂಸೇವಕರ ಸಂಖ್ಯೆಯನ್ನು ಉಲ್ಲೇಖಿಸಿದೆ.

President Masoud Pezeshkian
Watch | ಇರಾನ್ ಯುದ್ಧದ ಬಗ್ಗೆ ಟ್ರಂಪ್ ಎಡವಟ್ಟು ಹೇಳಿಕೆಗಳು!

ಸುಮಾರು 90 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಇರಾನ್, ರಾಷ್ಟ್ರವ್ಯಾಪಿ ಪ್ರತಿಭಟನೆಗಳನ್ನು ಹಿಂಸಾತ್ಮಕವಾಗಿ ನಿಗ್ರಹಿಸಿದ ನಂತರ ಸರ್ಕಾರದ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗೆಲೆದ್ದಿತ್ತು.

14 ಮಿಲಿಯನ್‌ಗಿಂತಲೂ ಹೆಚ್ಚು ಇರಾನಿನ ಜನರು ತಮ್ಮ ಪ್ರಾಣವನ್ನು ತ್ಯಾಗಮಾಡಲು ಸಿದ್ಧರಿದ್ದಾರೆ. ನಾನು ಕೂಡ ಇರಾನ್‌ಗಾಗಿ ನನ್ನ ಪ್ರಾಣವನ್ನು ನೀಡಲು ಸಿದ್ಧನಾಗಿದ್ದೇನೆ ಎಂದು ಪೆಜೆಶ್ಕಿಯಾನ್ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com