ಕೃಷಿ-ಪರಿಸರ

ವಿಚಿತ್ರ ಜೀವ

ನೀವು ವಿಶ್ವವನ್ನೇ ಸುತ್ತಿರಬಹುದು, ಕೋಶವನ್ನೂ ಓದಿರಬಹುದು. ಆದರೆ ನಿಸರ್ಗದ ಪ್ರತಿಯೊಂದು...

ನೀವು ವಿಶ್ವವನ್ನೇ ಸುತ್ತಿರಬಹುದು, ಕೋಶವನ್ನೂ ಓದಿರಬಹುದು. ಆದರೆ ನಿಸರ್ಗದ ಪ್ರತಿಯೊಂದು ಅಚ್ಚರಿಯನ್ನೂ ತಿಳಿದಿರಲು ಸಾಧ್ಯವಿಲ್ಲ. ನಿಮಗೆ ಗೊತ್ತೇ? ನೀವಿದನ್ನು ಓದಿ ಮುಗಿಸುವ ಮುನ್ನ ಹೊಸ ಪ್ರಾಣಿಯೊಂದರ ಅವಿಷ್ಕಾರ ಆಗಿರುತ್ತದೆ. ಹೊಸ ಸರ್‌ಪ್ರೈಸ್ ನಿಮ್ಮ ಮುಂದಿರುತ್ತದೆ. ಹೌದು. ಇಂತಹ ಪ್ರಾಣಿಗಳೂ ಇವೆಯೇ ಎಂಬಂತೆ ಅಚ್ಚರಿ ಮೂಡಿಸುವ ಕೆಲವೊಂದು ವಿಚಿತ್ರ ಪ್ರಾಣಿಗಳಿವು.

ಗೋಬ್ಲಿನ್ ಶಾರ್ಕ್
ಈ ಅಪರೂಪದ ಶಾರ್ಕ್ ಅನ್ನು 'ಜೀವಂತ ಪಳೆಯುಳಿಕೆ' ಎಂದೂ ಕರೆಯುತ್ತಾರೆ. ಅದರೆ ಇದರ ಕುಟುಂಬವು 120 ದಶಲಕ್ಷ ವರ್ಷಗಳಷ್ಟು ಹಳೆಯದು. 330 ಅಡಿಗಿಂತಲೂ ಆಳದಲ್ಲಿ ವಾಸಿಸುವ ಈ ಶಾರ್ಕ್‌ಗಳು ಮಾನವನಿಗೆ ಅಪಾಯಕಾರಿಯಲ್ಲ.

ಹಾಕ್-ಮಾತ್ ಗುನುಗುಹಕ್ಕಿ
ಹೂವುಗಳ ಮೇಲೆ ಕುಳಿತು ಗುನುಗುವಂತಹ ಈ ಹಕ್ಕಿಗಳು ನೋಡಲು ನಮ್ಮ ದೇಶದಲ್ಲಿ ಕಂಡುಬರುವ ಗುನುಗುಹಕ್ಕಿಯಂತೆಯೇ ಕಾಣುತ್ತವೆ. ವಿಶೇಷವೆಂದರೆ ಇವುಗಳಿಗೆ ಬಣ್ಣಗಳನ್ನು ಗುರುತು ಹಚ್ಚುವ ಸಾಮರ್ಥ್ಯ ಇವೆ.

ಪಾಂಡಾ ಇರುವೆ
ಮ್ಯುಟಿಲಿಡೈ ಎಂಬ ಜಾತಿಗೆ ಸೇರಿದ ಇರುವೆಗಳಿವು. ಈ ಜಾತಿಯ ಹೆಣ್ಣಿರುವೆ ದೊಡ್ಡದಾಗಿದ್ದು, ಮೈತುಂಬಾ ಕೂದಲುಗಳಿರುತ್ತವೆ. ಚಿಲಿಯಲ್ಲಿ ಹೆಚ್ಚಾಗಿ ಕಂಡುಬರುವ ಈ ಇರುವೆಗಳನ್ನು ಕೌ ಕಿಲ್ಲರ್ ಅಥವಾ ಕೌ ಆ್ಯಂಟ್ ಎಂದೂ ಕರೆಯುತ್ತಾರೆ. ಇದು ಕಚ್ಚಿದರಂತೂ ನೋವು ತಡೆಯಲಸಾಧ್ಯ. ಕಪ್ಪು ಮತ್ತು ಬಿಳಿ ಬಣ್ಣದ ಕೂದಲುಗಳು ತುಂಬಿರುವ ಇರುವೆಗಳನ್ನು ಪಾಂಡಾ ಇರುವೆ ಎನ್ನುತ್ತಾರೆ. ಏಕೆಂದರೆ ಇದು ಚೀನಾದ ಬೃಹತ್ ಪಾಂಡಾಗಳನ್ನೇ ಹೋಲುತ್ತದೆ.

ಗ್ಲಾಕಸ್ ಅಟ್ಲಾಂಟಿಕಸ್
ಇದನ್ನು ನೀಲ ಡ್ರ್ಯಾಗನ್ ಎಂದೂ ಕರೆಯುತ್ತಾರೆ. ಸಾಗರದ ಬಿಸಿ ನೀರಿನಲ್ಲಿ ನೀವಿದನ್ನು ಕಾಣಬಹುದು. ಇದು ತನ್ನ ಹೊಟ್ಟೆಯಲ್ಲಿ ಅನಿಲ ತುಂಬಿದ ಮೂಟೆಯನ್ನು ಹೊತ್ತಿರುತ್ತದೆ. ಹಾಗಾಗಿ ನೀರಿನ ಮೇಲ್ಮೈನಲ್ಲೇ ಚಲಿಸುತ್ತಿರುತ್ತವೆ.

ಕೆಂಪು ತುಟಿಯ ಮೀನು
ನೋಡಲು ವಿಚಿತ್ರವಾಗಿ ಕಾಣುವ ಈ ಮೀನು ಗ್ಯಾಲಪಾಗೋಸ್ ಐಲ್ಯಾಂಡ್‌ನಲ್ಲಿ ಕಾಣಸಿಗುತ್ತದೆ. ಇದರ ತುಟಿ ಕೆಂಪು ಬಣ್ಣದ್ದಾಗಿದ್ದು, ಈಗ ತಾನೇ ಲಿಪ್‌ಸ್ಟಿಕ್ ಹಚ್ಚಿ ಬಂದ ಹೆಣ್ಣಿನಂತೆ ಕಾಣುತ್ತದೆ. ಸಮುದ್ರದಾಳದಲ್ಲಿ ನಡೆಯಲು ತನ್ನ ರೆಕ್ಕೆಗಳನ್ನು ಆಶ್ರಯಿಸುತ್ತವೆ. ಇದು ಬಹಳ ಕಷ್ಟದಿಂದ ಅಂದರೆ ನಿಧಾನವಾಗಿ ಈಜುತ್ತದೆ.

ಬೃಹತ್ ಐಸೋಪಾಡ್
ಸದ್ಯ ಜೀವಂತವಿರುವ ಐಸೋಪಾಡ್‌ಗಳಲ್ಲಿ ಅತ್ಯಂತ ದೊಡ್ಡದಿದು. ಸಮುದ್ರದಾಳದಲ್ಲಿ ನಡೆಯುವ ಒಂದು ಪ್ರಕ್ರಿಯೆಯಿಂದಾಗಿ ಈ ಐಸೋಪಾಡ್‌ಗಳು ದೈತ್ಯಾಕಾರವಾಗಿ ಬೆಳೆದಿರುತ್ತವೆ. ಐಸೋಪಾಡ್‌ಗಳು ಮಾತ್ರವಲ್ಲ, ಇತರೆ ಜೀವಿಗಳೂ ಸಹ ಈ ಪ್ರಕ್ರಿಯೆಯಿಂದ ದೈತ್ಯಾಕಾರ ತಳೆಯುತ್ತವೆ. ನೀರಿನ ಮೇಲ್ಭಾದಲ್ಲಿರುವ ತನ್ನದೇ ಜಾತಿಯ ಜೀವಿಗಳಿಗಿಂತಲೂ ಇವು ದೊಡ್ಡದಾಗುತ್ತವೆ.

ಸಮುದ್ರ ಹಂದಿ
ಸಾಗರದಾಳದಲ್ಲಿ ವಿಶೇಷವಾಗಿ ಅಟ್ಲಾಂಟಿಕ್, ಪೆಸಿಫಿಕ್ ಹಾಗೂ ಹಿಂದೂ ಮಹಾಸಾಗರದಲ್ಲಿ ಬದುಕುವ ಹಂದಿಯಿದು. ಸುಮಾರು ಒಂದು ಸಾವಿರ ಮೀಟರ್ ಆಳದಲ್ಲಿರುತ್ತವೆ. ಸಮುದ್ರದಾಳದ ಮಣ್ಣಿನಲ್ಲಿನ ಸಾವಯವ ಕಣಗಳನ್ನು ಹೊರತೆಗೆದು ಅದನ್ನೇ ಆಹಾರವಾಗಿ ಬಳಸುತ್ತದೆ.

ನೇರಳೆ ಕಪ್ಪೆ
ಇದು ಭಾರತದಲ್ಲಿ ಮಾತ್ರ ಕಂಡುಬರುತ್ತದೆ. ಉಬ್ಬಿದ ದೇಹ ಹೊಂದಿರುವ ಈ ಕಪ್ಪೆ ವಿಚಿತ್ರವಾದ ಮೂತಿ ಹೊಂದಿದೆ. ಇದು ವರ್ಷದಲ್ಲಿ ಎರಡು ವಾರಗಳ ಕಾಲ ಮಾತ್ರ ಭೂಮಿಯ ಮೇಲ್ಮೈಗೆ ಬರುತ್ತದೆ. ಉಳಿದ ಕಾಲವನ್ನು ಭೂಗತವಾಗಿಯೇ ಕಳೆಯುತ್ತದೆ. ಈ ಸಮಯದಲ್ಲಿ ಸಂತಾನೋತ್ಪತ್ತಿ ಕಾರ್ಯವನ್ನು ಮಾಡುತ್ತದೆ.

ಕೂದಲು ಕೀಟ
2009ರಲ್ಲಿ ವೆನಿಜುವೆಲಾದಲ್ಲಿ ಮೊಟ್ಟಮೊದಲ ಬಾರಿಗೆ ಕಂಡುಬಂತು. ಇದು ನೋಡಲು ಅನ್ಯಗ್ರಹ ಜೀವಿಯಂತಿದೆ. ಮೈಯಲ್ಲೆಲ್ಲಾ ಕೂದಲಿರುವ ಚಿಕ್ಕ ಕೀಟವಿದು. ಇದರ ಬಗ್ಗೆ ಅಧ್ಯಯನಗಳು ನಡೆಯುತ್ತಿವೆ.


ಮ್ಯಾಂಟಿಸ್ ಸಿಗಡಿ
ಇದಕ್ಕೆ 'ಸಮುದ್ರ ಮಿಡತೆ', 'ಪ್ರಾನ್ ಕಿಲ್ಲರ್‌', 'ಹೆಬ್ಬೆರಳು ಸೀಳಿಗ' ಎಂಬ ಹೆಸರುಗಳೂ ಇವೆ. ಉಷ್ಣವಲಯದ ನೀರಿನಲ್ಲಿ ಕಾಣಸಿಗುವ ಆಕ್ರಮಣಕಾರಿ ಸಿಗಡಿಯಿದು. ಇವುಗಳು ಬಿಲಗಳಲ್ಲೇ ಹೆಚ್ಚಾಗಿ ವಾಸಿಸುತ್ತವೆ.

ಗೆರೆಯುಳ್ಳ ಟೆನ್ರೆಕ್
ಆಫ್ರಿಕಾದ ಮಡಗಾಸ್ಕರ್‌ನಲ್ಲಿ ಕಾಣಸಿಗುತ್ತದೆ. ಈ ಅತಿ ಸಣ್ಣ ಪ್ರಾಣಿಯು ಹಾವುಗಳು, ಕೀಟಗಳಂತೆ ಶಬ್ದ ಹೊರಡಿಸುವ ಸಾಮರ್ಥ್ಯವನ್ನು ಹೊಂದಿದೆ.

- ದಿಯಾ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!