'1.4 billion Indians': ಯುಎಸ್ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಗೆ ನೆತನ್ಯಾಹು ತಿರುಗೇಟು!

ನಮಗೆ ಭಾರತ ಎಂಬ ಸಣ್ಣ ದೇಶದಂತೆ ಕೆಲವು ಇತರ ಸ್ನೇಹಿತರಿದ್ದಾರೆ. ನಿಮಗೆ ತಿಳಿದಿದೆಯೇ, ಅದು 1.4 ಬಿಲಿಯನ್ ಜನರನ್ನು ಹೊಂದಿದೆ. ಅಲ್ಲಿ ನಮಗೆ ಅಪಾರ ಬೆಂಬಲವಿದೆ ಎಂದು ನೆತನ್ಯಾಹು ಹೇಳಿದ್ದಾರೆ.
Netanyahu
ಇಸ್ರೇಲ್ ಪ್ರಧಾನಿ ನೆತನ್ಯಾಹು
Updated on

ಜೆರುಸೆಲೆಂ: ಅಮೆರಿಕ ಇಡೀ ಜಗತ್ತಿನ ಎಲ್ಲೆಡೆ ಉಳಿದಿರುವ" ಏಕೈಕ ಪ್ರಬಲ ಮಿತ್ರ ರಾಷ್ಟ್ರ ಎಂಬ ಅಮೆರಿಕದ ಉಪಾಧ್ಯಕ್ಷ ಜೆ ಡಿ ವ್ಯಾನ್ಸ್ ಅವರ ಹೇಳಿಕೆಗೆ ಭಾರತದ ಬೆಂಬಲವನ್ನು ಉಲ್ಲೇಖಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಿರುಗೇಟು ನೀಡಿದ್ದಾರೆ.

ಹೌದು. ಫಾಕ್ಸ್ ನ್ಯೂಸ್ ಸಂಡೇ ಬ್ರೀಫಿಂಗ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನೆತನ್ಯಾಹು, ಭಾರತ ಎಂಬ ಸಣ್ಣ ದೇಶ ಸೇರಿದಂತೆ ಹಲವು ಇತರ ದೇಶಗಳ ಬೆಂಬಲವನ್ನು ಇಸ್ರೇಲ್ ಹೊಂದಿದೆ. ನಮಗೆ ಭಾರತ ಎಂಬ ಸಣ್ಣ ದೇಶದಂತೆ ಕೆಲವು ಇತರ ಸ್ನೇಹಿತರಿದ್ದಾರೆ. ನಿಮಗೆ ತಿಳಿದಿದೆಯೇ, ಅದು 1.4 ಬಿಲಿಯನ್ ಜನರನ್ನು ಹೊಂದಿದೆ. ಅಲ್ಲಿ ನಮಗೆ ಅಪಾರ ಬೆಂಬಲವಿದೆ ಎಂದು ನೆತನ್ಯಾಹು ಹೇಳಿದ್ದಾರೆ.

ಕಳೆದ ತಿಂಗಳು ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಯುಎಸ್-ಇರಾನ್ ಶಾಂತಿ ಮಾತುಕತೆಗಳನ್ನು ಇಸ್ರೇಲ್ ಗೌರವಿಸಬೇಕು ಎಂದು ವ್ಯಾನ್ಸ್ ಹೇಳಿದ್ದರು.

ಅಮೆರಿಕ-ಇರಾನ್ ಒಪ್ಪಂದದ ಬಗ್ಗೆ ಇಸ್ರೇಲ್ ನಾಯಕರು ಅತೃಪ್ತರಾಗಿದ್ದಾರೆ ಮತ್ತು ಅಧ್ಯಕ್ಷ ಟ್ರಂಪ್ ಅವರನ್ನು ಟೀಕಿಸುತ್ತಿದ್ದಾರೆ ಎಂಬ ವರದಿಗಳ ಕುರಿತು ಪ್ರತಿಕ್ರಿಯಿಸಿದ ವ್ಯಾನ್ಸ್, ನಾನು ಇಸ್ರೇಲ್ ಸರ್ಕಾರದ ಸಂಪುಟದಲ್ಲಿದ್ದರೆ, ಇಡೀ ಜಗತ್ತಿನಲ್ಲಿ ಉಳಿದಿರುವ ಏಕೈಕ ಪ್ರಬಲ ಮಿತ್ರ ರಾಷ್ಟ್ರದ ಮೇಲೆ ದಾಳಿ ಮಾಡುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

ಫೇಸ್‌ಬುಕ್‌ನಲ್ಲಿ ಭಾರತದಿಂದ ಸಾಕಷ್ಟು ಬೆಂಬಲ ಪಡೆಯುತ್ತಿದ್ದೇನೆ. ನಿಮಗೆ ಗೊತ್ತಿದೆಯಾ, ನನಗೆ ಅಲ್ಲಿ ಅಗಾಧ ಬೆಂಬಲವಿದೆ ಎಂದು ನೆತನ್ಯಾಹು ಹೇಳಿದ್ದಾರೆ.

Netanyahu
'Boss ಯಾರು ಬಾಸ್ ಅಂತ ನೆತನ್ಯಾಹುಗೆ ಚೆನ್ನಾಗಿ ಗೊತ್ತಿದೆ'; ಇಸ್ರೇಲ್ ಪ್ರಧಾನಿಗೆ ಟ್ರಂಪ್ ಖಡಕ್ ಸಂದೇಶ, ಆಪ್ತರಿಂದಲೂ 'ಬಿಬಿ' ವಿರುದ್ಧ ಅಸಮಾಧಾನ..!

ಇಸ್ರೇಲ್‌ಗೆ ಬೇರೆ ಯಾವುದೇ ಮಿತ್ರರಾಷ್ಟ್ರಗಳಿಲ್ಲ ಎಂಬ ವ್ಯಾನ್ಸ್ ಹೇಳಿಕೆಯನ್ನು ಅವರು ತಳ್ಳಿಹಾಕಿದ್ದು, ನಮಗೆ ಅನೇಕ ಸ್ನೇಹಿತರಿದ್ದಾರೆ, ಇಸ್ರೇಲ್‌ನ ಉನ್ನತ ದರ್ಜೆಯ ಸೈಬರ್ ಭದ್ರತಾ ತಜ್ಞರಿಂದ ಸಹಾಯವನ್ನು ಬಯಸುವ ದೇಶಗಳಿವೆ ಎಂದು ನೆತನ್ಯಾಹು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com