ಆಯಸ್‌ಕಾಂತ

ಆಯಸ್‌ಕಾಂತ
Updated on: 

ಈ ನಾಲ್ಕು ವರ್ಷದ ಪೋರಿಯ ಕೈಚಳಕ ತೋರುತ್ತಿದ್ದರೆ ಎದುಗಿರುವ ಎಲ್ಲರೂ 'ಕಣ್ಕಟ್‌' ಬಾಯ್ಕಟ್..
ಅಂಗನವಾಡಿಗೆ ಕಾಲಿಟ್ಟಿರುವ ಈ ಪೋರಿ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಗುಳೇದಗುಡ್ಡದ ಜೀನಿಯಸ್ ಪುಟಾಣಿ ಶ್ರೀಯಾ ಚಂದ್ರಕಾಂತ ಉದ್ನೂರ.  ಜಾದೂ ಕಲೆಯ ಕರಗತ ಮಾಡಿಕೊಳ್ಳುತ್ತಿರುವ ಅತಿ ಪುಟ್ಟ ಬಾಲೆ ಎಂಬ ಹೆಗ್ಗಳಿಕೆಯ ಶ್ರೀಯಾ, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವ ನಾಣ್ಣುಡಿಯ ಕೀರ್ತಿ ಹೆಚ್ಚಿಸಿದ್ದಾಳೆ. ಗುಳೇದಗುಡ್ಡದ ಅನೇಕ ಕಾರ್ಯಕ್ರಮಗಳಲ್ಲಿ, ಪಕ್ಕದ ಮಹಾರಾಷ್ಟ್ರ ಹಾಗೂ ನಮ್ಮ ರಾಜಧಾನಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರಗಳಲ್ಲಿ ಜಾದೂ ಮಾಡಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದ್ದಾಳೆ. ಮ್ಯಾಜಿಕ್ ಜೊತೆಯಲಿ ಹಾಡುವುದು, ಕುಣಿಯುವುದರಲ್ಲೂ ಎತ್ತಿದ ಕೈ ಈಕೆ.
ಸಕಲ ತಂತ್ರ ಗೊತ್ತು...
ಇಷ್ಟೆಲ್ಲ ಪ್ರತಿಭೆಯ ಈ ಪುಟಾಣಿ ನೇಕಾರರ ಬಡ ಕುಟುಂಬದಲ್ಲಿ ಬೆಳೆದವಳು. ಚಿಕ್ಕಪ್ಪ ಶಿವಾನಂದ ಉದ್ನೂರ ಮಾಡುವ ಜಾದೂ ಕಲೆಗಳನ್ನು ಒಂದೊಂದಾಗಿ ಕರಗತ ಮಾಡಿಕೊಂಡು ಮನೆಯವರ ಮುಂದೆ ಪ್ರದರ್ಶಿಸತೊಡಗಿದಳು. ಖಾಲಿ ಡಬ್ಬಿಯಲ್ಲಿ ನಾಣ್ಯ ಬರಿಸುವುದು, ಹಗ್ಗದ ಜಾದೂ, ಫ್ಲವರ್ ಟ್ರಿಕ್, ಗ್ಲಾಸ್‌ನಲ್ಲಿ ನೀರು ಮಾಯ ಮಾಡುವ ತಂತ್ರಗಳನ್ನು ಈಕೆ ಕರಗತ ಮಾಡಿಕೊಂಡಿದ್ದಾಳೆ. ಈಕೆಯ ಜಾದೂವನ್ನು ಕಣ್ಣು ಮಿಟುಕಿಸದೆ ನೋಡಬಲ್ಲಿರಿ, ಅಷ್ಟು ನಾಜೂಕಾಗಿ, ಮೈ ಬಳುಕಿಸಿ, ವೈಯ್ಯಾರದಿಂದ ನಿಮ್ಮ ಗಮನ ಸೆಳೆಯುತ್ತಾಳೆ. ಪುಟಾಣಿ ಪಂಟಿಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೀರಲ್ಲವೇ?

= ಪಿ.ಆರ್. ಸೊನ್ನದ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com