ಕೃಷಿ-ಪರಿಸರ

ಹೊಂಬೆಳಕಾಗಿ...

ಇನ್ಮುಂದೆ ನೀವೂ ಇಂಧನ ತಯಾರಿಸಬಹುದು. ಸರ್ಕಾರವೂ ನಿಮ್ಮ ಜತೆಗಿರುತ್ತದೆ.

ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಬೆಲೆ ದಿನದಿಂದ ದಿನಕ್ಕೆ ಏರುತ್ತಲಿದೆಯೇ ಹೊರತು ಇಳಿಮುಖ ಕಾಣುತ್ತಿಲ್ಲ. ಹಾಗಂತ ಮನೆಯಲ್ಲಿರುವ ವಾಹನಕ್ಕೆ ಇವುಗಳನ್ನು ಬಳಸದೇ ಓಡಿಸಲೂ ಬರುವುದಿಲ್ಲ. ಬೆಲೆ ಏರಿದೆ ಎಂದು ಯಾರೂ ವಾಹನ ಓಡಿಸುವುದನ್ನೂ ಬಿಟ್ಟಿಲ್ಲ. ಈ ಬೆಲೆಗಳೂ ಇನ್ನೂ ಏರುತ್ತಲೇ ಇದ್ದರೆ ಮುಂದಿನ ಕಥೆ ಏನು? ಇದಕ್ಕೆ ಪರ್ಯಾಯ ಮಾರ್ಗವೇ ಇಲ್ಲವೇ?
ಏಕಿಲ್ಲ. ಮನಸ್ಸಿದ್ದಲ್ಲಿ ಮಾರ್ಗವಿದೆ. ಇನ್ನು ಮುಂದೆ ಇಂಧನವನ್ನು ನೀವೂ ತಯಾರಿಸಬಹುದು. ಸರ್ಕಾರವೂ  ನಿಮ್ಮ ಜತೆಗಿರುತ್ತದೆ. ಇಂಧನ ತಯಾರಿಸಲು ನೀವೇನೂ ಭೂಮಿ ಬಗೆಯಬೇಕಾಗಿಲ್ಲ. ಬದಲಿಗೆ ನಮ್ಮ ಪರಿಸರದಲ್ಲೇ ಸಿಗುವ ಜೈವಿಕ ಉತ್ಪನ್ನಗಳನ್ನು ಬಳಸಿದರೆ ಸಾಕು. ಈ ಮೂಲಕ ಪರಿಸರ ಹಾಗೂ ನಿಮ್ಮ ಜೇಬಿನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೆಚ್ಚು ಕಾಸನ್ನೂ ಸಂಪಾದಿಸಬಹುದು.

ಹೊಂಬೆಳಕು
ಜೈವಿಕ ಇಂಧನ ಉತ್ಪಾದನೆಗಾಗಿ 'ಹೊಂಬೆಳಕು' ಎಂಬ ಹೊಸ ಯೋಜನೆಯನ್ನು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಜಿಲ್ಲಾ ಪಂಚಾಯ್ತಿಗಳ ಮೂಲಕ ಜಾರಿಗೊಳಿಸುತ್ತಿದೆ. ಈ ಯೋಜನೆಗೆ ಮಹಿಳಾ ಸ್ವ-ಸಹಾಯ ಗುಂಪುಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಲಾಗಿದೆ. ತೈಲ, ಜೈವಿಕ ಡೀಸೆಲ್ ಬಳಕೆ ಹಾಗೂ ತೈಲೋತ್ಪಾದನೆ ಯಂತ್ರಗಳಿಗೆ ಹಾಗೂ ಆರಂಭಿಕ ವೆಚ್ಚಗಳಿಗೆ ಮಂಡಳಿಯಿಂದ 2.15 ಲಕ್ಷ ನೆರವು, ವಾರ್ಷಿಕ 25,000 ಅನುದಾನ ಸಿಗಲಿದೆ. ಜೈವಿಕ ಇಂಧನ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಸಂಘ, ಸಂಸ್ಥೆಗಳು, ರೈತ ಸಂಘಗಳಿಗೂ ನೆರವು ಲಭ್ಯ.
ಪ್ರಾಥಮಿಕ ಹಂತದಲ್ಲಿ ಮಂಡಳಿಯಿಂದ ದೊರೆಯುವ ಅನುದಾನವನ್ನು ಸದುಪಯೋಗ ಮಾಡಿಕೊಂಡು ಗ್ರಾಮೀಣ ಪ್ರದೇಶಗಳಲ್ಲಿ ಜೈವಿಕ ಇಂಧನ ಬೀಜಗಳಿಂದ ಎಣ್ಣೆ ತೆಗೆಯುವ ಸಣ್ಣ ಘಟಕಗಳನ್ನು ಸ್ಥಾಪಿಸಿ, ಶೀಘ್ರ ಸ್ವಾವಲಂಬನೆಯತ್ತ ಹೆಜ್ಜೆ ಹಾಕಬಹುದು.
ಗ್ರಾಮೀಣ ಪ್ರದೇಶದಲ್ಲಿ 3 ವರ್ಷಗಳಿಂದ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಮಹಿಳಾ ಸ್ವ-ಸಹಾಯ ಗುಂಪು, ಗ್ರಾಮ ಅರಣ್ಯ ಸಮಿತಿ, ಜೈವಿಕ ಇಂಧನ ಬೆಳೆಗಾರರ ಸಂಘ, ರೈತರ ಸಂಘ ಹಾಗೂ ಇತರೆ ಜೈವಿಕ ಇಂಧನ ಕ್ಷೇತ್ರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ಸಂಘ-ಸಂಸ್ಥೆಗಳು ಈ ಯೋಜನೆಯ ಲಾಭ ಪಡೆಯಬಹುದು. ಈ ಸಂಸ್ಥೆಗಳ ಕಾರ್ಯ ನಿರ್ವಹಣಾ ಕ್ಷೇತ್ರದಲ್ಲಿ ಜೈವಿಕ ಇಂಧನ ಬೀಜಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರೂಬ, ಜತ್ರೋಪ ಇತ್ಯಾದಿ ಬೀಜಗಳು ಹೇರಳವಾಗಿ ದೊರಕುವಂತಿರಬೇಕು.

ಅರ್ಹತೆ ಏನು?
ಸಂಸ್ಥೆಗಳು ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿರಬಾರದು, ಸರ್ಕಾರದ ಅಥವಾ ಖಾಸಗಿ ಅನುದಾನ ನೀಡುವ ಸಂಸ್ಥೆಗಳಿಂದ ಕಪ್ಪು ಪಟ್ಟಿಗೆ ಸೇರಿರಬಾರದು ಹಾಗೂ ಜೈವಿಕ ಇಂಧನ ಉತ್ಪಾದನೆಯಲ್ಲಿ ಆಸಕ್ತಿ ಹೊಂದಿರಬೇಕು. ಸ್ಥಳೀಯವಾಗಿ ಜೈವಿಕ ಇಂಧನ ಬೀಜ ಸಂಗ್ರಹಣಾ ಸಾಮರ್ಥ್ಯ ಹೊಂದಿರಬೇಕು.
ಸಣ್ಣ ಪ್ರಮಾಣದ ಎಣ್ಣೆ ತೆಗೆಯುವ ಘಟಕ ಪಡೆಯಲು ಕಳೆದ 3 ವರ್ಷಗಳಲ್ಲಿ 1 ರಿಂದ 5 ಲಕ್ಷ ರು. ವಾರ್ಷಿಕ ವಹಿವಾಟು ಮಾಡಿದ ಸ್ವ-ಸಹಾಯ ಗುಂಪುಗಳು ಕನಿಷ್ಠ 10್ಢ20 ಸ್ವಂತ ಸ್ಥಳ, ವಿದ್ಯುತ್, ಕಟ್ಟಡ, ನೀರಿನ ಸೌಕರ್ಯ ಹೊಂದಿರಬೇಕು. ಅಥವಾ ಬಾಡಿಗೆ ಕಟ್ಟಡ ಹೊಂದಲು ಸಿದ್ಧರಿರಬೇಕು. ಮಂಡಳಿಯೊಂದಿಗೆ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಲು ಸಿದ್ಧರಿರಬೇಕು. ಮಂಡಳಿಯು ನಿಗದಿಪಡಿಸುವ ಎಲ್ಲ ನಿಯಮಗಳಿಗೆ ಬದ್ಧರಾಗಿರಬೇಕು.

ಉದ್ದೇಶಗಳೇನು?
ಸ್ಥಳೀಯ ಸಂಪನ್ಮೂಲಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜೈವಿಕ ಇಂಧನ ಉತ್ಪಾದನೆ ಹೆಚ್ಚಿಸುವುದು, ಮಹಿಳಾ ಸ್ವಸಹಾಯ ಗುಂಪುಗಳನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಆರ್ಥಿಕ ಸಬಲೀಕರಣಕ್ಕೆ ಚಾಲನೆ ನೀಡುವುದು. ತೈಲ, ಜೈವಿಕ ಡೀಸೆಲ್‌ಗಳ ಬಳಕೆ ಹಾಗೂ ತೈಲೋತ್ಪಾದನೆ ನಂತರ ದೊರೆಯುವ ಹಿಂಡಿ ಉತ್ತಮ ಗೊಬ್ಬರವಾಗಿದ್ದು, ಇದರ ಸಮರ್ಪಕ ಬಳಕೆಗೆ ಸ್ಥಳೀಯ ಮಾರುಕಟ್ಟೆ ಒದಗಿಸಿ, ಆ ಮೂಲಕ ಗ್ರಾಮೀಣ ಪ್ರದೇಶದ ಕೃಷಿ ಉತ್ಪಾದನೆ ಹೆಚ್ಚಿಸುವುದು. ಅಡುಗೆ ಅನಿಲ ಉತ್ಪಾದಿಸಲು ಉತ್ತೇಜಿಸುವುದು. ಬೀಜ ಸಂಗ್ರಹಣಾ ಜಾಲ ವಿಸ್ತರಣೆಯೊಂದಿಗೆ ಜೈವಿಕ ಇಂಧನ ಕೃಷಿಕರಿಗೆ ಆರ್ಥಿಕ ಲಾಭ ಸೌಲಭ್ಯ. ಅಧಿಕ ಸಂಖ್ಯೆಯಲ್ಲಿ ಗ್ರಾಮೀಣ ರೈತ ಮಹಿಳೆಯರನ್ನು ತೊಡಗಿಸಿಕೊಂಡು ಜೈವಿಕ ಇಂಧನ ಸಸಿ ನೆಡುವುದಕ್ಕೆ ಪ್ರೋತ್ಸಾಹ ನೀಡುವುದು.
ಮಾಹಿತಿಗೆ- ನಿಮ್ಮ ಜಿಲ್ಲೆಯಲ್ಲಿರುವ ಜಿಪಂ ಕಚೇರಿಗಳಲ್ಲಿ ಡಿಆರ್‌ಡಿಓ ವಿಭಾಗಗಳನ್ನು ಸಂಪರ್ಕಿಸಬಹುದು.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?