15 ವರ್ಷ ಹಿಂದೆ ನಗರಗಳಿಗಷ್ಟೇ ಸೀಮಿತವಾಗಿದ್ದ ಕಂಪ್ಯೂಟರ್‌ಗಳು ಇಂದು ಎಲ್ಲರ ಮೂಲಭೂತ ಅವಶ್ಯಕತೆ! ಕಂಪ್ಯೂಟರ್ ಕಾರ್ಯನಿರ್ವಹಣೆಗೆ ಸಾಕಷ್ಟು ವಿದ್ಯುತ್ ಬೇಕು. ಹೀಗಾಗಿ ವಿಶ್ವದ ಶೇ.5ರಷ್ಟು ಕಾರ್ಬನ್ ಅನಿಲ ಹೊರಸೂಸುವಿಕೆಗೆ ಕಂಪ್ಯೂಟರ್‌ಗಳು ಪರೋಕ್ಷವಾಗಿ ಕಾರಣವಾಗುತ್ತಿವೆ. ಕಂಪ್ಯೂಟರ್‌ಗಳು ಪರಿಸರದ ಮೇಲೆ ಈ ರೀತಿ ಮಾಡುವ ಪರೋಕ್ಷ ಹಾನಿಯನ್ನು ತಡೆಯುವ ನಿಟ್ಟಿನಲ್ಲಿ ಈಗ ಜ ್ಜ್ಠಜಜಟಿ ಎಂಬ ಹೆಸರಿನ ಸಾಫ್ಟ್‌ವೇರ್‌ವೊಂದನ್ನು ಅಭಿವೃದ್ಧಿಪಡಿಸಲಾಗಿದೆ. ಈ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಇದು ನಿಮ್ಮ ಕಂಪ್ಯೂಟರ್ ಬಳಸುವ ವಿದ್ಯುತ್‌ನಲ್ಲಿ ಶೇ.30ರಷ್ಟನ್ನು ಉಳಿಸಲು ಸಹಕಾರ ನೀಡುತ್ತದೆ. ಮೊದಲು ಈ ಸಾಫ್ಟ್‌ವೇರ್ ನಿಮ್ಮ ಕಂಪ್ಯೂಟರ್ ಯಾವ ಕಾರಣಕ್ಕೆ ಮತ್ತು ಎಷ್ಟು ಪ್ರಮಾಣದಲ್ಲಿ ವಿದ್ಯುತ್ ಬಳಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸುತ್ತದೆ. ಬಳಿಕ ವಿದ್ಯುತ್ ಉಳಿತಾಯ ಮಾರ್ಗಗಳನ್ನು ಅನುಷ್ಠಾನಕ್ಕೆ ತರುತ್ತದೆ. ಅಂದ ಹಾಗೆ ಇದು ಸಂಪೂರ್ಣ ಮುಕ್ತ ಹಾಗೂ ಸುರಕ್ಷಿತ ಸಾಫ್ಟ್‌ವೇರ್. ಇದನ್ನು ಅರ್ಥ್ ಟೈಮ್ಸ್ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. <
-ಎ.ಕೆ.