

ಯೆಮೆನ್‌ನ ಇರಾನ್ ಬೆಂಬಲಿತ ಹೌತಿ ಬಂಡುಕೋರರು ಸೌದಿ ಅರೇಬಿಯಾದ ನಾಗರಿಕ ಹಾಗೂ ಸಾರಿಗೆ ಮೂಲಸೌಕರ್ಯಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ತೀವ್ರಗೊಳಿಸಿರುವ ಹಿನ್ನೆಲೆಯಲ್ಲಿ, ಸೌದಿ ಕ್ರೌನ್ ಪ್ರಿನ್ಸ್ ಮತ್ತು ಪ್ರಧಾನಿ ಮೊಹಮ್ಮದ್ ಬಿನ್ ಸಲ್ಮಾನ್ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಅಮೆರಿಕದ ಪ್ರಸಿದ್ಧ ಪತ್ರಿಕೆ ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯ ಪ್ರಕಾರ, ಸಂಭಾವ್ಯ ದಾಳಿಗಳ ಮುನ್ನೆಚ್ಚರಿಕೆಯಾಗಿ 41 ವರ್ಷದ ಕ್ರೌನ್ ಪ್ರಿನ್ಸ್ ಅವರನ್ನು ಭೂಗತ ಬಂಕರ್‌ಗಳನ್ನು ಹೊಂದಿರುವ ಅತ್ಯಂತ ಭದ್ರತೆಯುಳ್ಳ ಅರಮನೆಗಳ ನಡುವೆ ನಿರಂತರವಾಗಿ ಸ್ಥಳಾಂತರಿಸಲಾಗುತ್ತಿದೆ.
ರಾಷ್ಟ್ರೀಯ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ರಕ್ತದಾನ ಮಾಡಿದ ಬಳಿಕ ಕ್ರೌನ್ ಪ್ರಿನ್ಸ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಭದ್ರತಾ ಬೆದರಿಕೆಗಳು ಹೆಚ್ಚಾಗಿರುವುದರಿಂದ ಅತ್ಯಂತ ವಿಶ್ವಾಸಾರ್ಹ ಮತ್ತು ವಿಶೇಷವಾಗಿ ಆಯ್ಕೆ ಮಾಡಲಾದ ಭದ್ರತಾ ಸಿಬ್ಬಂದಿಯ ಕಾವಲಿನಲ್ಲಿ ಅವರನ್ನು ರಹಸ್ಯ ಸ್ಥಳಗಳಲ್ಲಿ ಇರಿಸಲಾಗಿದೆ.
ಹೌತಿಗಳ ಕ್ಷಿಪಣಿ ದಾಳಿಯನ್ನು ಹೊಡೆದುರುಳಿಸುವ ‘ಇಂಟರ್‌ಸೆಪ್ಟರ್ ಕ್ಷಿಪಣಿ’ಗಳ ಕೊರತೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ, ಸೌದಿ ವಾಯುಪಡೆಯು ತನ್ನ ಪ್ರಮುಖ ಏರ್ ಡಿಫೆನ್ಸ್ ಬ್ಯಾಟರಿಗಳನ್ನು ರಾಜಮನೆತನದ ಅರಮನೆಗಳು ಮತ್ತು ಪ್ರಮುಖ ಇಂಧನ ಘಟಕಗಳ ರಕ್ಷಣೆಗೆ ಮರುನಿಯೋಜಿಸಿದೆ ಎಂದು ತಿಳಿದುಬಂದಿದೆ.
ರಕ್ತದಾನ ಮಾಡಿದ ನಂತರ 41 ವರ್ಷದ ಯುವರಾಜರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. 'ವಾಲ್ ಸ್ಟ್ರೀಟ್ ಜರ್ನಲ್' ವರದಿ ಮಾಡಿರುವಂತೆ, ಅವರನ್ನು ಬಿಗಿ ಭದ್ರತೆ ಮತ್ತು ಸುರಕ್ಷಿತ ಬಂಕರ್‌ಗಳನ್ನು ಹೊಂದಿರುವ ಅರಮನೆಗಳ ನಡುವೆ ಸ್ಥಳಾಂತರಿಸಲಾಗುತ್ತಿದೆ.
ಸೌದಿ ಅರೇಬಿಯಾ ಮತ್ತು ಯೆಮೆನ್‌ನ ಹೌತಿ ಬಂಡುಕೋರರ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದು, ಭದ್ರತಾ ಬೆದರಿಕೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ವಿಶೇಷವಾಗಿ ಆಯ್ಕೆ ಮಾಡಲಾದ ಭದ್ರತಾ ತಂಡವೊಂದು ಅವರಿಗೆ ರಕ್ಷಣೆ ನೀಡುತ್ತಿದೆ.
ವಾರಾಂತ್ಯದಲ್ಲಿ ರಾಜಧಾನಿಯ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಹೌತಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 13 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರಲ್ಲಿ 28 ವರ್ಷದ ಈಜಿಪ್ಟ್‌ನ ಗಗನಸಖಿ ಸೇರಿದಂತೆ ಹಲವರು ಕೈಕಾಲು ಕಳೆದುಕೊಂಡು ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.