ಕುಟುಂಬದ ನಾಲ್ಕು ಸದಸ್ಯರ ಹೊಟ್ಟೆ ತುಂಬಿಸಬಲ್ಲ ಹಾಗೂ ವಿಶ್ವದಲ್ಲೇ ಅತೀ ದೊಡ್ಡ ಟಮೋಟೊ ಹಣ್ಣು ಬೆಳೆಯುವಲ್ಲಿ ಅಮೆರಿಕಾ ಹಾಗೂ ಬ್ರಿಟನ್ ಯಶಸ್ವಿಯಾಗಿದೆ.
ಅಮೆರಿಕಾ ಹಾಗೂ ಬ್ರಿಟನ್ ಒಟ್ಟುಗೂಡಿ ಹೊಸ ಪ್ರಭೇದದ ಟಮೋಟೊ ಬೆಳೆ ಬೆಳೆದಿದ್ದಾರೆ.
ಸಾಮಾನ್ಯ ಟೋಮೋಟೋದ 12 ಪಟ್ಟು ದೊಡ್ಡದಿದ್ದು, ಹತ್ತು ಇಂಚು ಅಗಲದ ಟಮೋಟೊ ಇದಾಗಿದೆ. ಜೈಗ್ಯಾಂಟೋಮೊ ಎಂದು ಹೆಸರಿಡಲಾಗಿರುವ ಈ ಒಂದು ಟಮೋಟೊದಿಂದ ನಾಲ್ಕು ಸಾವಿರ ಜನರಿಗೆ ಸಲಾಡ್ ಮಾಡಬಹುದಾಗಿದೆ.
ಇದರ ಒಂದು ಭಾಗ ಬರ್ಗರ್ ಅಥವಾ ಸ್ಯಾಂಡ್ವಿಚ್‌ಗೆ ಸಾಕಾಗುವಷ್ಟಿದೆ. ಸತತ ಎರಡು ದಶಕಗಳ ಸಂಶೋಧನೆ ನಂತರ ಈ ಪ್ರಭೇದ ಯಶಸ್ವಿಯಾಗಿದೆ.