ಇರಾನ್‌: ಡೊನಾಲ್ಡ್ ಟ್ರಂಪ್‌ಗೆ ಯೇಸುಕ್ರಿಸ್ತ ಗುದ್ದುತ್ತಿರುವ AI ರಚಿತ ಚಿತ್ರ ಹಂಚಿಕೊಂಡ ತಜಕಿಸ್ತಾನ್ ರಾಯಭಾರ ಕಚೇರಿ!

ಏಪ್ರಿಲ್ 15 ರಂದು, ತಜಕಿಸ್ತಾನದಲ್ಲಿರುವ ಇರಾನಿನ ರಾಯಭಾರ ಕಚೇರಿಯು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಇದು ಈಗಾಗಲೇ ಬಿಸಿಯಾಗಿರುವ ಆನ್‌ಲೈನ್ ಚರ್ಚೆಗೆ ಹೊಸ ಆಯಾಮ ನೀಡಿದೆ.
AI-generated image shared by Iran’s Tajikistan embassy depicts an angry Jesus Christ confronting Donald Trump.
ತಜಕಿಸ್ತಾನದಲ್ಲಿರುವ ಇರಾನಿನ ರಾಯಭಾರ ಕಚೇರಿ ಹಂಚಿಕೊಂಡ ಎಐ ರಚಿತ ಚಿತ್ರ
Updated on

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತಮ್ಮನ್ನು ತಾವು ಯೇಸು ಎಂಬಂತೆ ಬಿಂಬಿಸುವ AI-ರಚಿತ ಚಿತ್ರವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಹಲವಾರು ಇರಾನಿನ ರಾಜತಾಂತ್ರಿಕ ಖಾತೆಗಳು ಸಾಮಾಜಿಕ ಮಾಧ್ಯಮದಲ್ಲಿ ವಿಡಂಬನಾತ್ಮಕ ದಾಳಿಯನ್ನು ಪ್ರಾರಂಭಿಸಿವೆ. ಟ್ರಂಪ್ ಅವರು ಟ್ರೂತ್ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ AI-ರಚಿತ ಚಿತ್ರವನ್ನು ಹಂಚಿಕೊಂಡ ನಂತರ, ಈ ವಿವಾದ ಪ್ರಾರಂಭವಾಯಿತು.

ಏಪ್ರಿಲ್ 15 ರಂದು, ತಜಕಿಸ್ತಾನದಲ್ಲಿರುವ ಇರಾನಿನ ರಾಯಭಾರ ಕಚೇರಿಯು ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ. ಇದು ಈಗಾಗಲೇ ಬಿಸಿಯಾಗಿರುವ ಆನ್‌ಲೈನ್ ಚರ್ಚೆಗೆ ಹೊಸ ಆಯಾಮ ನೀಡಿದೆ. ಈ ಎಡಿಟೆಡ್ ಆವೃತ್ತಿಯಲ್ಲಿ, ಕೋಪಗೊಂಡ ಯೇಸುಕ್ರಿಸ್ತನು ಡೊನಾಲ್ಡ್ ಟ್ರಂಪ್ ಮೇಲೆ ದಾಳಿ ಮಾಡುವುದನ್ನು ತೋರಿಸಲಾಗಿದೆ.

ಯೇಸುಕ್ರಿಸ್ತನ ವೇಷದಲ್ಲಿದ್ದ ಟ್ರಂಪ್, ರೋಗಿಯೊಬ್ಬರನ್ನು ಗುಣಪಡಿಸುತ್ತಿರುವಂತೆ ತೋರಿಸುವ AI- ರಚಿತ ಚಿತ್ರವನ್ನು ಟ್ರಂಪ್ ಹಂಚಿಕೊಂಡಿದ್ದರು. ಅನೇಕ ಕ್ರೈಸ್ತರು ಮತ್ತು ಧಾರ್ಮಿಕ ಮುಖಂಡರು ಇದನ್ನು ಅಗೌರವ ಅಥವಾ ಧರ್ಮನಿಂದನೆ ಎಂದು ಭಾವಿಸಿದರು. ದೈವಿಕವೆಂದು ಪರಿಗಣಿಸಲ್ಪಟ್ಟ ಯೇಸುಕ್ರಿಸ್ತನ ಪಾತ್ರದಲ್ಲಿ ರಾಜಕಾರಣಿಯನ್ನು ಇರಿಸಿದ್ದಕ್ಕೆ ಸಿಟ್ಟಾಗಿದ್ದರು. ಧರ್ಮವನ್ನು ಗೇಲಿ ಮಾಡಬಾರದು ಅಥವಾ ರಾಜಕೀಯ ಅಥವಾ ಪ್ರಚಾರಕ್ಕಾಗಿ ದುರುಪಯೋಗಪಡಿಸಿಕೊಳ್ಳಬಾರದು ಎಂದಿದ್ದರು. ಇದರಿಂದಾಗಿ ಸುವಾರ್ತಾಬೋಧಕರನ್ನು (ಟ್ರಂಪ್ ಬೆಂಬಲಿಸುವವರ ಪ್ರಮುಖ ಗುಂಪು) ಕೆರಳಿಸಬಹುದು ಮತ್ತು ಅವರಿಂದ ದೂರವಿಡಬಹುದು ಎಂದು ಎಚ್ಚರಿಸಿದ್ದಾರೆ.

ತಮ್ಮನ್ನು ಯೇಸುಕ್ರಿಸ್ತನಂತೆ ತೋರಿಸಲು ಹಂಚಿಕೊಳ್ಳಲಾಗಿದೆ ಎಂಬ ಹೇಳಿಕೆಗಳನ್ನು ಡೊನಾಲ್ಡ್ ಟ್ರಂಪ್ ನಿರಾಕರಿಸಿದರು. ಬದಲಾಗಿ, ಆ ಚಿತ್ರವು ಕೇವಲ ಒಬ್ಬ ವೈದ್ಯನಾಗಿ ಸಹಾಯ ಮಾಡುತ್ತಿರುವುದಾಗಿತ್ತು ಹೊರತು, ಯಾವುದೇ ಧಾರ್ಮಿಕತೆಯಲ್ಲ ಎಂದು ಹೇಳಿಕೊಂಡರು. ಆದಾಗ್ಯೂ, ಅನೇಕರು ಆ ವಿವರಣೆಯನ್ನು ಸ್ವೀಕರಿಸಲಿಲ್ಲ. ಯುಎಸ್‌ನಲ್ಲಿ ಧಾರ್ಮಿಕ ಸಂಪ್ರದಾಯವಾದಿಗಳಿಂದ ಪ್ರತಿಕ್ರಿಯೆ ಮತ್ತು ಇತರ ದೇಶಗಳಿಂದ (ಇರಾನ್‌ನಂತಹ) ಅಪಹಾಸ್ಯ ಮತ್ತು ಟೀಕೆ ವ್ಯಕ್ತವಾದ ನಂತರ ಟ್ರಂಪ್ ಆ ಪೋಸ್ಟ್ ಅನ್ನು ಡಿಲೀಟ್ ಮಾಡಿದರು. ಸಾರ್ವಜನಿಕ 'ಗೊಂದಲ'ದಿಂದಾಗಿ ಆ ಪೋಸ್ಟ್ ಅನ್ನು ಅಳಿಸಿದ್ದೇನೆ ಎಂದು ಹೇಳಿದರು.

ಈ ಬೆಳವಣಿಗೆಯು ಧಾರ್ಮಿಕ, ರಾಜಕೀಯ ಮತ್ತು ರಾಜತಾಂತ್ರಿಕ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಕುರಿತು ಅಮೆರಿಕದೊಂದಿಗೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನಲ್ಲಿ ಟೆಹ್ರಾನ್ ಈ ಚಿತ್ರವನ್ನು ವಿಡಂಬನಾತ್ಮಕ ಸಾಧನವಾಗಿ ಬಳಸಿಕೊಂಡಿದೆ.

ಇದಕ್ಕೂ ಮೊದಲು, ದಕ್ಷಿಣ ಆಫ್ರಿಕಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಜೆಫ್ರಿ ಎಪ್ಸ್ಟೀನ್ ಅವರನ್ನು ಉಲ್ಲೇಖಿಸುವ ಶೀರ್ಷಿಕೆಯೊಂದಿಗೆ ಡೊನಾಲ್ಡ್ ಟ್ರಂಪ್ ಅವರ ಚಿತ್ರವನ್ನು ರೀಶೇರ್ ಮಾಡಿತು. ಟ್ರಂಪ್ ಅವರಿಂದ 'ಗುಣಮುಖನಾದ' ವ್ಯಕ್ತಿ ವಾಸ್ತವವಾಗಿ ಜೆಫ್ರಿ ಎಪ್ಸ್ಟೀನ್ ಆಗಿದ್ದಾರೆಯೇ ಎಂದು ಕೇಳುವ ಶೀರ್ಷಿಕೆಯೊಂದಿಗೆ ರಾಯಭಾರ ಕಚೇರಿಯು X ನಲ್ಲಿ ಶೀರ್ಷಿಕೆ ನೀಡಿತ್ತು.

ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್‌ನ ಏಕಪಕ್ಷೀಯ ಯುದ್ಧದ ಬಗ್ಗೆ ಧ್ವನಿ ಎತ್ತಿರುವ ಪೋಪ್ ಲಿಯೋ XIV ಅವರನ್ನು ಟೀಕಿಸುವ ಪ್ರತ್ಯೇಕ ಸಂದೇಶವನ್ನು ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಟ್ರಂಪ್ ಈ ಚಿತ್ರವನ್ನು ಹಂಚಿಕೊಂಡಿದ್ದರು.

AI-generated image shared by Iran’s Tajikistan embassy depicts an angry Jesus Christ confronting Donald Trump.
ತನ್ನನ್ನೇ ಯೇಸು ಕ್ರಿಸ್ತನಿಗೆ ಹೋಲಿಸಿಕೊಂಡು AI ಚಿತ್ರ ಪೋಸ್ಟ್: ಭಾರೀ ಟೀಕೆ-ವಿರೋಧ ಬೆನ್ನಲ್ಲೇ ಫೋಟೋ ಡಿಲೀಟ್ ಮಾಡಿದ ಟ್ರಂಪ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com