ನೂತನ ಪ್ರಧಾನಿಯಾಗಿ ನೇಪಾಳಿ ರ‍್ಯಾಪರ್ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ

ಇತ್ತೀಚೆಗೆ ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ ಎಸ್‌ ಪಿ ಪಕ್ಷವು ಒಟ್ಟು 275 ಸ್ಥಾನಗಳಲ್ಲಿ 182ರಲ್ಲಿ ಭರ್ಜರಿ ಗೆಲುವು ಸಾಧಿಸಿ ಬಹುಮತ ಪಡೆದಿತ್ತು. ನೇಪಾಳದಲ್ಲಿ ಈ ಹಿಂದಿನ ಸರ್ಕಾರಗಳ ಭ್ರಷ್ಟಾಚಾರವನ್ನು ವಿರೋಧಿಸಿ ಜೆನ್‌ ಝಿ ಹೋರಾಟ ನಡೆಸಿತ್ತು.
Balendra Shah
ಬಾಲೇಂದ್ರ ಶಾ
Updated on

ಕಠ್ಮಂಡು: ನೇಪಾಳ ಸಾರ್ವತ್ರಿಕ ಚುನಾವಣೆಯಲ್ಲಿ ರಾಷ್ಟ್ರೀಯ ಸ್ವತಂತ್ರ ಪಕ್ಷ (ಆರ್‌ ಎಸ್‌ ಪಿ) ಭರ್ಜರಿ ಜಯಭೇರಿ ಗಳಿಸಿದ ನಂತರ ಶುಕ್ರವಾರ (ಮಾ.27) ಬಾಲೇಂದ್ರ ಶಾ ನೇಪಾಳದ ಅತ್ಯಂತ ಕಿರಿಯ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಗುರುವಾರ ಬಾಲೇಂದ್ರ ಶಾ ಅವರನ್ನು ರಾಷ್ಟ್ರೀಯ ಸ್ವತಂತ್ರ ಪಕ್ಷವು ತನ್ನ ಸಂಸದೀಯ ಪಕ್ಷದ ನಾಯಕನನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಿತ್ತು. ಪಕ್ಷದ ಅಧ್ಯಕ್ಷೆ ರಬಿ ಲಮಿಚಾನೆ ಅವರು ಈ ಹುದ್ದೆಗೆ ಶಾ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಸರ್ವಾನುಮತದ ಅನುಮೋದನೆ ದೊರಕಿತ್ತು.

ಇತ್ತೀಚೆಗೆ ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಆರ್‌ ಎಸ್‌ ಪಿ ಪಕ್ಷವು ಒಟ್ಟು 275 ಸ್ಥಾನಗಳಲ್ಲಿ 182ರಲ್ಲಿ ಭರ್ಜರಿ ಗೆಲುವು ಸಾಧಿಸಿ ಬಹುಮತ ಪಡೆದಿತ್ತು. ನೇಪಾಳದಲ್ಲಿ ಈ ಹಿಂದಿನ ಸರ್ಕಾರಗಳ ಭ್ರಷ್ಟಾಚಾರವನ್ನು ವಿರೋಧಿಸಿ ಜೆನ್‌ ಝಿ ಹೋರಾಟ ನಡೆಸಿತ್ತು.

ಚುನಾವಣೆಯಲ್ಲಿ ಶಾ ಅಲಿಯಾಸ್‌ ಬಾಲೇನ್‌ ನಾಲ್ಕು ಬಾರಿ ಪ್ರಧಾನಿಯಾಗಿದ್ದ ಕೆಪಿ ಶರ್ಮಾ ಒಲಿ ಅವರನ್ನು ಪರಾಜಯಗೊಳಿಸಿ ಗೆಲುವು ಸಾಧಿಸಿದ್ದರು. ನೇಪಾಳ ಚುನಾವಣೆಯಲ್ಲಿ ಆರ್‌ ಎಸ್‌ ಪಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿತ್ತು.

Balendra Shah
ನೇಪಾಳ ಚುನಾವಣೆ: ಪ್ರಚಂಡ ಗೆಲುವಿನತ್ತ RSP; ಬೆಂಗಳೂರಿನಲ್ಲಿ ಪದವಿ ಪಡೆದಿದ್ದ ಬಲೇನ್ ಶಾ; 35ನೇ ವಯಸ್ಸಿಗೆ ಪ್ರಧಾನಿ ಪಟ್ಟ!

ಕಳೆದ ವರ್ಷ ಭ್ರಷ್ಟಾಚಾರದ ವಿರುದ್ಧ ಯುವಕರು ನಡೆಸಿದ ದಂಗೆಯನ್ನು ನಿಯಂತ್ರಿಸಲಾಗದೆ, ನೇಪಾಳ ಸರ್ಕಾರವು ಪತನಗೊಂಡಿತ್ತು. ಅದಾದ ಬಳಿಕ ನಡೆದ ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಸೋಲಿಸಿರುವ ಬಾಲೇಂದ್ರ ಶಾ ಅವರು ಇಂದು (ಮಾರ್ಚ್27) ನೇಪಾಳದ ನೂತನ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಬಾಲೇಂದ್ರ ಶಾ ಎಂಬ ಹೆಸರಿನವನಾದ ನಾನು, ದೇಶ ಮತ್ತು ಜನರ ಹೆಸರಿನಲ್ಲಿ, ಸಂವಿಧಾನಕ್ಕೆ ನಿಷ್ಠನಾಗಿರುತ್ತೇನೆ ಮತ್ತು ಪ್ರಧಾನ ಮಂತ್ರಿಯಾಗಿ ನನ್ನ ಕರ್ತವ್ಯಗಳನ್ನು ಪೂರೈಸುತ್ತೇನೆ ಎಂದು ಪ್ರತಿಜ್ಞೆ ಮಾಡುತ್ತೇನೆ ಎಂಬುದಾಗಿ ಅಧಿಕಾರ ಸ್ವೀಕರಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com