ಎರಡು ತಲೆ ನಾಗರಹಾವು 
ಕೃಷಿ-ಪರಿಸರ

ಎರಡು ತಲೆ ನಾಗರಹಾವು ಚೈನಾ ಮೃಗಾಲಯಕ್ಕೆ ಸೇರ್ಪಡೆ

ಚೈನಾದ ನ್ಯಾನ್ನಿಂಗ್ ನಗರದ ಜೂವೊಂದು ಎರಡು ತಲೆಯ ನಾಗರ ಹಾವನ್ನು ದತ್ತು ತೆಗೆದುಕೊಂಡಿದೆ. ಬಹಳ ವಿರಳ ಎನ್ನಲಾಗುವ ಈ ಹಾವು ಈಗಾಗಲೇ ೧೫ ದಿನಗಳವರೆಗೆ ಬದುಕಿದ್ದು,

ಬೀಜಿಂಗ್: ಚೈನಾದ ನ್ಯಾನ್ನಿಂಗ್ ನಗರದ ಜೂವೊಂದು ಎರಡು ತಲೆಯ ನಾಗರ ಹಾವನ್ನು ದತ್ತು ತೆಗೆದುಕೊಂಡಿದೆ. ಬಹಳ ವಿರಳ ಎನ್ನಲಾಗುವ ಈ ಹಾವು ಈಗಾಗಲೇ ೧೫ ದಿನಗಳವರೆಗೆ ಬದುಕಿದ್ದು, ಇದನ್ನು ಉಳಿಸಲು ವಿಶೇಷ ತಜ್ಞರ ಅವಶ್ಯಕತೆ ಇದೆ ಎಂದು ಮೃಗಾಲಯ ತಿಳಿಸಿದೆ.

೨೦ ಸೆಂಟಿ ಮೀಟರ್ ಉದ್ದವಿರುವ ಈ ಹಾವಿಗೆ ಎರಡು ಮೆದುಳು ಇದ್ದು, ಒಂದು ಜೀರ್ಣಾಂಗ ವ್ಯವಸ್ಥೆ ಹೊಂದಿದೆ. ಇದು ಹಾವಿನ ಸಾಕಾಣೆ ಕೇಂದ್ರದಲ್ಲಿ ಹುಟ್ಟಿದ್ದು, ಉತ್ತಮ ಪೋಷಣೆಗಾಗಿ ಮೃಗಾಲಯಕ್ಕೆ ನೀಡಲಾಗಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಈ ಹಾವು ಈಗ ೫೦ ಗ್ರಾಂ ತೂಗುತ್ತಿದ್ದು, ಸಾಮಾನ್ಯ ನಾಗರ ಹಾವು ಈ ವಯಸ್ಸಿನಲ್ಲಿ ತೂಗುವುದಕ್ಕಿಂದ ೧೫ ಗಾಂ ಕಡಿಮೆ ಇದೆ.

೨೦೦೭ ರಿಂದ ಈ ಮೃಗಾಲಯದಲ್ಲಿ ಹಾವುಗಳ ಕಾಳಜಿ ವಹಿಸುತ್ತಿರುವ ಲಿ ಕೆಕ್ಯಿ, ಇಲ್ಲಿಯವರೆಗೂ ತಾವು ಎರಡು ತಲೆ ಹಾವನ್ನು ನೋಡಿಲ್ಲ ಎಂದಿದ್ದಾರೆ. "ಒಂದು ತಲೆ ಎಡಕ್ಕೆ ಚಲಿಸಲು ಪ್ರಯತ್ನಿಸಿದರೆ ಮತ್ತೊಂದು ತಲೆ ಬಲಕ್ಕೆ ಚಲಿಸಲು ಪ್ರಯತ್ನಿಸುತ್ತದೆ. ಇದು ಹಾವಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ" ಎಂದು ಅವರು ತಿಳಿಸಿದ್ದಾರೆ.

ಒಂದು ವಾರದ ಮುಂಚೆಯಷ್ಟೇ ಪೊರೆ ಕಳಚಿರುವ ಈ ಹಾವು ಅಂದಿನಿಂದ ಆಹಾರ ಸೇವಿಸಲು ನಿರಾಕರಿಸಿದೆ. ಸದ್ಯಕ್ಕೆ ಅದಕ್ಕೆ ಅಸ್ವಾಭಿಕವಾಗಿ ಆಹಾರ ನೀಡಲಾಗುತ್ತಿದ್ದು, ಹೀಗೆ ಮುಂದುವರೆದರೆ ಅದು ಬದುಕುವುದು ಕಷ್ಟ ಎನ್ನಲಾಗಿದೆ.

ವಿಶ್ವದಾದ್ಯಂತ ಉರಗ ತಜ್ಞರ ಸಲಹೆ-ನೆರವಿಗಾಗಿ ಮೃಗಾಲಯ ಬೇಡಿಕೆಯಿಟ್ಟಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!