ರೈತ ಹೇಮಣ್ಣ 
ಕೃಷಿ-ಪರಿಸರ

ಬರ ಮೆಟ್ಟಿ ನಿಂತ ಧೀರ

ನಾಡಿನಾದ್ಯಂತ ಭೀಕರ ಬರ, ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ನೂರಕ್ಕೆ ನೂರರಷ್ಟು ಹಾನಿಯಾಗಿದೆ. ಇನ್ನು ವಿದ್ಯುತ್ ಸಮಸ್ಯೆಯಿಂದ ಪಂಪ್‌ಸೆಟ್...

ನಾಡಿನಾದ್ಯಂತ ಭೀಕರ ಬರ, ಹನಿ ನೀರಿಗೂ ತತ್ವಾರ. ಮಳೆಯಾಶ್ರಿತ ಬೆಳೆ ನೂರಕ್ಕೆ ನೂರರಷ್ಟು ಹಾನಿಯಾಗಿದೆ. ಇನ್ನು ವಿದ್ಯುತ್ ಸಮಸ್ಯೆಯಿಂದ ಪಂಪ್‌ಸೆಟ್ ಆಧರಿತ ಬೆಳೆಯೂ ಒಣಗಲಾರಂಭಿಸಿದೆ. ಆದರೆ ಇದ್ಯಾವುದರ ಹಂಗಿಲ್ಲದೆ ಭೀಕರ ಬರದಲ್ಲಿಯೂ ಬಂಪರ್ ಬೆಳೆ ತೆಗೆದಿದ್ದಾರೆ ಇಲ್ಲೊಬ್ಬ ರೈತ.ಇವರನ್ನು ಈಗ ಬರ ಮೆಟ್ಟಿನಿಂತ ಧೀರ ಎಂದೇ ಕರೆಯಲಾಗುತ್ತಿದೆ.
ಹೆಸರು ಹೇಮಣ್ಣ ಸಣ್ಣಯರಾಶಿ, ಓದಿದ್ದು ಕೇವಲ 7ನೇ ತರಗತಿ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ಗ್ರಾಮದ ಪ್ರಗತಿಪರ ರೈತ ಇವರು. ಈ ವರ್ಷ ರಾಜ್ಯದಲ್ಲಿ ಬರ ಕಾಡುತ್ತಿದ್ದರೂ ಇವರು ಮಾತ್ರ ಲಕ್ಷ ಲಕ್ಷ ರುಪಾಯಿ ಬೆಳೆ ತೆಗೆದಿದ್ದಾರೆ. ಅಷ್ಟೇ ಅಲ್ಲ ಈಗಲೂ ಹೊಲದಲ್ಲಿ ಹಿಂಗಾರು ಬೆಳೆ ಕಂಗೊಳಿಸುತ್ತಿದೆ. ಇದೆಲ್ಲವೂ ಸಾಧ್ಯವಾಗಿದ್ದು ಕೃಷಿ ಹೊಂಡದಿಂದ ಎನ್ನುವುದು ಗಮನಾರ್ಹ ಸಂಗತಿ. 
ಕೃಷಿ ಹೊಂಡ: ಕೃಷಿ ಇಲಾಖೆ ತೋಡಿಸಿದ್ದ ಕೃಷಿ ಹೊಂಡವನ್ನು ಅಷ್ಟಕ್ಕೆ ಬಿಡಲಿಲ್ಲ. ಸ್ವಂತ ಹಣವನ್ನು ಹಾಕಿ 25 ಅಡಿ ಆಳಕ್ಕೆ ಇಳಿಸಿದರು. ಕೇವಲ ಹತ್ತು ಗುಂಟೆ ಭೂಮಿ ಕೃಷಿ ಹೊಂಡ ಈಗ 11 ಎಕರೆ ಬೆಳೆಗೆ ನೀರುಣಿಸಬಹುದಾದಷ್ಟು ನೀರು ಸಂಗ್ರಹಿಸುತ್ತಿದೆ. ಇದರಲ್ಲಿನ ನೀರನ್ನು ಆಯಿಲ್ ಎಂಜಿನ್ ಮೂಲಕ ಬೆಳೆಗೆ ಹನಿ ನೀರಾವರಿ ಪದ್ಧತಿ ಮೂಲಕ ಪೂರೈಕೆ ಮಾಡುತ್ತಿದ್ದಾರೆ. ಹೀಗಾಗಿ ಹಿಂಗಾರು ಮತ್ತು ಮುಂಗಾರು ಬೆಳೆಗೂ ನೀರಿನ ಲಭ್ಯತೆ ಸುಲಭವಾಗಿ ಆಗುತ್ತದೆ. ಆಯಿಲ್ ಎಂಜಿನ್ ಅಳವಡಿಸಿರುವುದರಿಂದ ವಿದ್ಯುತ್ ಸಮಸ್ಯೆಯ ಬಿಸಿಯೂ ಇವರಿಗೆ ತಟ್ಟುವುದಿಲ್ಲ.
ಲಕ್ಷ ಲಕ್ಷ ಬೆಳೆ: ಮುಂಗಾರಿನಲ್ಲಿ 4 ಎಕರೆ ಈರುಳ್ಳಿಯನ್ನು ಹಾಕಿ 3 ಲಕ್ಷ ನಿವ್ವಳ ಆದಾಯ ಗಳಿಸಿದ್ದಾರೆ. ಇನ್ನು ಉಳಿದ 8 ಎಕರೆ ಪ್ರದೇಶದಲ್ಲಿ ಹೆಸರು ಹಾಗೂ ಇತರೆ ಕಾಳುಗಳನ್ನು ಹಾಕಿ ಮನೆಗೆ ಬೇಕಾಗುವಷ್ಟು ಜೋಳವನ್ನು ಬೆಳೆದಿದ್ದಾರೆ. ಹಿಂಗಾರು ಬೆಳೆಗೆ ಬೀಜವನ್ನು ಬೆಳೆದು 1.60 ಲಕ್ಷ ಆದಾಯವನ್ನು ಗಳಿಸಿದ್ದಾರೆ.
ನಾವು ಮೊದಲು ಆಗೊಮ್ಮೆ ಈಗೊಮ್ಮೆ ಮಳೆಯಾಗುವುದರಿಂದ ಬೆಳೆ ಒಣಗಿ ಸಮಸ್ಯೆಯನ್ನು ಎದುರಿಸುತ್ತಿದ್ದೇವು. ಆದರೆ ಈಗ ಕೃಷಿ ಹೊಂಡದಿಂದ ಎಲ್ಲ ಸಮಸ್ಯೆ ನೀಗಿದ್ದು, ಈಗ ಬರ ಬೀಳುವ ಭಯವೇ ಇಲ್ಲ.
-ಹೇಮಣ್ಣ ಸಣ್ಣಯರಾಶಿ, ರೈತ
-ಸೋಮರಡ್ಡಿ ಅಳವಂಡಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ

ರಾಜ್ಯದಲ್ಲಿ ಶೇ. 90ರಷ್ಟು ಬೆಳೆ ಹಾನಿ: ಪರಿಸ್ಥಿತಿ ಗಂಭೀರ - DCM ಪರಮೇಶ್ವರ

'ಸತ್ತವರಿಂದಲೂ ವೋಟಿಂಗ್, SIR ಉಪಯೋಗಗಳ ಕುರಿತು ಚೆನ್ನಿತ್ತಲಾರನ್ನು ಕೇಳಿ': ರಾಹುಲ್ ಗಾಂಧಿಗೆ ಸುರೇಶ್ ಗೋಪಿ

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ