ದಾರಿಯಲ್ಲಿ ಹಣ ಸಿಕ್ಕರೆ ಅದೃಷ್ಟನಾ? Online Desk
ಭಕ್ತಿ-ಜ್ಯೋತಿಷ್ಯ

ದಾರಿಯಲ್ಲಿ ಹಣ ಸಿಕ್ಕರೆ ಅದೃಷ್ಟನಾ? ಶಾಪನಾ? ಜ್ಯೋತಿಷ್ಯ ಹೇಳೋದು ಇದನ್ನೇ!

ರಸ್ತೆಯಲ್ಲಿ 10 ರೂಪಾಯಿ ಬಿದ್ದಿದ್ದರೂ ಸಾಕು. ಯಾರೂ ನೋಡ್ತಿಲ್ಲ ಅಂತ ಖಚಿತವಾದಮೇಲೆ ಕೈ ಚಾಚಿ ಎತ್ತಿಕೊಳ್ತಾರೆ. ಕೆಲವರಿಗೆ ಇದು ಅದೃಷ್ಟ ಅನ್ಸುತ್ತೆ. ಇನ್ನೂ ಕೆಲವರು ಇದು ಅನಾಹುತದ ಮುನ್ಸೂಚನೆ ಅಂತ ಭಯಪಡ್ತಾರೆ. ಆದರೆ, ದಾರಿಯಲ್ಲಿ ಸಿಕ್ಕ ಹಣ ಕೇವಲ ಕರೆನ್ಸಿ ಅಲ್ಲ ಅಂತ ಜ್ಯೋತಿಷ್ಯ ಶಾಸ್ತ್ರ ಹೇಳುತ್ತೆ.!

Money Found On Road: ಹಣ ಅಂತಂದ್ರೆ ಹೆಣವೂ ಕೂಡ ಬಾಯಿಬಿಡುತ್ತೆ ಅಂತ ರೇ! ಅಂತದ್ರಲ್ಲಿ ರಸ್ತೆಯಲ್ಲಿ ಸಿಗೋ ಹಣ ಅಂದ್ರೆ ಸುಮ್ಮನೆ ಬಿಡುತ್ತಾರಾ? ಅದಕ್ಕೆನೇ ರಸ್ತೆಯಲ್ಲಿ 10 ರೂಪಾಯಿ ನೋಟು ಬಿದ್ದಿದ್ದರೂ ಜನ ಕಣ್ಣು ಅಗಲ ಮಾಡಿ ನೋಡ್ತಾರೆ. ಕೈ ಚಾಚೋ ಮುಂಚೆ 4 ಕಡೆ ನೋಡ್ತಾರೆ. ಯಾರಾದ್ರೂ ನೋಡ್ತಿದ್ದಾರಾ ಅಂತಾನೂ ಚೆಕ್ ಮಾಡ್ತಾರೆ.! ಆದರೆ ಜ್ಯೋತಿಷ್ಯ ಮತ್ತು ಹಿಂದೂ ಶಾಸ್ತ್ರದ ಪ್ರಕಾರ ದಾರಿಯಲ್ಲಿ ಸಿಕ್ಕ ಹಣ ಕೇವಲ ಅದೃಷ್ಟ ಮಾತ್ರವಲ್ಲ. ಅದರ ಹಿಂದೆ ಕೆಲವು ಸೂಚನೆಗಳು ಮತ್ತು ನಿಯಮಗಳಿವೆ ಎನ್ನುತಾರೆ! ಆ ಕುರಿತ ವರದಿ ಇಲ್ಲಿದೆ:

ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ?

ಜ್ಯೋತಿಷ್ಯದಲ್ಲಿ ರಸ್ತೆಯಲ್ಲಿ ಹಣ ಸಿಗುವುದು ಒಳ್ಳೆಯ ಸಂಕೇತ ಎಂದೂ ಕೆಟ್ಟ ಸಂಕೇತ ಎಂದೂ ಎರಡೂ ರೀತಿ ಅರ್ಥ ಕೊಡಲಾಗುತ್ತದೆ. ಕೆಲವು ಪಂಡಿತರ ಪ್ರಕಾರ ಇದು ಲಕ್ಷ್ಮಿ ದೇವಿಯ ಅನುಗ್ರಹ. ನಿಮ್ಮ ಕರ್ಮದ ಫಲವಾಗಿ ಅದು ನಿಮಗೆ ಬಂದಿದೆ. ಮತ್ತೆ ಕೆಲವರ ಪ್ರಕಾರ ಇದು ಯಾರೋ ಕಳೆದುಕೊಂಡ ಕಷ್ಟದ ಹಣ. ಅದನ್ನು ತೆಗೆದುಕೊಂಡರೆ ಅವರ ದುಃಖವೂ ನಿಮ್ಮ ಜೊತೆ ಸೇರಬಹುದು. ವಿಶೇಷವಾಗಿ ಅಮಾವಾಸ್ಯೆ ಶನಿವಾರ ಅಥವಾ ರಾಹು ಕಾಲದಲ್ಲಿ ಸಿಕ್ಕ ಹಣವನ್ನು ಜಾಗ್ರತೆಯಿಂದ ನೋಡಬೇಕು.

ಏನು ಮಾಡಬೇಕು? ಏನು ಮಾಡಬಾರದು?

  • ಮೊದಲು ಸುತ್ತಮುತ್ತ ಯಾರಾದರೂ ಹುಡುಕುತ್ತಿದ್ದಾರಾ ಎಂದು ನೋಡಿ. ಸಣ್ಣ ಮೊತ್ತವಾಗಿದ್ದರೆ ಅದನ್ನು ದೇವಸ್ಥಾನದ ಹುಂಡಿಗೆ ಹಾಕುವುದು ಅಥವಾ ಬಡವರಿಗೆ ದಾನ ಮಾಡುವುದು ಒಳ್ಳೆಯದು. ಇದು ದೋಷ ನಿವಾರಿಸುತ್ತದೆ.

  • ನೇರವಾಗಿ ಅದನ್ನು ಮನೆಗೆ ತಂದು ಖರ್ಚು ಮಾಡಬೇಡಿ ಎನ್ನುತ್ತದೆ ಶಾಸ್ತ್ರ. ಏಕೆಂದರೆ ಅದು ಯಾರ ಕಣ್ಣೀರಿನ ಹಣವೋ ಗೊತ್ತಿಲ್ಲ. ತೆಗೆದುಕೊಂಡ ಕೂಡಲೇ ಕೈ ತೊಳೆದು ಗಂಗಾ ಜಲ ಅಥವಾ ಉಪ್ಪಿನ ನೀರಿನಿಂದ ಶುದ್ಧಿ ಮಾಡಿಕೊಳ್ಳಿ.

  • ದೊಡ್ಡ ಮೊತ್ತ ಸಿಕ್ಕರೆ ಪೊಲೀಸ್ ಠಾಣೆಗೆ ಒಪ್ಪಿಸುವುದು ಕಾನೂನಾತ್ಮಕವಾಗಿ ಮತ್ತು ಧರ್ಮದೃಷ್ಟಿಯಿಂದ ಸರಿಯಾದ ಮಾರ್ಗ. ಒಂದು ವಾರದೊಳಗೆ ಯಾರೂ ಕೇಳಲು ಬರದಿದ್ದರೆ ಅದನ್ನು ಧಾರ್ಮಿಕ ಕೆಲಸಕ್ಕೆ ಬಳಸಬಹುದು.

ಯಾವಾಗ ಶುಭ ಸೂಚನೆ?

ಮಂಗಳವಾರ ಶುಕ್ರವಾರ ಅಥವಾ ಹಬ್ಬದ ದಿನ ಹಣ ಸಿಕ್ಕರೆ ಅದು ಲಕ್ಷ್ಮಿ ಕೃಪೆ ಎಂದು ಪರಿಗಣಿಸುತ್ತಾರೆ. ಅದನ್ನು ಮನೆಯ ಈಶಾನ್ಯ ಮೂಲೆಯಲ್ಲಿ ಇಟ್ಟು ದೀಪ ಹಚ್ಚಿ ಪೂಜೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ ಇದೆ.

ಒಟ್ಟಾರೆಯಾಗಿ, ದಾರಿಯಲ್ಲಿ ಹಣ ಸಿಗುವುದು ಕೇವಲ ಹಣದ ವಿಷಯವಲ್ಲ. ಅದು ನಿಮ್ಮ ಪರೀಕ್ಷೆಯೂ ಹೌದು. ಪ್ರಾಮಾಣಿಕತೆ ಮತ್ತು ದಾನದ ಮನೋಭಾವ ಇಟ್ಟುಕೊಂಡರೆ ಆ ಹಣ ನಿಮಗೆ ಒಳ್ಳೆಯದನ್ನೇ ತರುತ್ತದೆ. ಸ್ವಾರ್ಥಕ್ಕಾಗಿ ಬಳಸಿದರೆ ಮಾತ್ರ ಸಮಸ್ಯೆ ಬರಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಿದ ಪ್ರಧಾನಿ ಮೋದಿ; ಕೆಲಹೊತ್ತು ಧ್ಯಾನ

'ಮೋದಿ ಅಭಿಮಾನಿಗಳು ಬಳಸುವ ಭಾಷೆ...; ಕ್ಷಮಿಸುವುದಲ್ಲ, ನೀವೇ ಕ್ಷಮೆ ಕೇಳಬೇಕು': ಪ್ರಧಾನಿ ವಿಡಿಯೋಗೆ ಉದ್ಧವ್ ಠಾಕ್ರೆ ಟಾಂಗ್

ಎಥೆನಾಲ್ ಮಿಶ್ರಣ ಮಾಡದಿದ್ದರೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 125 ರೂ. ಆಗಿರೋದು: E20ಗೆ ಕೇಂದ್ರ ಸಮರ್ಥನೆ

ಕಾಕ್ರೋಚ್ ಹೋರಾಟ ತಣ್ಣಗಾದ ಬೆನ್ನಲ್ಲೇ ಕೆರಳಿದ ಆಪ್; E20 ವಿರುದ್ಧ ಆ. 4ರಂದು ಪ್ರಧಾನಿ ನಿವಾಸ ಚಲೋ ಘೋಷಿಸಿದ ಕೇಜ್ರಿವಾಲ್

ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಭೀಕರ ಹಿಮಪಾತ: ಪರ್ವತಾರೋಹಣ ದಿಗ್ಗಜ 'Nims' Purja ದುರಂತ ಅಂತ್ಯ, ಕೊನೆಯ ಕ್ಷಣದ Video ವೈರಲ್