ಕನ್ನಡ ಸೇರಿದಂತೆ ಹತ್ತು ಭಾರತೀಯ ಭಾಷೆಗಳನ್ನು ಒಳಗೊಂಡ 'ಗೆಲಾಕ್ಸಿ ಎಸ್ ಡ್ಯೂ' ಸ್ಯಾಮ್‌ಸಾಂಗ್ ಸ್ಮಾರ್ಟ್ ಫೋನ್‌ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸ್ಮಾರ್ಟ್ ಲ್ಯಾಂಗ್ವೇಜ್ ಎಂಜಿನ್ ಮತ್ತು ಎಚ್‌ಎಸ್‌ಪಿಡಿಎ 21 ಎಮ್‌ಪಿಬಿಎಸ್(3ಜಿ) ಡೆಟಾ ಸಂಪರ್ಕವಿದ್ದಲ್ಲಿ ಅಂತರ್ಜಾಲ ಬಳಕೆಯ ವೇಗಕ್ಕಿಂತಲೂ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಬಲ್ಲುದು. 3ಜಿ, ಬ್ಲ್ಯೂಟೂತ್, ವೈ-ಫೈ, ಡ್ಯುಯಲ್ ಸಿಮ್, ಜಿಪಿಎಸ್/ಎಜಿಪಿಎಸ್ ಹೊಂದಿದೆ. 1500ಟ ಝ ಬ್ಯಾಟರಿ ಪವರ್ ಇದೆ. 8 ಗಂಟೆಗಳ ಕಾಲ ಮಾತನಾಡಬಹುದಾಗಿದೆ. ಬೆಲೆ 10,999 ರುಪಾಯಿ. 2 ಬಣ್ಣಗಳಲ್ಲಿ ಲಭ್ಯ.