‘Superhero grandma’: ಭಯಾನಕ ಭೂಕಂಪದ ನಡುವೆ ಮೊಮ್ಮಗನನ್ನು ಎದೆಯಲ್ಲಿ ಬಚ್ಚಿಟ್ಟು ರಕ್ಷಿಸಿದ ಅಜ್ಜಿ! Video ವೈರಲ್

ಭಯಾನಕ ಭೂಕಂಪ ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಗುವನ್ನು ರಕ್ಷಿಸಲು ವೃದ್ಧೆಯೊಬ್ಬರು ಮಾಡಿರುವ ಹೋರಾಟ ಈ ವಿಡಿಯೋದಲ್ಲಿದೆ.
‘Superhero grandma
ಮೊಮ್ಮಗನನ್ನು ಕಾಪಾಡಿದ ಅಜ್ಜಿ
Updated on

ಫಿಲಿಪೈನ್ಸ್: ದಕ್ಷಿಣ ಫಿಲಿಪೈನ್ಸ್ ನಲ್ಲಿ ಸೋಮವಾರ ಸಂಭವಿಸಿದ 7.8 ರಷ್ಟು ತೀವ್ರತೆಯ ಭೂಕಂಪದಲ್ಲಿ 32 ಜನರು ಸಾವನ್ನಪ್ಪಿದ್ದು, 200 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಭೂಕಂಪನ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಸುನಾಮಿ ಎಚ್ಚರಿಕೆ ನೀಡಲಾಗಿದೆ.

ಈ ನಡುವೆ ಭಯಾನಕ ಭೂಕಂಪ ತೋರಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಮಗುವನ್ನು ರಕ್ಷಿಸಲು ವೃದ್ಧೆಯೊಬ್ಬರು ಮಾಡಿರುವ ಹೋರಾಟ ಈ ವಿಡಿಯೋದಲ್ಲಿದೆ.

ವೈರಲ್ ಆಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಮಗು ಸೋಫಾ ಮೇಲೆ ಕುಳಿತಿರುವುದು ಕಂಡುಬರುತ್ತದೆ. ಹಠಾತ್ ಭೂಕಂಪದಿಂದ ಇಡೀ ಮನೆಯಲ್ಲಿ ಅಲುಗಾಡುತ್ತಿರುತ್ತದೆ. ಇದರಿಂದ ಭಯಭೀತಿಗೊಂಡ ಅಜ್ಜಿ, ಮೊಮ್ಮಗನನ್ನು ಎತ್ತಿಕೊಂಡು ಹೊರಗೆ ಹೋಗಲು ಯತ್ನಿಸುತ್ತಾರೆ.

ಆದರೆ, ಹೊರಗಡೆ ಹೋಗುವುದಕ್ಕೆ ಆಗಲ್ಲ. ಬಳಿಕ ಬಾಗಿಲ ಬಳಿಯೇ ಕುಳಿತುಕೊಂಡು ತನ್ನ ಮೊಮ್ಮಗನನನ್ನು ಎದೆಯಲ್ಲಿ ಬಚ್ಚಿಟ್ಟುಕೊಂಡು ಕಾಪಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ವೃದ್ಧ ಮಹಿಳೆ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.

"ಸೂಪರ್ ಹೀರೋ ಅಜ್ಜಿ ಮಗು ರಕ್ಷಿಸಲು ಒಂದು ಕ್ಷಣವೂ ಹಿಂಜರಿಯಲಿಲ್ಲ. ಕುಟುಂಬ ಅಂದ್ರೆ ಇದು ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ. ಅಜ್ಜಿ ನಿಜವಾದ ಹೀರೋ!! 7.8 ತೀವ್ರತೆಯ ಭಯಾನಕ ಭೂಕಂಪದ ಮಧ್ಯೆ ಬೇರೆ ರೀತಿಯ ಅಲೋಚನೆ ಮಾಡದೆ ತಮ್ಮ ಮೊಮ್ಮಗನನ್ನು ರಕ್ಷಿಸಿದ್ದಾರೆ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ. ಕುಟುಂಬ ಪ್ರೀತಿ ಯಾವುದೇ ಭೂಕಂಪಕ್ಕಿಂತ ಪ್ರಬಲವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಅಜ್ಜಿ ಮತ್ತು ಅವರ ಮೊಮ್ಮಗ ಸುರಕ್ಷಿತವಾಗಿದ್ದಾರೆ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

‘Superhero grandma
ಮಧ್ಯ ಫಿಲಿಪೈನ್ಸ್ ಪ್ರದೇಶದಲ್ಲಿ ಪ್ರಬಲ ಭೂಕಂಪ: ಮೃತರ ಸಂಖ್ಯೆ 69ಕ್ಕೆ ಏರಿಕೆ
‘Superhero grandma
Watch | ಫಿಲಿಪೈನ್ಸ್‌ನಲ್ಲಿ 7.8 ತೀವ್ರತೆಯ ಪ್ರಬಲ ಭೂಕಂಪ: ಸುನಾಮಿ ಎಚ್ಚರಿಕೆ

ಈ ಮಧ್ಯೆ ದಕ್ಷಿಣ ಕರಾವಳಿಯ ಕೆಲವು ಭಾಗಗಳಲ್ಲಿ ಸುನಾಮಿ ಅಲೆಗಳು ದಾಖಲಾಗಿವೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇಂಡೋನೇಷ್ಯಾ ಮತ್ತು ಮಲೇಷ್ಯಾ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿಯೂ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com