ಬಿ ಎಸ್ ಎಫ್ ನ 'ನನ್ನ ಭೂಮಿ, ನನ್ನ ಕರ್ತವ್ಯ' ಕಾರ್ಯಕ್ರಮದ ಸಂಗ್ರಹ ಚಿತ್ರ 
ಕೃಷಿ-ಪರಿಸರ

ಗಡಿಯಲ್ಲಿ ನಾಲ್ಕು ಲಕ್ಷ ಸಸಿ ನೆಟ್ಟ ಬಿ ಎಸ್ ಎಫ್

ಗಡಿ ರಕ್ಷಣಾ ಪಡೆ (ಬಿ ಎಸ್ ಎಫ್), ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬುಧವಾರ ಗಡಿಯಲ್ಲಿ ಸುಮಾರು ೪ ಲಕ್ಷ ಗಿಡಗಳನ್ನು ನೆಟ್ಟಿದೆ.

ಅಗರ್ತಲಾ: ಗಡಿ ರಕ್ಷಣಾ ಪಡೆ (ಬಿ ಎಸ್ ಎಫ್), ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಬುಧವಾರ ಗಡಿಯಲ್ಲಿ ಸುಮಾರು ೪ ಲಕ್ಷ ಗಿಡಗಳನ್ನು ನೆಟ್ಟಿದೆ.

"ಭಾರತದ ಪೂರ್ವವ ಬಾಂಗ್ಲಾದೇಶ ಮತ್ತು ಉತ್ತರದ ಪಾಕಿಸ್ತಾನ ಗಡಿಯಲ್ಲಿ, ಬುಧವಾರ ತನ್ನ ಮುಖ್ಯ ಕಚೇರಿಗಳ ಆಸುಪಾಸಿನಲ್ಲಿ ಸುಮಾರು ೪೦೦೦೦೦ ಸಸಿಗಳನ್ನು ಬೆಳಗ್ಗೆ ೧೦ ಘಂಟೆಗೆ ಸುಮಾರು ೩೦ ನಿಮಿಷಗಳ ಸಮಯದಲ್ಲಿ ನೆಡಲಾಗಿದೆ" ಎಂದು ಬಿ ಎಸ್ ಎಫ್ ವಕ್ತಾರ ಡಿ ಎಸ್ ಭಾಟಿ ತಿಳಿಸಿದ್ದಾರೆ.

"ಈ ಸಸಿ ನೆಡುವ ಕಾರ್ಯಕ್ರಮ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ನಡೆಸಲಾಗಿದೆ" ಎಂದು ಕೂಡ ಅವರು ತಿಳಿಸಿದ್ದಾರೆ.

ಬಿ ಎಸ್ ಎಫ್ ಕಳೆದ ವರ್ಷ ೩೦ ನಿಮಿಷಗಳಲ್ಲಿ ೩೦೯೦೦೦ ಸಸಿಗಳನ್ನು ನೆಟ್ಟು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿಕೊಂಡಿತ್ತು, ಈಗ ತನ್ನದೇ ದಾಖಲೆಯನ್ನು ಮುರಿದಿದೆ.

ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ತನ್ನದೇ ವಿಭಿನ್ನ ರೀತಿಯಲ್ಲಿ ಕೊಡುಗೆ ನೀಡುವ ಸಲುವಾಗಿ ಬಿ ಎಸ್ ಎಫ್ ಆಗಸ್ಟ್ ೧೫ ೨೦೧೩ ರಲ್ಲಿ 'ನನ್ನ ಭೂಮಿ, ನನ್ನ ಕರ್ತವ್ಯ' ಎಂಬ ಹೆಸರಿನ ಕಾರ್ಯಕ್ರಮದಡಿ ಸಸಿ ನೆಡುವ ಅಭಿಯಾನಕ್ಕೆ ಚಾಲನೆ ನೀಡಿತ್ತು. ೨೦೧೩ರಿಂದ ಒಂದೂವರೆ ಕೋಟಿಗೂ ಹೆಚ್ಚು ಸಸಿಗಳನ್ನು ನೆಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

ನೇಪಾಳ ಪ್ರವಾಹ: ಭಾರತಕ್ಕೆ ದೊಡ್ಡ ಆತಂಕವಿಲ್ಲ, ಜಲಾಶಯಗಳ ನೀರಿನ ಮಟ್ಟ ಇಳಿಕೆ: ಕೇಂದ್ರ ಸ್ಪಷ್ಟನೆ