

ಬೆಂಗಳೂರು: ಕಳೆದ ಐದು ವರ್ಷಗಳಿಂದ ಕಲಾ ಪ್ರದರ್ಶನ ನಡೆಸುಕೊಂಡು ಬಂದಿರುವ 'ಆರ್ಟ್ ಬೆಂಗಳೂರು' ಈಗ ತನ್ನ ಆರನೆ ಆವೃತ್ತಿಯಲ್ಲಿ ಅನಿರೀಕ್ಷಿತ ಪ್ರಯತ್ನಕ್ಕೆ ತೆರೆದುಕೊಂಡಿದೆ.
೨೧ ನೆ ಶತಮಾನದಲ್ಲಿ ಕಲೆ ಮತ್ತು ಬದುಕು ಬದಲಾಗುತ್ತಿರುವುದನ್ನು ಸೆರೆಹಿಡಿಯಲು ಇದು ಪ್ರಯತ್ನಿಸುತ್ತಿದ್ದು, ವಿಜ್ಞಾನ, ತಂತ್ರಜ್ಞಾನ, ತತ್ವಶಾಸ್ತ್ರ, ಗ್ರಹಿಕೆ, ಮಾನವನ ಸ್ಥಿತಿ ಗತಿ, ಮತ್ತು ನಮ್ಮ ಪ್ರದೇಶದ ಸಮಗ್ರ ಬದಲಾವಣೆಗಳನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದೆ.
ಈ ಉತ್ಸವದಲ್ಲಿ ತಾಂತ್ರಿಕ ಅಭಿವೃದ್ಧಿಗಳು, ಜೀವನ ಶೈಲಿ, ವೈಜ್ಞಾನಿಕ ಸಂಶೋಧನೆಗಳು, ನಮ್ಮ ಯೋಚನೆ ಮತ್ತು ಕಲೆಯಲ್ಲಾಗುತ್ತಿರುವ ಸಮಗ್ರ ಬದಲಾವಣೆಗಳನ್ನು ಫೋಟೋಗ್ರಾಫರ್ ಸಂದೇಶ್ ಕಡೂರ್ ತಮ್ಮ ಫೋಟೋಗಳ ಪ್ರದರ್ಶನದಲ್ಲಿ ಸೆರೆಹಿಡಿದಿದ್ದಾರೆ.
ನ್ಯಾಷನಲ್ ಜಿಯೋಗ್ರಾಫಿಕ್ ಸಂಶೋಧನೆ ಖ್ಯಾತಿಯ ಸಂದೇಶ್ ಕಡೂರ್, ವನ್ಯ ಜೀವಿಗಳ ಸಾಕ್ಷಚಿತ್ರಗಳನ್ನು ನಿರ್ಮಿಸಿ, ಫೋಟೋಗ್ರಫಿ ಪುಸ್ತಕಗಳನ್ನು ಪ್ರಕಟಿಸಿ ಪ್ರಶಸ್ತಿಗಳನ್ನು ಪಡೆದವರು. ವನ್ಯ ಜೀವಿ ಮತ್ತು ಅಳಿವಿಂಚಿನ ಪ್ರಾಣಿಗಳ ಸಂರಕ್ಷಣೆಗಾಗಿ ಫೆಲಿಸ್ ಕ್ರಿಯೇಷನ್ಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ.
ಈ ಪ್ರದರ್ಶನ ಯು ಬಿ ಸಿಟಿಯ, ಕಫೆ ನೋಯರ್ ಬಳಿ ಆಗಸ್ಟ್ ೨೧ ರಿಂದ ೩೦ನೆಯ ತಾರೀಖಿನವರೆಗೆ ಇರುತ್ತದೆ.