Where's Bibi? ಆರು ಬೆರಳುಗಳಿರುವ ನೆತನ್ಯಾಹು ವಿಡಿಯೋ! ನೆಟ್ಟಿಗರ ಕಳವಳ

ನೆತನ್ಯಾಹು ಹಂಚಿಕೊಂಡಿದ್ದ ವಿಡಿಯೋದಲ್ಲಿ ಅವರ ಬಲಗೈಯಲ್ಲಿ ಆರು ಬೆರಳುಗಳು ಇರುವಂತೆ ತೋರುತ್ತಿದೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ.
Benjamin Netanyahu
ಬೆಂಜಮಿನ್ ನೆತನ್ಯಾಹು
Updated on

ಜೆರುಸಲೆಂ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಇತ್ತೀಚಿನ ಮಾರ್ಚ್ 13 ರ ವೀಡಿಯೊದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಚರ್ಚೆಯಾಗುತ್ತಿದೆ. ಕಾರಣ ಈ ವಿಡಿಯೋದಲ್ಲಿ ನೆತನ್ಯಾಹು ಅವರ ಒಂದು ಕೈಯಲ್ಲಿ ಆರು ಬೆರಳುಗಳು ಇರುವಂತೆ ತೋರಿಸುತ್ತಿದೆ. AI ಬಳಸಿ ಈ ವಿಡಿಯೋ ಮಾಡಿರಬಹುದಾ? ಎಂಬ ಅನುಮಾನ ಹುಟ್ಟುಹಾಕಿದೆ.

ಶುಕ್ರವಾರ ಎಕ್ಸ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದ ನೆತನ್ಯಾಹು, ಇರಾನ್ ವಿರುದ್ಧ ಇಸ್ರೇಲ್ ಮತ್ತು ಯುಎಸ್ ಯುದ್ಧದ ಕುರಿತು ಮಾತನಾಡಿದ್ದರು. ಫೆಬ್ರವರಿ 28 ರಂದು ಸಂಘರ್ಷದ ಮೊದಲ ದಿನದಂದು, ಇರಾನ್‌ನ ಸರ್ವೋಚ್ಚ ನಾಯಕ ಅಯತಲ್ಲೋಹ್ ಅಲಿ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು.

ನೆತನ್ಯಾಹು ಹಂಚಿಕೊಂಡಿದ್ದ ವಿಡಿಯೋದಲ್ಲಿ ಅವರ ಬಲಗೈಯಲ್ಲಿ ಆರು ಬೆರಳುಗಳು ಇರುವಂತೆ ತೋರುತ್ತಿದೆ ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಹೇಳುತ್ತಿದ್ದಾರೆ.

'Classic AI finger glitch' and 'look closely at his hand'ಎಂಬ ಶೀರ್ಷಿಕೆಯಡಿ ಈ ವಿಡಿಯೋವನ್ನು AI ನಿಂದ ಎಡಿಟ್ ಮಾಡಲಾಗಿದೆಯೇ ಎಂದು ಪ್ರಶ್ನಿಸುವ ಪೋಸ್ಟ್‌ಗಳಿಗೆ ಲಕ್ಷಾಂತರ ವೀಕ್ಷಣೆಗಳು ಬಂದಿವೆ. ಅನೇಕ ಬಳಕೆದಾರರು, ನೆತನ್ಯಾಹು ಸತ್ತಿದ್ದಾರೆ ಎಂದು ಹೇಳಿದ್ದಾರೆ. ಅಂತಹ ಪೋಸ್ಟ್‌ಗಳ ಕುರಿತು X ನ AI ಚಾಟ್‌ಬಾಟ್ ಗ್ರೋಕ್‌ ಪರಿಶೀಲಿಸಿದ್ದು, ಸುಳ್ಳು ಎಂದು ಹೇಳಿದೆ.

Benjamin Netanyahu
Iran vs Israel: 'ಇರಾನ್ ದುರಾಡಳಿತ ಅಂತ್ಯಕ್ಕೆ ಮುಹೂರ್ತ ಫಿಕ್ಸ್', 'ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ': ಇಸ್ರೇಲ್ ಪ್ರಧಾನಿ ನೇತನ್ಯಾಹು!

ಅಮೆರಿಕದ ಕನ್ಸರ್ ವೇಟಿವ್ ಪೊಲಿಟಿಕಲ್ ಕಾಮೆಂಟರ್ ಕ್ಯಾಂಡೇಸ್ ಓವೆನ್ಸ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ "ಬೀಬಿ ಎಲ್ಲಿ?" ಎಂದು ಕೇಳಿದ್ದಾರೆ. ನೆತನ್ಯಾಹು ಅವರನ್ನು ಈ ಅಡ್ಡಹೆಸರಿನಿಂದ ಕರೆಯಲಾಗುತ್ತದೆ. ಇಸ್ರೇಲ್ ಪ್ರಧಾನಿ ಕಾರ್ಯಾಲಯ ನಕಲಿ AI ವೀಡಿಯೊಗಳನ್ನು ಯಾಕೆ ಬಿಡುಗಡೆ ಮಾಡಿ, ಡಿಲೀಟ್ ಮಾಡುತ್ತಿದೆ. ಶ್ವೇತಭವನದಲ್ಲಿ ಯಾಕೆ ಆತಂಕವಿದೆ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com