'ಈಗಾಗಲೇ ತೆರೆದಿದ್ದ ಹಾರ್ಮುಜ್ ಜಲಸಂಧಿ ತೆರೆಯಲು ಯುದ್ಧ': ಇಸ್ರೇಲ್-ಅಮೆರಿಕ ಅಣಕಿಸಿದ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್

ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಮಧ್ಯಪ್ರಾಚ್ಯ ಯುದ್ಧದಿಂದ ಸಂಕಷ್ಟಕ್ಕೆ ಸಿಲುಕಿದೆ.
Pakistan's Defence Minister Khawaja Asif
ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್
Updated on

ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಸಂಘರ್ಷವನ್ನು ಶಮನಗೊಳಿಸಲು ಸಂಧಾನಕಾರನಾಗಿ ಇಸ್ಲಾಮಾಬಾದ್ ತನ್ನನ್ನು ತಾನು ಬಿಂಬಿಸಿಕೊಳ್ಳಲು ಕೆಲಸ ಮಾಡುತ್ತಿರುವಾಗ, ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಇರಾನ್‌ನಲ್ಲಿ ಅಮೆರಿಕದ ಯುದ್ಧ ತಂತ್ರವನ್ನು ಅಪಹಾಸ್ಯ ಮಾಡಿದ್ದಾರೆ.

ಜಾಗತಿಕ ಇಂಧನ ಪೂರೈಕೆ ಸರಪಳಿಗೆ ಅಡ್ಡಿಪಡಿಸಿರುವ ಸಂಘರ್ಷದ ವಾಷಿಂಗ್ಟನ್‌ನ ಬದಲಾಗುತ್ತಿರುವ ಉದ್ದೇಶಗಳನ್ನು ಪ್ರಶ್ನಿಸಿದ್ದಾರೆ. ಯುದ್ಧಕ್ಕೂ ಮೊದಲು ಈಗಾಗಲೇ ತೆರೆದಿದ್ದ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವತ್ತ ಅಮೆರಿಕ-ಇಸ್ರೇಲ್ ದೇಶಗಳ ಗಮನ ಸಾಗಿದೆ ಎಂದು ಲೇವಡಿ ಮಾಡಿದರು.

'ಯುದ್ಧಕ್ಕೂ ಮೊದಲೇ ತೆರೆದಿದ್ದ ಹಾರ್ಮುಜ್ ಜಲಸಂಧಿಯನ್ನು ತೆರೆಯುವತ್ತ ಯುದ್ಧದ ಗುರಿ ಬದಲಾಗಿದೆ ಎಂದು ತೋರುತ್ತದೆ' ಎಂದು ಅವರು X ನಲ್ಲಿನ ಪೋಸ್ಟ್‌ನಲ್ಲಿ ಬರೆದಿದ್ದಾರೆ.

ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾಗಣೆ ಮಾರ್ಗಗಳಲ್ಲಿ ಒಂದಾದ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಮಧ್ಯಪ್ರಾಚ್ಯ ಯುದ್ಧದಿಂದ ವಾಸ್ತವವಾಗಿ ಸಂಕಷ್ಟಕ್ಕೆ ಸಿಲುಕಿದೆ. ಜಾಗತಿಕ ಕಚ್ಚಾ ತೈಲ ಮತ್ತು ದ್ರವೀಕೃತ ನೈಸರ್ಗಿಕ ಅನಿಲದ ಸುಮಾರು ಐದನೇ ಒಂದು ಭಾಗವು ಈ ಜಲಮಾರ್ಗದ ಮೂಲಕವೇ ಹಾದುಹೋಗುತ್ತದೆ.

Pakistan's Defence Minister Khawaja Asif
West Asia Conflict: ಅಮೆರಿಕದ 15 ಅಂಶಗಳ ಕದನ ವಿರಾಮ ಪ್ರಸ್ತಾವನೆಯನ್ನು ಇರಾನ್‌ ಸ್ವೀಕರಿಸಿದೆ- ಪಾಕಿಸ್ತಾನ

ಶೇ 95 ರಷ್ಟು ಸಾಗಾಟ ಕಡಿತ

ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ಬಾಂಬ್ ದಾಳಿ ಮಾಡಿದ ನಂತರ ಪ್ರಾರಂಭವಾದ ಈ ಯುದ್ಧವು, ಟೆಹ್ರಾನ್ ಈ ಜಲಸಂಧಿಯಲ್ಲಿ ಹಡಗುಗಳ ಪ್ರವೇಶವನ್ನು ತೀವ್ರವಾಗಿ ನಿರ್ಬಂಧಿಸಲು ಪ್ರೇರೇಪಿಸಿತು. ಇದು ನಿರ್ಣಾಯಕ ಜಲಮಾರ್ಗಗಳ ಮೂಲಕ ದೈನಂದಿನ ಇಂಧನ ಸಾಗಣೆಯಲ್ಲಿ ಶೇ 95ರಷ್ಟು ಕುಸಿತಕ್ಕೆ ಕಾರಣವಾಯಿತು.

ಯುದ್ಧ ಕೊನೆಗೊಳಿಸಲು ಯೋಜನೆ

ಇರಾನ್ ಬುಧವಾರ ಯುದ್ಧವನ್ನು ವಿರಾಮಗೊಳಿಸುವ ಅಮೆರಿಕದ ಯೋಜನೆಯನ್ನು ತಿರಸ್ಕರಿಸಿತು. ಬದಲಿಗೆ ತನ್ನದೇ ಆದ ಪ್ರತಿ-ಪ್ರಸ್ತಾಪವನ್ನು ನೀಡಿತು. ಅಲ್ಲದೆ, ಇಸ್ರೇಲ್ ಮತ್ತು ಗಲ್ಫ್ ಅರಬ್ ರಾಷ್ಟ್ರಗಳ ಮೇಲೆ ಹೆಚ್ಚಿನ ದಾಳಿಗಳನ್ನು ಪ್ರಾರಂಭಿಸಿದೆ.

Pakistan's Defence Minister Khawaja Asif
ಯುದ್ಧ ನಮಗೆ ಬೇಕಾದಾಗ ನಿಲ್ಲಿಸ್ತೀವಿ; ನಿಮಗೆ ಬೇಕಿದ್ದರೆ 5 ಷರತ್ತುಗಳಿಗೆ ಒಪ್ಪಿ- ಅಮೆರಿಕಾಗೆ ಇರಾನ್ ಖಡಕ್ ಸಂದೇಶ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ದಾಳಿಗೆ ತಾತ್ಕಾಲಿಕ ವಿರಾಮ ಘೋಷಿಸಿ, ಮಾತುಕತೆಗೆ ಟೆಹ್ರಾನ್‌ಗೆ ಕರೆ ನೀಡಿದ್ದಾರೆ. ಯುದ್ಧ ವಿರಾಮ ಘೋಷಿಸಲು ಮತ್ತು ಸಂಘರ್ಷವನ್ನು ಕಡಿಮೆ ಮಾಡಲು ಅಮೆರಿಕ ಇರಾನ್‌ಗೆ 15 ಅಂಶಗಳ ಪ್ರಸ್ತಾವನೆಯನ್ನು ಕಳುಹಿಸಿದೆ ಎಂದು ವರದಿಯಾಗಿದೆ.

ನಿರ್ಬಂಧಗಳ ಪರಿಹಾರ, ನಾಗರಿಕ ಪರಮಾಣು ಸಹಕಾರ, ಇರಾನ್‌ನ ಪರಮಾಣು ಕಾರ್ಯಕ್ರಮದ ಹಿಂತೆಗೆದುಕೊಳ್ಳುವಿಕೆ, ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ ಮೇಲ್ವಿಚಾರಣೆ, ಕ್ಷಿಪಣಿ ಮಿತಿಗಳು ಮತ್ತು ಪರ್ಷಿಯನ್ ಕೊಲ್ಲಿಯ ಹಾರ್ಮುಜ್ ಜಲಸಂಧಿಯ ಮೂಲಕ ಹಡಗು ಸಾಗಣೆಗೆ ಪ್ರವೇಶ ಮುಕ್ತಗೊಳಿಸುವ ಪ್ರಸ್ತಾವನೆಯನ್ನು ಪಾಕಿಸ್ತಾನಿ ಅಧಿಕಾರಿಗಳು ವಿವರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com