ಕೃಷಿ-ಪರಿಸರ

ಸಾವಿನ ಕೊಡೆ

ಅಣಬೆ ಬಾಯಲ್ಲಿ ನೀರೂರುತ್ತದೆ. ಸೂರ್ಯನ ಕಿರಣಗಳು ಅಣಬೆಗಳ ಮೇಲೆ ಬಿದ್ದಿತೆಂದರೆ ವಿಫುಲವಾಗಿ ವಿಟಮಿನ್ 'ಡಿ' ದಕ್ಕಿತೆಂದೇ ಅರ್ಥ. ಅಷ್ಟೇ ಅಲ್ಲ, ಅಣಬೆಗಳಲ್ಲಿರುವ ವಿಟಮಿನ್ 'ಬಿ' ಕೂಡಾ ಆರೋಗ್ಯಕ್ಕೆ ಒಳ್ಳೆಯದು. ಹೀಗಾಗಿ ಅಣಬೆಯನ್ನು ಮುಗಿಬಿದ್ದು ಖರೀದಿಸಿ ಬಗೆಬಗೆಯ ಸಾರು, ಪಲ್ಯ, ಫ್ರೈ ಮಾಡಿ ತಿನ್ನುವವರು ಎಷ್ಟೋ ಮಂದಿ. ವಿಶ್ವದ ಹಲವೆಡೆ ಅಣಬೆಯನ್ನು ಆಹಾರವಾಗಿ ಬಳಸುತ್ತಾರೆ. ಆದರೆ ಒಂದಂತೂ ಸತ್ಯ. ನೀವು ತಿನ್ನುತ್ತಿರುವ ಅಣಬೆಯು ತಿನ್ನಲು ಯೋಗ್ಯವಾದುದು ಎಂದು ಶೇ.100ರಷ್ಟು ಖಾತ್ರಿಯಿದ್ದರೆ ಮಾತ್ರ ಮುಂದುವರಿಯಿರಿ. ಏಕೆಂದರೆ, ನಿಸರ್ಗದಲ್ಲಿ ದೊರೆಯುವ ಎಷ್ಟೋ ಅಣಬೆಗಳು ಮನುಷ್ಯನ ಜೀವಕ್ಕೇ ಕುತ್ತು ತರಬಹುದು. ಕೆಲವೊಂದು ಅಣಬೆಗಳಲ್ಲಿರುವ ವಿಷಕಾರಿ ಅಂಶಗಳು ತಿಂದ ಕೆಲವೇ ಗಂಟೆಗಳಲ್ಲಿ ನಿಮ್ಮನ್ನು ಸಾವಿನ ದವಡೆಗೆ ನೂಕಬಲ್ಲವು. ಇಂಥ 'ಸಾವಿನ ಅಣಬೆ'ಗಳ ಬಗ್ಗೆ ತಿಳಿಯಬೇಕೇ?

ನಾಶದ ದೇವತೆ
ಶುಭ್ರ ಬಿಳಿ ಬಣ್ಣ. ನೋಡಿದ ಕೂಡಲೇ ಮುದ್ದಾಡಬೇಕು ಎಂದೆನಿಸುವ ಈ ಅಂಡಾಕೃತಿಯ ಅಣಬೆ ವಿಶ್ವದ ಹಲವೆಡೆ ಕಂಡುಬರುವ ಸಾವಿನ ಅಣಬೆಗಳಲ್ಲಿ ಒಂದು. ಇದರಲ್ಲಿ ಅಮೆಟಾಕ್ಸಿನ್ ಎಂಬ ವಿಷವಿರುತ್ತದೆ. 'ನಾಶದ ದೇವತೆ'(ಡೆಸ್ಟ್ರಾಯಿಂಗ್ ಏಂಜೆಲ್) ಎಂದೇ ಕರೆಯಲ್ಪಡುವ ಈ ಅಣಬೆಯನ್ನು ತಿಂದರೆ ಸಾವು ಖಚಿತ. ಇದನ್ನು ತಿಂದ ಕೆಲವೇ ಗಂಟೆಗಳಲ್ಲಿ ಯಕೃತ್ತು ಹಾಗೂ ಕಿಡ್ನಿಯ ಅಂಗಗಳು ನಾಶವಾಗುತ್ತವೆ.

ಫಾಲ್ಸ್ ಮೊರೆಲ್
ಇದನ್ನು ಸ್ಪಾಂಜ್ ಅಣಬೆ ಎಂದೂ ಕರೆಯುತ್ತಾರೆ. ಇದು ಜೀನಸ್ ಗಿರೋಮಿಟ್ರಾ ಗುಂಪಿನ ಅಣಬೆ. ಫಾಲ್ಸ್ ಮೊರೆಲ್ ಅನ್ನು ಗುರುತಿಸುವುದು ಸುಲಭ. ಏಕೆಂದರೆ, ಇದು ಮಾನವನ ಮೆದುಳಿನ ಮೇಲ್ಭಾಗದ ಆಕೃತಿಯಂತೆಯೇ ಕಾಣುತ್ತದೆ. ಇವುಗಳಲ್ಲಿ ಎಂಎಂಎಚ್(ಮೋನೋ ಮಿಥೈಲ್ ಹೈಡ್ರಾಜಿನ್) ಎಂಬ ವಿಷಕಾರಿ ಅಂಶವಿದ್ದು, ಅದು ವಾಂತಿ, ಬಳಲಿಕೆ, ಅತಿಸಾರ ಉಂಟುಮಾಡುವುದಲ್ಲದೆ ಕೆಲವೊಮ್ಮೆ ವ್ಯಕ್ತಿಯ ಸಾವಿಗೂ ಕಾರಣವಾಗುತ್ತದೆ.

ಡೆಡ್ಲಿ ಗಲೆರಿನಾ
ಅ- ಅಮಾನಿಟಿನ್ ಎಂಬ ಭಯಂಕರ ವಿಷವುಳ್ಳ ಡೆಡ್ಲಿ ಗಲೆರಿನಾ ಎಂಬ ಅಣಬೆಯು ಹೆಚ್ಚಾಗಿ ಪಿತ್ತಜನಕಾಂಗದ ಅಂಗಗಳಿಗೆ ಹಾನಿಮಾಡುತ್ತವೆ. ಜತೆಗೆ, ಮೂತ್ರಜನಕಾಂಗ ಹಾಗೂ ಕೇಂದ್ರ ನರವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರುತ್ತದೆ. ಹಾಗಾಗಿ ಇಂಥ ಅಣಬೆಗಳ ಹತ್ತಿರ ಸುಳಿಯುವುದೂ ಅಪಾಯಕಾರಿ.

ಡೆತ್ ಕ್ಯಾಪ್
ಮಧ್ಯಮ ಗಾತ್ರದ ಅತ್ಯಂತ ಸುಂದರ ಅಣಬೆಯಿದು. ಡೆತ್ ಕ್ಯಾಪ್ ಹೆಚ್ಚಾಗಿ ಯುರೋಪ್ ಮತ್ತು ಏಷ್ಯಾದೆಲ್ಲೆಡೆ ಕಾಣಸಿಗುತ್ತದೆ. ಇದು ಅತ್ಯಂತ ವಿಷಕಾರಿಯಾಗಿದ್ದು, ಇದನ್ನು ಎಷ್ಟು ಫ್ರೀಜ್ ಮಾಡಿದರೂ, ಕುದಿಸಿದರೂ, ಒಣಗಿಸಿದರೂ ಇದರ ವಿಷದ ಪ್ರಮಾಣ ಒಂದಿಂಚೂ ಕಡಿಮೆಯಾಗುವುದಿಲ್ಲ. ವಿಶ್ವದಲ್ಲಿ ಅಣಬೆಯ ವಿಷದಿಂದ ಸಂಭವಿಸಿದ ಹೆಚ್ಚಿನ ಸಾವುಗಳಿಗೆ ಡೆತ್ ಕ್ಯಾಪ್ ಅಣಬೆಯೇ ಕಾರಣ.

ಕೋನೋಸೈಬ್
ಈ ಸಾವಿನ ಅಣಬೆಯು ಹೆಸರೇ ಹೇಳುವಂತೆ ಕೋರೆಹಲ್ಲಿನ ರೀತಿ ಇರುತ್ತದೆ. ಅದರ ಕಾಂಡದಂಥ ಭಾಗವು ಕಂದುಬಣ್ಣವಿರುತ್ತದೆ. ಇದನ್ನು ಫೋಲಿಯೋಟಿನಾ ಫಿಲಾರಿಸ್ ಎಂದೂ ಕರೆಯುತ್ತಾರೆ. ಅಮೆರಿಕದ ಪೆಸಿಫಿಕ್ ವಾಯವ್ಯ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುತ್ತವೆ. ಇದರಲ್ಲಿರುವ ಮೈಕೋಟಾಕ್ಸಿನ್ ಮಾನವನ ಜೀವಕ್ಕೆ ಕುತ್ತು ತರುವುದಂತೂ ಖಚಿತ.

ಔಷಧೀಯ ಗುಣಗಳೂ ಇವೆ
ಅಣಬೆಗಳು ಜೀವ ತೆಗೆಯುವುದು ಮಾತ್ರವಲ್ಲ, ಜೀವ ಉಳಿಸುವಲ್ಲಿಯೂ ಸಹಾಯ ಮಾಡುತ್ತದೆ. ವಿಶ್ವದ ಹಲವೆಡೆ ವಿವಿಧ ರೀತಿಯ ಅಣಬೆಗಳ ಮೂಲಕ ಔಷಧಗಳನ್ನು ತಯಾರಿಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಬೆಳೆಯುವ ಗನೋಡೆರ್ಮಾ ಲ್ಯುಸಿಡೆಮ್, ಫೆಲ್ಲಿನಸ್ ರಿಮೋಸಸ್, ಪ್ಲ್ಯೂರೋಟಸ್ ಫ್ಲೋರಿಡಾ, ಪ್ಲ್ಯೂರೋಟಸ್ ಪಲ್ಮೋನಾರಿಸ್ ಮುಂತಾದ ಅಣಬೆಗಳು ಔಷಧೀಯ ಗುಣಗಳನ್ನು ಹೊಂದಿವೆ. ಈ ಅಣಬೆಗಳಲ್ಲಿ ಆ್ಯಂಟಿಯಾಕ್ಸಿಡೆಂಟ್ ಮತ್ತು ಆ್ಯಂಟಿಟ್ಯೂಮರ್ ಅಂಶಗಳು ವಿಫುಲವಾಗಿವೆ. ಇವುಗಳ ಇನ್ನಷ್ಟು ಔಷಧೀಯ ಗುಣಗಳ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ. ಗನೋಡೆರ್ಮಾ ಲ್ಯುಸಿಡೆಮ್ ಅಣಬೆಗಳನ್ನು ಯಕೃತ್ತಿನ ಉರಿಯೂತ, ಹೈಪರ್‌ಟೆನ್ಶನ್, ಸಂಧಿವಾತ, ನಿದ್ರಾಹೀನತೆ, ಡಯಾಬಿಟೀಸ್, ಅಸ್ತಮಾ, ಅಲ್ಸರ್ ಮತ್ತಿತರ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಲೆಂಟಿನಸ್ ಇಡೋಡ್ ಅಥವಾ ಶೀಟೇಕ್ ಎಂಬ ಅಣಬೆಯು ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯದ ಹಾದಿ ಎಂದು ಪ್ರಾಚೀನ ಚೀನಿ ಸಂಪ್ರದಾಯದಲ್ಲಿ ನಂಬಲಾಗುತ್ತದೆ. ಹೈಪರ್‌ಟೆನ್ಷನ್ ನಿಗ್ರಹಿಸುವ, ಕೊಲೆಸ್ಟೆರಾಲ್ ಕಡಿಮೆ ಮಾಡುವ, ಎಚ್‌ಐವಿ ವೈರಸ್ ದ್ವಿಗುಣಗೊಳ್ಳುವುದನ್ನು ನಿಯಂತ್ರಿಸುವ, ಕ್ಯಾನ್ಸರ್ ನಿವಾರಕ ಔಷಧವಾಗಿಯೂ ಈ ಅಣಬೆಗಳನ್ನು ಬಳಸಲಾಗುತ್ತದೆ.

- ದಿಯಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

SIR ವೇಳೆ ಡಿಲೀಟ್ ಆಗಿರುವ 13.3 ಕೋಟಿ ಮತದಾರರ ಪತ್ತೆಗೆ ಕಾಂಗ್ರೆಸ್‌ನಿಂದ ‘ಮತ ರಕ್ಷಕ’ರ ನೇಮಕ!

'ಇತಿಹಾಸ ನಿಮ್ಮನ್ನು ಇನ್ನಷ್ಟು ಗೌರವದಿಂದ ನೆನಪಿಸಿಕೊಳ್ಳಲಿದೆ'; Agarkarಗೆ ಗೇಟ್ ಪಾಸ್`, ಗಂಭೀರ್‌ ಭಾವುಕ ಸಂದೇಶ!

Bigg Boss Kannada: ಟಾಸ್ಕ್ ವೇಳೆ ಕುಸಿದು ಬಿದ್ದ ನಟಿ ಸಂಗೀತಾ ಭಟ್; ಆರೋಗ್ಯದಲ್ಲಿ ಏರುಪೇರು! ವಿಡಿಯೋ ವೈರಲ್

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video