ಅಮೆರಿಕ: ಫ್ಲೋರಿಡಾ ವಿಮಾನ ನಿಲ್ದಾಣಕ್ಕೆ ಟ್ರಂಪ್ ಹೆಸರು ಮರು ನಾಮಕರಣ!

ಡೊನಾಲ್ಡ್ ಜೆ ಟ್ರಂಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೆಸರು ಬದಲಾವಣೆ ಜುಲೈ 1 ರಂದು ಜಾರಿಗೆ ಬರಲಿದೆ ಎಂದು ಸಿಬಿಎಸ್ ನ್ಯೂಸ್ ತಿಳಿಸಿದೆ.
Casual Images
ಸಾಂದರ್ಭಿಕ ಚಿತ್ರ
Updated on

ಪ್ಲೋರಿಡಾ: ಅಮೆರಿಕದ ಪ್ಲೋರಿಡಾದ ಪಾಮ್ ಬೀಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೆಸರು ಬದಲಾವಣೆ ಮಾಡಲಾಗುತ್ತಿದೆ.

ಇನ್ಮುಂದೆ ಅದಕ್ಕೆ "ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ" ಎಂದು ಮರುನಾಮಕರಣ ಮಾಡಲಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಮತ್ತು ಉದ್ಯಮಿ ಎರಿಕ್ ಟ್ರಂಪ್ ಪ್ರಕಟಿಸಿದ್ದಾರೆ.

ಪಾಮ್ ಬೀಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೆಸರು ಮರು ನಾಮಕರಣ ಮಾಡುವ ಮಸೂದೆಗೆ ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ಸಹಿ ಹಾಕಿದ್ದಾರೆ ಎಂದು ಸಿಬಿಎಸ್ ನ್ಯೂಸ್ ವರದಿ ಮಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಎರಿಕ್ ಟ್ರಂಪ್ ಮಾಹಿತಿ ಹಂಚಿಕೊಂಡಿದ್ದು, ಪಾಮ್ ಬೀಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಈಗ ಡೊನಾಲ್ಡ್ ಜೆ. ಟ್ರಂಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಅಧಿಕೃತವಾಗಿದೆ.

ಇದನ್ನು ಮಾಡುವಲ್ಲಿ ಸಣ್ಣ ಪಾತ್ರ ವಹಿಸಿದ್ದಕ್ಕಾಗಿ ಹೆಮ್ಮೆಪಡುತ್ತೇನೆ. ಪ್ಲೋರಿಡಾ ಹೌಸ್ ಡಿಸ್ಟ್ರಿಕ್ 94 ರ ಪ್ರತಿನಿಧಿ ಮೆಗ್ ವೈನ್ಬರ್ಗರ್ , ಫ್ಲೋರಿಡಾದ ಗವರ್ನರ್ ರಾನ್ ಡಿಸಾಂಟಿಸ್, ಫ್ಲೋರಿಡಾದ ಅಟಾರ್ನಿ ಜನರಲ್ ಗೆ ತುಂಬಾ ಹೃದಯದ ಧನ್ಯವಾದಗಳು ಎಂದಿದ್ದಾರೆ.

Casual Images
Iran war ending? ಒಂದು ಕಡೆ ಶಾಂತಿ ಮಾತುಕತೆ, ಮತ್ತೊಂದೆಡೆ 'ಬಿಗ್ ಟಾರ್ಗೆಟ್' ಎಂದ ಡೊನಾಲ್ಡ್ ಟ್ರಂಪ್! ಏನಿದು ವಿಚಿತ್ರ ನಡೆ?

ಡೊನಾಲ್ಡ್ ಜೆ ಟ್ರಂಪ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೆಸರು ಬದಲಾವಣೆ ಜುಲೈ 1 ರಂದು ಜಾರಿಗೆ ಬರಲಿದೆ ಎಂದು ಸಿಬಿಎಸ್ ನ್ಯೂಸ್ ತಿಳಿಸಿದೆ. ಆದಾಗ್ಯೂ ವಿಮಾನ ನಿಲ್ದಾಣದ ಹೆಸರು ಬದಲಾವಣೆಗೆ ಅನುಮೋದಿಸುವುದಿಲ್ಲ ಎಂದು ಫೆಡರಲ್ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್ ಹೇಳಿಕೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com