'You're Crooked': ಪರ್ತಕರ್ತೆ ಕೇಳಿದ ಪ್ರಶ್ನೆಗೆ ಬೆಚ್ಚಿದ ಅಮೆರಿಕ ಅಧ್ಯಕ್ಷ, TV ಸಂದರ್ಶನ ಮೊಟಕುಗೊಳಿಸಿ, ಮಧ್ಯದಲ್ಲಿಯೇ ಹೊರನಡೆದ ಟ್ರಂಪ್! Video

ವಿಸ್ಕಾನ್ಸಿನ್‌ನಲ್ಲಿ ನಡೆದ ಚುನಾವಣೆಗಳ ಬಗ್ಗೆ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಕೋಪಗೊಂಡ ಟ್ರಂಪ್, ನಿಮ್ಮ ತಲೆ ಸರಿಯಿಲ್ಲ ಎಂದು ಹೇಳಿ ಸಂದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.
Donald Trump and Kristen Welker
ಡೊನಾಲ್ಡ್ ಟ್ರಂಪ್, ಪತ್ರಕರ್ತೆ ಕ್ರಿಸ್ಟನ್ ವೆಲ್ಕರ್
Updated on

ವಾಷಿಂಗ್ಟನ್: NBC ನ್ಯೂಸ್ ಚಾನೆಲ್ ಪತ್ರಕರ್ತೆ ಕ್ರಿಸ್ಟನ್ ವೆಲ್ಕರ್ ಕೇಳಿದ ಪ್ರಶ್ನೆಯಿಂದ ಕೋಪಗೊಂಡ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂಟರ್ವ್ಯೂ ಮಧ್ಯೆದಲ್ಲಿಯೇ ಹೊರ ನಡೆದಿದ್ದಾರೆ.

ವಿಸ್ಕಾನ್ಸಿನ್‌ನಲ್ಲಿ ನಡೆದ ಚುನಾವಣೆಗಳ ಬಗ್ಗೆ ಟ್ರಂಪ್ ಅವರ ಪುನರಾವರ್ತಿತ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಕೋಪಗೊಂಡ ಟ್ರಂಪ್, ನಿಮ್ಮ ತಲೆ ಸರಿಯಿಲ್ಲ ಎಂದು ಹೇಳಿ ಸಂದರ್ಶನವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿ ಹೊರ ನಡೆದಿದ್ದಾರೆ.

ಅಮೆರಿಕದಲ್ಲಿನ ಅಕ್ರಮ ಚುನಾವಣೆಗಳ ಬಗ್ಗೆ ಟ್ರಂಪ್ ಪದೇ ಪದೇ ಹೇಳಿದ ಹೇಳಿಕೆಗಳನ್ನು ವೆಲ್ಕರ್ ಪ್ರಶ್ನಿಸಿದ ನಂತರ ಮಾತಿನ ಚಕಮಕಿ ನಡೆದಿದೆ. ಪ್ರಮುಖ ಮಾಧ್ಯಮ ಸಂಸ್ಥೆಗಳ ಮೇಲೆ ಟ್ರಂಪ್ ಅವರ ನಿರಂತರ ದಾಳಿ ಹಾಗೂ ಪುರಾವೆಗಳ ಕೊರತೆ ನಡುವೆ ಅಮೆರಿಕದ ಚುನಾವಣೆಗಳು ದೋಷಪೂರಿತವಾಗಿವೆ ಎಂಬ ಹೇಳಿಕೆ ಕುರಿತು ಗಮನ ಸೆಳೆದಾಗ ಈ ಘಟನೆ ನಡೆದಿದೆ.

ಕ್ಯಾಲಿಫೋರ್ನಿಯಾದಂತಹ ರಾಜ್ಯಗಳಲ್ಲಿನ ಚುನಾವಣೆಗಳು ವಿಕೃತ"ವಾಗಿವೆ ಎಂಬ ಟ್ರಂಪ್ ಅವರ ಹೇಳಿಕೆಯನ್ನು ವೆಲ್ಕರ್ ತಳ್ಳಿಹಾಕಿದಾಗ ಸಂದರ್ಶನ ತಾರಕಕ್ಕೇರಿತು ಎಂದು ವರದಿಯಾಗಿದೆ. ಈ ಹೇಳಿಕೆಯನ್ನು ಬೆಂಬಲಿಸಲು ಅವರ ಬಳಿ ಪುರಾವೆಗಳಿವೆಯೇ ಎಂದು ಕೇಳಿದಾಗ, "ನಾನು ಮಾಡಬೇಕಾಗಿರುವುದು ನೋಡುವುದಷ್ಟೇ ಎಂದಿದ್ದಾರೆ.

Donald Trump and Kristen Welker
ನೆತನ್ಯಾಹು 'ಹುಚ್ಚ'; ಇರಾನ್ ಜೊತೆಗಿನ ಶಾಂತಿ ಮಾತುಕತೆ ಹಳ್ಳಹಿಡಿಸುತ್ತಿದ್ದಾರೆ: ಡೊನಾಲ್ಡ್ ಟ್ರಂಪ್

ನಂತರ ವೆಲ್ಕರ್ ನೋಡುವುದು "ಪುರಾವೆಯಲ್ಲ" ಎಂದು ಉತ್ತರಿಸಿದ್ದಾರೆ. ಇದರಿಂದ ಕೋಪಗೊಂಡ ಟ್ರಂಪ್ ಅರ್ಧದಲ್ಲಿಯೇ ಸಂದರ್ಶನ ಮೊಟಕುಗೊಳಿಸಿ ಹೊರ ನಡೆದಿದ್ದಾರೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com