ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕೃಷಿ-ಪರಿಸರ

ಬಾವಿ ಆವಿ!

ಈಗಲೂ ನಮ್ಮ ಮಧ್ಯದಲ್ಲಿರುವ ತೆರೆದ ಬಾವಿಗಳ ವಿನ್ಯಾಸವನ್ನೊಮ್ಮೆ ಗಮನಿಸಿ ನೋಡಿ. ಯಾವುದೇ ಆಧುನಿಕ ಯಂತ್ರಗಳಿಲ್ಲದೆ...

Rashmi Kasaragodu
Updated On : 19 Jan 2014, 1:43 am

ಈಗಲೂ ನಮ್ಮ ಮಧ್ಯದಲ್ಲಿರುವ ತೆರೆದ ಬಾವಿಗಳ ವಿನ್ಯಾಸವನ್ನೊಮ್ಮೆ ಗಮನಿಸಿ ನೋಡಿ. ಯಾವುದೇ ಆಧುನಿಕ ಯಂತ್ರಗಳಿಲ್ಲದೆ 100ಕ್ಕೂ ಹೆಚ್ಚು ಅಡಿ (ನೀರು ಲಭ್ಯವಾಗುವ) ಭೂಮಿ ಅಗೆದು, ನಂತರ ಅದಕ್ಕೆ ವಿಶೇಷವಾದ ರೀತಿಯಲ್ಲಿ (ಸಿಮೆಂಟ್, ಇನ್ನಿತರೆ ವಸ್ತುಗಳನ್ನು ಬಳಸದೆ) ಕೇವಲ ಒಣ ಕಲ್ಲಿನಿಂದಲೇ ಬಾವಿಗಳನ್ನು ನಿರ್ಮಾಣ ಮಾಡಲಾಗಿದೆ.
ಆಯಾ ಗ್ರಾಮಗಳಲ್ಲಿ ಅಂತರ್ಜಲದ ಆಧಾರದಲ್ಲಿ ಬಾವಿಗಳ ಅಗಲ ನಿರ್ಧರಿಸುತ್ತಿದ್ದರು. ತೀರಾ ಆಳವಾಗಿ ಭೂಮಿ ಅಗೆಯುವ ಸಂದರ್ಭದಲ್ಲಿ ಅಗಲವಾದ ಬಾವಿಗಳು, ಕಡಿಮೆ ಆಳದಲ್ಲಿ ನೀರು ಲಭ್ಯವಾದಲ್ಲಿ ಕಡಿಮೆ ಅಗಲ ಹೊಂದಿರುವ ಬಾವಿ ನಿರ್ಮಿಸುತ್ತಿದ್ದರು.
ಗುಣಮಟ್ಟ
ಬಾವಿಗಳನ್ನು ನಿರ್ಮಿಸಬೇಕಾದರೆ ನುರಿತ, ಅನುಭವಿಕ ತಜ್ಞರಿಂದ ಜಾಗ ಗುರುತಿಸಿ ನೀರಿನ ಆಳ, ವಾಸ್ತು ಶಾಸ್ತ್ರ, ದಿಕ್ಕುಗಳಿಗೆ ಪ್ರಾಮುಖ್ಯ ನೀಡುತ್ತಿದ್ದರು. ಅಚ್ಚುಕಟ್ಟಾಗಿ, ಕ್ರಮಬದ್ಧವಾಗಿ ವೈಜ್ಞಾನಿಕ ರೀತಿಯಲ್ಲಿ ಬಹು ಕಾಲಗಳವರೆಗೆ ಗುಣಮಟ್ಟ ಕಾಯ್ದುಕೊಳ್ಳುವಂತೆ ಬಾವಿಗಳನ್ನು ಸುಂದರವಾಗಿ ನಿರ್ಮಿಸುತ್ತಿದ್ದರು. ನೀರು ಸೇದು (ಗಡೆಯುಳ್ಳ) ಬಾವಿ, ಮಟ್ಟಿ ಬಾವಿ (ಚರ್ಮದ ಪುಟ್ಟಿ)ಯ ಮೂಲಕ ರೈತರು ಎತ್ತುಗಳ ಸಹಾಯದಿಂದ ನೀರನ್ನು ಮೇಲೆತ್ತಿ ಹೊಲಗಳಿಗೆ ಹಾಯಿಸಲು ಬಳಸುತ್ತಿದ್ದರು. ಪಾವಟನಗಿ ಬಾವಿ, ಸುರಂಗ ಮಾರ್ಗವುಳ್ಳ ಬಾವಿ ಹೀಗೆ ಅನೇಕ ರೀತಿಯ ಆಕರ್ಷಕ ಬಾವಿಗಳಿದ್ದವು.
ಹಾನಿಕಾರಕ ಅಂಶ ಕಮ್ಮಿ
ತೆರೆದ ಬಾವಿಗಳು ಹತ್ತಾರು ಸಮಸ್ಯೆಗಳಿಗೆ ಕಾರಣವಾಗುತ್ತಿವೆ ಎನ್ನುವ ಮಾತುಗಳ ಮಧ್ಯೆಯೇ ಈ ಬಾವಿಗಳು ನಿರ್ವಹಣೆಗೆ ಅಷ್ಟೇ ಅನುಕೂಲಕಾರಿಯಾಗಿದ್ದವು. ಬಾವಿಯಲ್ಲಿನ ನೀರು ಅಂತರ್ಜಲದ ಮೂಲಕ ಸಂಗ್ರಹವಾದ ಹತ್ತಾರು ತಾಸುಗಳ ನಂತರ ಸಾರ್ವಜನಿಕರು ಬಳಸುತ್ತಿದ್ದ ಹಿನ್ನೆಲೆಯಲ್ಲಿ ನೀರಿನಲ್ಲಿರುವ ಹಲವಾರು ಹಾನಿಕಾರಕ ವಸ್ತುಗಳು ಕಡಿಮೆಯಾಗುತ್ತಿದ್ದವು. ಆದರೆ, ಇಂದು ತೆರೆದ ಬಾವಿಗಳ ಆಳಕ್ಕಿಂತಲೂ ಹೆಚ್ಚಿನ ಆಳದಲ್ಲಿ ಕೊಳವೆ ಬಾವಿ ಕೊರೆದು ವಿದ್ಯುತ್ ಬಳಸಿ ಸಾಕಷ್ಟು ನೀರು ಬಳಕೆ ಮಾಡಲಾಗುತ್ತಿದೆ. ಇದು ಕೂಡಾ ಅಂತರ್ಜಲ ಕುಸಿತ ಹಾಗೂ ತೆರೆದ ಬಾವಿಗಳ ಭವಿಷ್ಯಕ್ಕೆ ಕುತ್ತಾಗಿದೆ.


2 ಕೋಟಿಗೂ ಅಧಿಕ ತೆರೆದ ಬಾವಿ!
ರಾಜ್ಯದ ಪಂಚಾಯತ್‌ರಾಜ್ ಇಲಾಖೆಯ ಪಂಚತಂತ್ರ ತಂತ್ರಾಂಶದಲ್ಲಿ ದಾಖಲಾಗಿರುವ ಮಾಹಿತಿ ಆಧಾರದಲ್ಲಿ ರಾಜ್ಯದಲ್ಲಿ 2 ಕೋಟಿಗೂ ಅಧಿಕ ತೆರೆದ ಬಾವಿಗಳಿದ್ದು, ಅವುಗಳಲ್ಲಿ 25 ಲಕ್ಷದಷ್ಟು ಮಾತ್ರ ನೀರು ಹೊಂದಿವೆ. ಇನ್ನುಳಿದವು ಬತ್ತಿ ಹೋಗಿವೆ. ಈ ಬಾವಿಗಳ ಪುನಶ್ಚೇತನಕ್ಕೆ (ಅಂತರ್ಜಲ ಹೆಚ್ಚಿಸಿ) ವಿಶೇಷ ಯೋಜನೆ ರೂಪಿಸಿ, ರಾಜ್ಯದ ಪ್ರತಿಯೊಂದು ಗ್ರಾಮಗಳ ಓಣಿ ಓಣಿಗಳಲ್ಲಿ ನಮ್ಮ ಹಿಂದಿನ ಹಿರಿಯರ ನೆನಪಿನ ಸ್ಮಾರಕದಂತಿರುವ ಆಕರ್ಷಕ ತೆರೆದ ಬಾವಿ ಉಳಿಸಿಕೊಳ್ಳಬೇಕಿದೆ. ಇವುಗಳ ನಿರ್ಮಾಣದಲ್ಲಿ ನಮ್ಮ ಹಿರಿಯರ ಜಾಣ್ಮೆಯನ್ನು ಮುಂದಿನ ತಲೆಮಾರಿಗೆ ಉಳಿಸಿ, ತೋರ್ಪಡಿಸಬೇಕಿದೆ.

ಶಿವಕುಮಾರ ಕುಷ್ಟಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments