ಕೃಷಿ-ಪರಿಸರ

ಬಿದಿರು ಬಾವಲಿ

ಹಿಂಡಾಗಿ ಕಂಡುಬರುವ ಬಿದಿರಿನ ಮೆಳೆಗಳು ದಿನನಿತ್ಯದ ಜೀವನಕ್ಕೆ ಬಹು ಉಪಕಾರಿಯಾಗಿವೆ. ಮಾನವನ ವಾಸಸ್ಥಾನಗಳಿಗೆ ಬುನಾದಿ ಹಾಕಿದ ಕೀರ್ತಿ...

ಹಿಂಡಾಗಿ ಕಂಡುಬರುವ ಬಿದಿರಿನ ಮೆಳೆಗಳು ದಿನನಿತ್ಯದ ಜೀವನಕ್ಕೆ ಬಹು ಉಪಕಾರಿಯಾಗಿವೆ. ಮಾನವನ ವಾಸಸ್ಥಾನಗಳಿಗೆ ಬುನಾದಿ ಹಾಕಿದ ಕೀರ್ತಿ ಇದಕ್ಕೆ ಸಲ್ಲಬೇಕು. ಸುಲಭವಾಗಿ ಮತ್ತು ವೇಗವಾಗಿ ತಾತ್ಕಾಲಿಕ ಮನೆಯಾಗಬೇಕು ಎಂದಾದಲ್ಲಿ ಮೊರೆಹೋಗುವುದು ಬಿದಿರನ್ನು. ಪ್ಲಾಸ್ಟಿಕ್, ಫೈಬರ್‌ಗಳ ಹಾವಳಿಯಿಂದಾಗಿ ಬಿದಿರಿನ ಬೇಡಿಕೆ ಇಳಿದಿದ್ದರೂ ಪರಿಸರ ಪ್ರಿಯರು ಕೈಬಿಟ್ಟಿಲ್ಲ.
ಮುಳ್ಳು ಬಿದಿರು, ಸಾದಾ ಬಿದಿರು, ಹಸಿರು ಬಿದಿರು, ವೋಟೆ ಬಿದಿರು ಎಂಬಿತ್ಯಾದಿ ಉಪಜಾತಿಗಳಿವೆ. ಬಿದಿರು ಹುಲ್ಲಿನ ಪ್ರಭೇದಕ್ಕೆ ಸೇರಿದ್ದಾಗಿದೆ. ಅತ್ಯಂತ ಎತ್ತರಕ್ಕೆ ಬೆಳೆಯುವ ಹುಲ್ಲು ಎಂಬುದಾಗಿ ಬಿದಿರನ್ನು ಪರಿಗಣಿಸಲಾಗಿದೆ. ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುವ ಕೆಲವೇ ಸಸ್ಯಗಳಲ್ಲಿ ಬಿದಿರು ಒಂದಾಗಿದೆ.
ರೈತರ ಪಾಲಿಗೆ ಬಿದಿರು ಕೃಷಿ ಸ್ನೇಹಿತ. ಬೀನ್ಸ್, ಹಲಸಂಡೆ ಬಳ್ಳಿಗಳನ್ನು ಹಬ್ಬಿಸಲು ವೋಟೆ ಬಿದಿರಿನ ಕಾಂಡವನ್ನು ಬಳಸುತ್ತಾರೆ. ಹಗುರವಾಗಿದ್ದು ವಾರ್ಷಿಕ ಬೆಳೆಯ ಫಸಲನ್ನು ಹೊರುವ ಬಹುತೇಕ ತ್ರಾಣ ಇದಕ್ಕಿದೆ. ವರ್ಷದ ನಂತರ ಗೊಬ್ಬರವಾಗಿಯೂ ಬಳಸಬಹುದು. ತೊಂಡೆ, ಹಾಗಲಕಾಯಿ, ಅವರಕಾಯಿ ಚಪ್ಪರಗಳು ಹೀಗೆ ಹಿತ್ತಲ ಚಪ್ಪರಗಳ ಆಸರೆಯಾಗಿ, ಮತ್ತಿತರೆ ಕಾರ್ಯಗಳಿಗೆ ಬಿದಿರು ಬಳಸಲ್ಪಡುತ್ತದೆ.

ಪ್ರಾಣಿಗಳು ಕಂಗಾಲು
ಪೇಪರ್ ತಯಾರಿಕೆಯಿಂದ ಬಿದಿರಿನ ಬೇಡಿಕೆ ಹೆಚ್ಚಾದ ಕಾರಣ ನಗರಗಳಿಗೂ ಪರಿಚಿತವಾದಂತಾಗಿದೆ. ಬಿದಿರಿನ ಸಂತತಿ ಅಳಿಯುತ್ತಿದೆ ಎಂಬ ಕೂಗು ಒಂದೆಡೆ. ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದ ಪೇಪರ್ ಬಗೆಗಿನ ಅಸಡ್ಡೆಯೂ ಹೆಚ್ಚುತ್ತಿದೆ. ಬಿದಿರನ್ನೇ ಆಹಾರವಾಗಿ ನೆಚ್ಚಿಕೊಂಡಿರುವ ಪ್ರಾಣಿಗಳು ಕಂಗಾಲಾಗಿವೆ.

ಹೀಗೂ ಬಳಕೆಯಾಗಿತ್ತು
ಬಿದಿರಿನ ಅನೇಕ ಉಪಯೋಗಗಳನ್ನು ಇಲ್ಲಿ ಕಾಣಬಹುದು. ಗ್ರಹಂಬೆಲ್‌ನ ಮೊದಲ ಫೋನೋಗ್ರಾಫ್ ಬಿದಿರಿನಿಂದ ಮಾಡಲ್ಪಟ್ಟಿತ್ತಂತೆ. ತಾಮಾಸ್ ಆಲ್ವ ಎಡಿಸನ್ ತನ್ನ ಗ್ಲಾಸ್ ಬಲ್ಬ್‌ನಲ್ಲಿ ತಂತುವಾಗಿ ಬಿದಿರನ್ನು ಉಪಯೋಗಿಸಿದ್ದನಂತೆ.

ಉಪಯೋಗ
ರಸ್ತೆ ಸಬಲೀಕರಣಕ್ಕೆ ಬಿದಿರನ್ನು ಒರಿಸ್ಸಾದಲ್ಲಿ ಬಳಸಲಾಗುತ್ತಿದೆ. ಚೀನಾದಲ್ಲಿ ಕಟ್ಟುಮಸ್ತಾದ ಬಿದಿರಿನ ಬ್ರಿಡ್ಜ್‌ಗಳಿದ್ದು, ಸುಮಾರು 16 ಟನ್ ಭಾರ ಸಹಿಸುವಲ್ಲಿ ಸಫಲತೆ ಹೊಂದಿವೆ. ಕಿಡ್ನಿ ತೊಂದರೆಗಳಿಗೆ ಚಿಕಿತ್ಸೆಯಾಗಿ ಕಪ್ಪು ಬಿದಿರನ್ನು ಬಳಸುವ ವಾಡಿಕೆ ಚೀನಾದಲ್ಲಿದೆ. ಬಿದಿರಿನ ಬೇರು ಮತ್ತು ಏಲೆಗಳನ್ನು ಕ್ಯಾನ್ಸರ್ ಚಿಕಿತ್ಸೆಗೂ ಬಳಸುವುದಿದೆ. ಇಂಡೋನೇಷ್ಯಾದ ಒಂದು ಹಳ್ಳಿಯಲ್ಲಿ ಬಿದಿರಿನ ಕೊಳವೆಯಲ್ಲಿ ಸಿಗುವ ನೀರು ಮೂಳೆಗೆ ಸಂಬಂದಿಸಿದ ಖಾಯಿಲೆಯನ್ನು ಗುಣಪಡಿಸುವ ಶಕ್ತಿಯಿದೆ ಎನ್ನುತ್ತಾರೆ. ಪಶುಗಳಿಗೆ ಆಹಾರವಾಗಿ ಹೆಚ್ಚು ಉಪಯುಕ್ತವಾಗಿದೆ. ಬಿದಿರಿನ ಸೊಪ್ಪು ತಿಂದರೆ ಜಾನುವಾರುಗಳು ಹೆಚ್ಚು ಹಾಲು ಹಿಂಡದು ಎಂಬ ಮಾತೂ ಇದೆ. ಯುನೆಸ್ಕೋ ಹೇಳಿರುವಂತೆ ಸುಮಾರು 70 ಹೆಕ್ಟೇರ್ ಬಿದಿರಿನಿಂದ 1000 ಬಿದಿರ ಮನೆಗಳ ನಿರ್ಮಾಣ ಸಾಧ್ಯವಂತೆ. ಇಂದಿಗೂ ಪ್ರಪಂಚದಲ್ಲಿ ಒಂದು ಬಿಲಿಯನ್‌ಗೂ ಹೆಚ್ಚು ಜನ ಬಿದಿರುಮನೆ ಆಶ್ರಿತರಾಗಿದ್ದಾರೆ.

ತಯಾರಿಕೆ
ಟೀ ಶರ್ಟ್, ಕಾಲು ಚೀಲ, ಟೋಪಿ ಮುಂತಾದವುಗಳನ್ನು ಬಿದಿರಿನಿಂದ ತಯಾರಿಸುತ್ತಾರೆ. ಆಭರಣಗಳಿಗೂ ಸೈ ಎನ್ನುತ್ತದೆ ಬಿದಿರು. ನೆಕ್ಲೇಸ್, ಬ್ರಾಸ್ಲೆಟ್, ಓಲೆ ಇತ್ಯಾದಿ ಆಭರಣಗಳನ್ನು ತಯಾರಿಸಬಹುದು. ಬಿದಿರಿನ ಮೇಜು, ಕುರ್ಚಿ ಹಾಗೂ ಇತರೆ ಪೀಠೋಪಕರಣಗಳಿಗೂ ಬೇಡಿಕೆಯಿದೆ. ಜಪಾನ್ ವಿಜ್ಞಾನಿಗಳ ಪ್ರಕಾರ ಬಿದಿರಿನ ಬಟ್ಟೆಗಳನ್ನು 50 ಬಾರಿ ತೊಳೆದು ಬಳಸಿದರೂ ತನ್ನ ಆ್ಯಂಟಿ ಬ್ಯಾಕ್ಟೀರಿಯಾ ಶಕ್ತಿಯನ್ನು ಹಾಗೆ ಉಳಿಸಿಕೊಂಡಿರುತ್ತದೆ. ಬಿದಿರಿನಿಂದ ಆಕರ್ಷಕ ಗೊಂಬೆಗಳನ್ನು ತಯಾರಿಸಬಹುದಾಗಿದೆ.

ಆಹಾರ
ಏಷ್ಯಾ ಖಂಡದಲ್ಲಿ ಬರುವ ಅನೇಕ ರಾಷ್ಟ್ರಗಳಲ್ಲಿ ಎಳೆಬಿದಿರನ್ನು (ಕಣಿಲೆ, ಕಳ್ಳೆ) ಆಹಾರವಾಗಿ ಉಪಯೋಗಿಸುತ್ತಾರೆ. ಆನೆ ಮತ್ತು ಪಾಂಡಾಗಳ ನೆಚ್ಚಿನ ಮೇವು ಎಳೆ ಬಿದಿರು ಹಾಗೂ ಸೊಪ್ಪಾಗಿದೆ. ಸ್ವಾದಭರಿತ ಬ್ಯಾಂಬು  ಬೀರ್ ಕೂಡ ತಯಾರಿಸಲಾಗುತ್ತದಂತೆ. ಆದರೆ ಭಾರತದಲ್ಲಿ ಹಸಿ ಬಿದಿರಿನ ಬಳಕೆಗೆ ನಿಷೇಧವಿದೆ.
ಹೀಗೆ ಬಹು ಉಪಕಾರಿಯಾಗಿರುವ ಬಿದಿರನ್ನು ಮುಂದಿನ ತಲೆಮಾರುಗಳಿಗೂ ಉಳಿಸಬೇಕಾದ ಅಗತ್ಯ ಇದೆ.

- ಮಂಜುನಾಥ್ ಎಲ್. ಕೆ., ಲಕ್ಷ್ಮೀಪುರ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!