ನಿಖಿಲೇಶ್ ಸುರೇಂದ್ರನ್ 
ಸಾಧನೆ

ಲಿಯಾಂ ಲಿವಿಂಗ್‌ಸ್ಟನ್‌ಗಿಂತ ಮುಂಚೆ ತ್ರಿಶತಕ ದಾಖಲೆ ಸೃಷ್ಟಿಸಿದ್ದ ನಿಖಿಲೇಶ್!

138 ಎಸೆತಗಳಲ್ಲಿ 350 ರನ್ ಗಳಿಸಿ ಲಿಯಾಂ ಲಿವಿಂಗ್‌ಸ್ಟನ್ ವಿಶ್ವ ದಾಖಲೆ ಬರೆದಾಗಲೇ ನಿಖಿಲೇಶ್ ಸುರೇಂದ್ರನ್ ಎಂಬ ಈ ಕ್ರಿಕೆಟಿಗನ ಬಗ್ಗೆ...

138 ಎಸೆತಗಳಲ್ಲಿ 350 ರನ್ ಗಳಿಸಿ ಲಿಯಾಂ ಲಿವಿಂಗ್‌ಸ್ಟನ್ ವಿಶ್ವ ದಾಖಲೆ ಬರೆದಾಗಲೇ ನಿಖಿಲೇಶ್ ಸುರೇಂದ್ರನ್ ಎಂಬ ಈ ಕ್ರಿಕೆಟಿಗನ ಬಗ್ಗೆ ಎಲ್ಲರಿಗೂ ಗೊತ್ತಾಗಿದ್ದು.  ಕೇರಳದ ಪಾಲಕ್ಕಾಡ್  ಜಿಲ್ಲೆಯವನಾದ ನಿಖಿಲೇಶ್ ರಣಜಿ ಟೀಂ ಸದಸ್ಯನಾಗಿದ್ದಾನೆ. ತನ್ನ ಹೆಸರನ್ನು ವಿಶ್ವವೇ ಅರಿಯುವಂತೆ ಮಾಡಿದ್ದಕ್ಕೆ ಈಗ ನಿಖಿಲೇಶ್,  ಲಿಯಾಂ ಲಿವಿಂಗ್‌ಸ್ಟನ್‌ಗೆ ಧನ್ಯವಾದ ಹೇಳುತ್ತಿದ್ದಾರೆ. ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮೆನ್ ಆಗಿರುವ ನಿಖಿಲೇಶ್ ಏಳು ವರ್ಷಗಳ ಹಿಂದೆ ಬರೆದ ದಾಖಲೆಯನ್ನು ಎರಡು ದಿನಗಳ ಹಿಂದೆಯಷ್ಟೇ ಇಂಗ್ಲೆಂಡ್‌ನ ಲಿವಿಂಗ್‌ಸ್ಟನ್ ಮುರಿದಿದ್ದು.

ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ತ್ರಿಶತಕ ದಾಖಲಿಸಿದಾಗ ನಿಖಿಲೇಶ್‌ನ ವಯಸ್ಸು ಕೇವಲ 15. 2008ರಲ್ಲಿ ಹೈದ್ರಾಬಾದ್‌ನ ಪರೇಡ್ ಗ್ರೌಂಡ್ ನಲ್ಲಿ ನಿಖಿಲೇಶ್ ಅಜೇಯ 334 ರನ್ ಬಾರಿಸಿ ದಾಖಲೆ ಸೃಷ್ಟಿಸಿದ್ದರು.  ಬ್ರಿಲ್ಯಂಟ್ ಗ್ರಾಮರ್ ಸ್ಕೂಲ್ ವಿರುದ್ಧ ನಡೆದ ಶಾಲಾ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ  176 ಬಾಲ್‌ಗಳನ್ನೆದುರಿಸಿದ ನಿಖಿಲೇಶ್ 54 ಬೌಂಡರಿ ಬಾರಿಸಿ ತ್ರಿಶತಕ ದಾಖಲಿಸಿದ್ದರು. ವಿಶೇಷವೇನೆಂದರೆ ತ್ರಿಶತಕ ಬಾರಿಸಿದರೂ ಒಂದೇ ಒಂದು ಸಿಕ್ಸರ್ ಹೊಡೆಯಲು ನಿಖಿಲೇಶ್‌ಗೆ ಅಂದು ಸಾಧ್ಯವಾಗಲಿಲ್ಲ.

ಹೈದ್ರಾಬಾದ್‌ವ  ಪರೇಡ್ ಗ್ರೌಂಡ್ ತುಂಬಾ ದೊಡ್ಡ ಗ್ರೌಂಡ್. ಅಲ್ಲಿ ಸಿಕ್ಸರ್ ಬಾರಿಸುವ ತಾಕತ್ತು ಆಗ ನನ್ನಲ್ಲಿರಲಿಲ್ಲ ಎಂದು ನಿಖಿಲೇಶ್ ಹೇಳುತ್ತಾರೆ. ಇದೀಗ ನಿಖಿಲೇಶ್ ಕೊಚ್ಚಿಯಲ್ಲಿ ಅಂಡರ್ 23 ಪಂದ್ಯಾಟದಲ್ಲಿ ತೊಡಗಿದ್ದಾರೆ.


ಇಂಗ್ಲೆಂಡ್ ಕೌಂಟಿಯಲ್ಲಿ ಎರಡು ದಿನಗಳ ಹಿಂದೆ 138 ಎಸೆತಗಳಲ್ಲಿ 350 ರನ್ ಬಾರಿಸಿ ಲಿಯಾಂ ಲಿವಿಂಗ್‌ಸ್ಟನ್  ನಿಖಿಲೇಶ್‌ನ ದಾಖಲೆ ಮುರಿದಿದ್ದರು. ಕಳೆದೆರಡು ಸೀಸನ್‌ಗಳಲ್ಲಿ ರಣಜಿ ಟ್ರೋಫಿಗಾಗಿ  ಕೇರಳದ ಪರವಾಗಿ ಆಡಿರುವ ನಿಖಿಲೇಶ್ ಕಳೆದ ವರ್ಷ ಗೋವಾ ವಿರುದ್ಧ ಶತಕ ಬಾರಿಸಿದ್ದರು.


ಪಾಲಕ್ಕಾಡಿನ ಖ್ಯಾತ ತರೂರ್ ಕುಟುಂಬದ ಕುಡಿಯಾಗಿದ್ದಾನೆ ಈತ.  ಸುರೇಂದ್ರನ್ ತರೂರ್ ಮತ್ತು ಚಿತ್ರಾ ಸುರೇಂದ್ರನ್ ದಂಪತಿಗಳ ಪುತ್ರನಾದ ನಿಖಿಲೇಶ್ ಓದಿದ್ದು, ಬೆಳೆದಿದ್ದು ಎಲ್ಲ ಹೈದ್ರಾಬಾದ್‌ನಲ್ಲೇ. ಹೈದ್ರಾಬಾದ್ ನಲ್ಲಿ ಪದವಿ ಮುಗಿಸಿದ ನಂತರ ನಿಖಿಲೇಶ್ ಈಗ ಕೇರಳದಲ್ಲಿ ಫುಲ್ ಟೈಂ ಕ್ರಿಕೆಟ್ ಆಡುವುದರಲ್ಲಿ ಬ್ಯುಸಿಯಾಗಿದ್ದಾನೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

SCROLL FOR NEXT