ಹೆಸರು ಹೇಮಣ್ಣ ಸಣ್ಣಯರಾಶಿ, ಓದಿದ್ದು ಕೇವಲ 7ನೇ ತರಗತಿ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಪ್ರಗತಿಪರ ರೈತ ಇವರು. ಈ ವರ್ಷ ರಾಜ್ಯದಲ್ಲಿ ಬರ ಕಾಡುತ್ತಿದ್ದರೂ ಇವರು ಮಾತ್ರ ಲಕ್ಷ ಲಕ್ಷ ರುಪಾಯಿ ಬೆಳೆ ತೆಗೆದಿದ್ದಾರೆ. ಅಷ್ಟೇ ಅಲ್ಲ ಈಗಲೂ ಹೊಲದಲ್ಲಿ ಹಿಂಗಾರು ಬೆಳೆ ಕಂಗೊಳಿಸುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ಕೃಷಿ ಹೊಂಡದಿಂದ ಎನ್ನುವುದು ಗಮನಾರ್ಹ ಸಂಗತಿ.