ಕೃಷಿ-ಪರಿಸರ

ಮನೆ ಹಸಿರು

ದೊಡ್ಡ ನಗರಗಳಲ್ಲಿರೋ ಜನ, ಮನೆಯಿಂದ ಹೊರಗೆ ಹೋಗುವುದಕ್ಕೆ ಅಂಜುತ್ತಾರೆ.

ಈ ಬೆಂಗಳೂರು ಅಥವಾ ದೊಡ್ಡ ನಗರಗಳಲ್ಲಿರೋ ಜನ, ಮನೆಯಿಂದ ಹೊರಗೆ ಹೋಗುವುದಕ್ಕೆ ಅಂಜುತ್ತಾರೆ. ಕಾರಣ ಇಷ್ಟೆ. ಹೊರಗಿನ ಟ್ರಾಫಿಕ್, ಹೊಗೆ ಕಿರಿಕಿರಿ. ಇಂಥವರ ಪ್ರಕಾರ ಮನೆಯೊಳಗೇ ಗಾಳಿ ಚೆನ್ನಾಗಿರುತ್ತೆ, ನಾವು ಶುದ್ಧಗಾಳಿಯನ್ನೇ ತೆಗೆದುಕೊಳ್ಳುತ್ತಿರುತ್ತೇವೆ ಎಂಬುದಾಗಿರುತ್ತೆ. ಆದರೆ ಇದು ತಪ್ಪು ಚಿಂತನೆ. ಮನೆ ಸುತ್ತ ಮರಗಳಿಲ್ಲದಿದ್ದರೆ ಅವರು ಕುಡಿಯೋದು ಅಶುದ್ಧ ಗಾಳಿಯನ್ನೇ. ಮನೆಯಲ್ಲಿದ್ದೂ ಶುದ್ಧ ಗಾಳಿ ಕುಡಿಯಬೇಕಾದರೆ ಏನು ಮಾಡಬೇಕು ಗೊತ್ತಾ? ಕೆಲ ಗಿಡಗಳನ್ನು ಬೆಳೆಸಬೇಕು. ಏನು ಮರ, ಗಿಡ ಬೆಳೆಸಬೇಕು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ...

ಅರೆಕಾ ಫಾಮ್
ಗಾಳಿಯಲ್ಲಿರುವ ವಿಷವನ್ನು ತೆಗೆಯುವಲ್ಲಿ ಈ ಮರ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಗಾಳಿಗೆ ತೇವವನ್ನು ಬಿಡುವ ಮೂಲಕ ತಂಗಾಳಿ ಬೀಸುವಂತೆ ಮಾಡುತ್ತದೆ. ಅಲ್ಲದೆ ಮಣ್ಣಿನಲ್ಲಿರುವ ಉಪ್ಪಿನ ಅಂಶವನ್ನೂ ಹೀರಿಕೊಳ್ಳುತ್ತದೆ. ಇದನ್ನು ಬೆಳೆಸುವುದು ಸುಲಭದ ಕೆಲಸವೇ ಬಿಡಿ.

ಲೇಡಿ ಫಾಮ್
ಇದು ನಿಧಾನಗತಿಯಲ್ಲಿ ಬೆಳೆಯುವುದರಿಂದ ಇದನ್ನು ಬೆಳೆಸುವುದು ತುಂಬಾ ಸುಲಭ. ಇದಕ್ಕೆ ಕೀಟಗಳೂ ಅಂಟಿಕೊಳ್ಳುವುದಿಲ್ಲ. ಉತ್ತಮ ಆಮ್ಲಜನಕ ನೀಡುವುದರ ಜತೆಗೆ ಶುದ್ಧ ಗಾಳಿ ನೀಡುತ್ತದೆ.

ಬಂಬೂ ಫಾಮ್
ಇದು 6 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು. ಇದಕ್ಕೂ ಕ್ರಿಮಿಕೀಟಗಳು ಅಂಟಿಕೊಳ್ಳುವುದು ಕಡಿಮೆ. ಅರೆಕಾ ಮತ್ತು ಲೇಡಿ ಫಾಮ್‌ಗಿಂತಲೂ ಗಾಳಿಯಲ್ಲಿನ ವಿಷವನ್ನು ತೆಗೆಯುವಲ್ಲಿ ಪರಿಣಾಮಕಾರಿ.

ರಬ್ಬರ್ ಪ್ಲಾಂಟ್
ಸ್ಪಲ್ವ ಬೆಳಕು ಮತ್ತು ಕಡಿಮೆ ತಾಪಮಾನದಲ್ಲೂ ಬೆಳೆಯುವ ಗಿಡವೆಂದರೆ ರಬ್ಬರ್ ಪ್ಲಾಂಟ್. ಇದು ಗಾಳಿಯಲ್ಲಿರುವ ಯುಬಿಕ್ವಿಟೋಸ್ ರಾಸಾಯನಿಕವನ್ನು ಹೀರಿಕೊಳ್ಳುತ್ತದೆ. ಇದು 8 ಅಡಿಗಳ ಉದ್ದಕ್ಕೆ ಬೆಳೆಯಬಲ್ಲದು.

ಡ್ರೆಕೇನಾ ಜಾನೆಟ್ ಕ್ರೇಗ್
ಗಾಳಿಯಲ್ಲಿನ ಟ್ರಿಕ್ಲೋರೋಥಿಯಾನ್ ಅನ್ನು ಇದು ಹೀರಿಕೊಳ್ಳುತ್ತದೆ. ಈ ರಾಸಾಯನಿಕವು ಜೆರಾಕ್ಸ್ (ಫೋಟೋಕಾಪಿ) ಹಾಳೆಗಳಿಂದ ಬಿಡುಗಡೆಯಾಗುತ್ತದೆ. ಈ ಗಿಡವು 10 ಅಡಿಗಳಷ್ಟು ಎತ್ತರಕ್ಕೆ ಬೆಳೆಯಬಲ್ಲದು.

ಇಂಗ್ಲಿಷ್ ಇವ್ವಿ

ತೂಗಾಡುವ ಬೊಕ್ಕೆಗಳಲ್ಲಿ ಇದು ಚೆನ್ನಾಗಿ ಬೆಳೆಯುತ್ತದೆ. ಮನೆಯ ಹೊರಗೆ ತೂಗು ಹಾಕಿ ಇದನ್ನು ಬೆಳೆಸಬಹುದಾಗಿದೆ. ಇದು ಕೂಡ ಗಾಳಿಯಲ್ಲಿನ ಫಾರ್ಮಾಲ್ಡ್‌ಹೈಡ್ ಅನ್ನು ಹೀರಿಕೊಂಡು ಶುದ್ಧ ಗಾಳಿಯನ್ನು ಹೊರಹಾಕುತ್ತದೆ. ಇದನ್ನು ಮನೆಯ ಗೋಡೆಗೆ ಅಂಟಿಕೊಂಡಂತೆಯೂ ಬೆಳೆಸಬಹುದಾಗಿದೆ.

ಡ್ವಾರ್ಫ್ ಡೇಟ್ ಫಾಮ್
ಇದು 6 ಅಡಿಗಳಷ್ಟು ಬೆಳೆಯಬಲ್ಲದು, ಆದರೆ ಬೆಳವಣಿಗೆಯ ಗತಿ ನಿಧಾನ. ಇದು ಕಡಿಮೆ ಬೆಳಕಲ್ಲೂ ಬೆಳೆಯಬಲ್ಲದು. ಗಾಳಿಯಲ್ಲಿನ ಕ್ಸಿಲೇನ್ ವಿಷವನ್ನು ತೆಗೆಯುವಲ್ಲಿ ಪರಿಣಾಮಕಾರಿ.

ಫಿಕಸ್ ಅಲಿ
ಇದು ಮೂರು ರೀತಿಯಲ್ಲಿ ಬೆಳೆಯಬಲ್ಲದು. ಸಾಲಿಟರಿ ಪ್ಲಾಂಟ್, ಬುಷ್ ಮತ್ತು ಬ್ರೈಡೆಡ್ ರೀತಿಯಲ್ಲಿ ಬೆಳೆಯುತ್ತದೆ. ಎಲೆಗಳು ಚಾಚಲು ಅವಕಾಶವಿಲ್ಲದಿದ್ದರೆ ಈ ಗಿಡ ತನ್ನಲ್ಲೇ ಅವುಗಳನ್ನು ಕರಗಿಸಿಕೊಳ್ಳುತ್ತದೆ. ಇದು ಈ ಗಿಡದ ವಿಶೇಷ. ಇದು ಒಳ್ಳೆಯ ಗಾಳಿಯನ್ನು ಹೊರಸೂಸುತ್ತದೆ.

ಬೋಸ್ಟನ್ ಫೆರ್ನ್
ಇದು ಸೊಂಪಾಗಿ ಬೆಳೆಯುತ್ತದೆ, ಆದರೆ ಹೂ ಬಿಡುವುದಿಲ್ಲ. ಇದು ಕೂಡ ತೂಗಿ ಹಾಕುವ ಬ್ಯಾಸ್ಕೆಟ್‌ನಲ್ಲಿ ಬೆಳೆಸಬಹುದು. ಇದು ಕೂಡ ಗಾಳಿಯಲ್ಲಿನ ರಾಸಾಯನಿಕ ತೆಗೆಯುವಲ್ಲಿ ಪರಿಣಾಮಕಾರಿ. ಹೀಗಾಗಿ ಮನೆಯಲ್ಲಿ ಒಳ್ಳೆ ಉಸಿರು ತೆಗೆದುಕೊಳ್ಳಬಹುದು.

-ಮಂಜುನಾಥ್ ಎಸ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!