

ಮೈ ತುಂಬಾ ಕೊಳಕು. ಚಿಂದಿ- ಚಿಂದಿ ಬಟ್ಟೆ ಧರಿಸಿದ ಜನ. ಮಾತು- ಮಾತಿಗೂ ಅರ್ಥವೇ ಇಲ್ಲದ ಗೊಣಗಾಟ. ಹತ್ತಿರ ಹೋಗಲು ಹಿಂಜರಿಯುವ ಮಂದಿ. ಆದರೂ ಅದರ ಮಧ್ಯೆಯ ನೂರಾರು ಕನಸುಗಳನು ಹೊತ್ತ ಕಂಗಳು...
ಇದೆಲ್ಲವೂ ಕಂಡುಬಂದಿದ್ದು ಕಾರ್ಕಳ ತಾಲೂಕಿನ ಗಂಡಿಬಾಗಿಲಿನಲ್ಲಿರುವ ಸಿಯೋನ್ ಆಶ್ರಮದಲ್ಲಿ. ಇಲ್ಲಿ ಮನೋರೋಗಿಗಳಿಗೆ, ವಿವಿಧ ರೀತಿಯ ದೈಹಿಕ ಅಸ್ವಸ್ಥರಿಗೆ, ಅನಾಥರಿಗೆ, ಸಮಾಜದಿಂದ ತಿರಸ್ಕರಿಸಲ್ಪಟ್ಟವರಿಗೆ ಆಶ್ರಯ ನೀಡಲಾಗುತ್ತದೆ. ಸಾವಿರಾರು ಜನರಿಗೆ ಬದುಕನು ಕಟ್ಟಿ ಕೊಡುವ ದಿಟ್ಟ ಹೆಜ್ಜೆ ಇಟ್ಟಿದೆ ಈ ಆಶ್ರಮ. ನೊಂದವರ ನೋವಿಗೆ ಸಾಂತ್ವನ ಹೇಳಿ, ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಿದೆ.
ಸಿಯೋನ್ ಸಂಸ್ಥೆಯಿಂದ ಸಾವಿರಾರು ಜನರು ವಿವಿಧ ರೀತಿಯ ಸಮಸ್ಯೆ ಹಾಗೂ ಕಾಯಿಲೆಗಳಿಂದ ಗುಣಮುಖರಾಗಿ ತಮ್ಮ- ತಮ್ಮ ಮನೆ ಮತ್ತು ಮನಗಳ ಗೂಡು ಸೇರಿದ್ದಾರೆ.
ನಿಸ್ವಾರ್ಥ ಭಾವದಿಂದ ಸೇವೆ ಮಾಡುತ್ತಿರುವ ಈ ಸಂಸ್ಥೆಯಲ್ಲಿ, ಕಲೆಗೂ ಕೂಡ ಪ್ರೋತ್ಸಾಹವಿದೆ. ಇಲ್ಲಿರುವ ಬಹುತೇಕರು ಬಿಡುವಿನ ವೇಳೆಯನು ಕರಕುಶಲ ವಸ್ತುಗಳ ತಯಾರಿಕೆಗೆ ಮೀಸಲಿಡುತ್ತಾರೆ. ಅದೇ ರೀತಿ ಇಲ್ಲಿ ಚಿಕಿತ್ಸೆ ಪಡೆದು ಅಲ್ಲಿಯೇ ಸೇವೆ ಮಾಡುತ್ತಿದ್ದಾರೆ.
ಸಿಯೋನ್ ಆಶ್ರಮ ಸ್ಥಾಪಿಸಿದರ ಹಿಂದೆ ಒಂದು ಚಿಕ್ಕ ಕಥೆ ಇದೆ. ಈ ಸಂಸ್ಥೆಯ ರೂವಾರಿ ಯು.ಸಿ ಪೌಲಸ್ ರೇಲ್ವೆ ನಿಲ್ದಾಣದಲ್ಲಿ ಒಂದು ದಿನ ರೈಲಿಗೆ ಕಾಯುತ್ತಿದ್ದರು. ಈ ವೇಳೆ ಎಸೆದ ಆಹಾರದ ಪೊಟ್ಟಣಕ್ಕಾಗಿ ಪ್ರಾಣಿಗಳು, ಮನುಷ್ಯರು ಕಿತ್ತಾಡುವುದನು ಕಂಡರು. ಭವಿಷ್ಯದಲ್ಲಿ ಈ ಪರಿಸ್ಥಿತಿ ನನಗೂ, ನನ ಹೆಂಡತಿ ಮಕ್ಕಳಿಗೂ ಬರಬಹುದೆಂಬ ಯೋಚನೆ ಒಂದು ಬಾರಿ ಮನಪಟಲದಲ್ಲಿ ಹಾದು ಹೋಯಿತಂತೆ. ಆ ಘಟನೆಯೇ ಸಿಯೋನ್ ಆಶ್ರಮ ತೆಲೆ ಎತ್ತಿ ಸಮಾಜಮುಖಿ ಕಾರ್ಯವನು ನಡೆಸಲು ಕಾರಣವಾದದ್ದು.
1999ರಲ್ಲಿ ಮನೆಯಲ್ಲೇ ಒಬ್ಬ ಮಾನಸಿಕ ಅಸ್ವಸ್ಥನಿಗೆ ಶುಶ್ರೂಷೆ ನೀಡುವುದರ ಮೂಲಕ ಸಿಯೋನ್ ಅನು ಪ್ರಾರಂಭಿಸಲಾಯಿತು. ಆದರೆ ಅದೇ ಸಂಸ್ಥೆಯಲ್ಲಿ ಇದೀಗ ಸುಮಾರು 350ಕ್ಕೂ ಮಿಕ್ಕಿದ ರೋಗಿಗಳು ಶುಶ್ರೂಷೆ ಪಡೆಯುತ್ತಿದ್ದಾರೆ. ರೋಗಿಗಳನು ಮನೆಯ ಸದಸ್ಯರಂತೆ ನೋಡಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ, ಇಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದವರು ಮತ್ತೆ ಮನೆಯ ಪ್ರೀತಿ ಸಿಗದೆ ಆಶ್ರಮಕ್ಕೆ ಮರಳಿದ್ದಾರೆ.
ಇದರ ಸಂಸ್ಥಾಪಕ ಯು.ಸಿ. ಪೌಲುಸ್ ಒಬ್ಬ ಕೃಷಿಕ. ಇವರಿಗೆ 'ಇಂಡಿಪೆಂಡೆನ್ಸ್ ಡೆ', 'ಮದರ್ ತೆರೆಸಾ ಪ್ರೇರಣಾ', 'ಡಿಸೇಬಲ್ ಡೇ', 'ಹಿಂದು ರತ', 'ರಾಜ್ಯೋತ್ಸವ' ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ ಪ್ರಶಸ್ತಿ ಪ್ರಾಪ್ತವಾಗಿದೆ. ಈ ಆಶ್ರಮಕ್ಕೆ ದಿನಕ್ಕೆ 1.20 ಲಕ್ಷ ಹಾಗೂ ವರ್ಷಕ್ಕೆ 4 ಕೋಟಿ ಖರ್ಚಿದ್ದರೂ ಯಾವುದೇ ಕುಂದು ಕೊರತೆ ಇಲ್ಲದೆ ರೋಗಿಗಳನು ನೋಡಿಕೊಳ್ಳಲಾಗುತ್ತಿದೆ.
ವೃದ್ಧರ ಪಾಲಿಗೆ ಇದು ದೇಗುಲ. ಅನಾಥರಿಗೆ ಇದೊಂದು ಮನೆ.
- ಶ್ರುತಿ ಜೈನ್ ರೆಂಜಾಳ