ಸಂಗ್ರಹ ಚಿತ್ರ 
ವಾಹನ

ಮತ್ತೆ ತಾಜ್‌ಮಹಲ್ ಪ್ರವೇಶ ದರ ಏರಿಕೆಗೆ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ನಿರ್ಧಾರ

ವಿಶ್ವದ ಏಳು ಅದ್ಬುತಗಳಲ್ಲಿ ಒಂದಾದ ವಿಶ್ವವಿಖ್ಯಾತ ತಾಜ್‌ ಮಹಲ್ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಶಾಕ್ ಕಾದಿದ್ದು, ಶೀಘ್ರದಲ್ಲೇ ತಾಜ್ ಮಹಲ್ ಪ್ರವೇಶ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ.

ಆಗ್ರಾ: ವಿಶ್ವದ ಏಳು ಅದ್ಬುತಗಳಲ್ಲಿ ಒಂದಾದ ವಿಶ್ವವಿಖ್ಯಾತ ತಾಜ್‌ ಮಹಲ್ ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಶಾಕ್ ಕಾದಿದ್ದು, ಶೀಘ್ರದಲ್ಲೇ ತಾಜ್ ಮಹಲ್ ಪ್ರವೇಶ ಟಿಕೆಟ್ ದರ ಏರಿಕೆಯಾಗುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಪ್ರಸ್ತುತ ಇರುವ ಪ್ರವೇಶ ಟಿಕೆಟ್ ದರ ಏರಿಕೆ ಮಾಡಲು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯ ನಿರ್ಧರಿಸಿದ್ದು, ಪ್ರಸ್ತುತ ಇರುವ ದರದಲ್ಲಿ ಶೇ. 10 ರಿಂದ ಶೇ.20ರಷ್ಟು ಏರಿಕೆ ಮಾಡಲು ಅಧಿಕಾರಿಗಳು  ನಿರ್ಧರಿಸಿದ್ದಾರೆ ಎನ್ನಲಾಗಿದೆ. ಎಎಸ್‌ ಐ ಪ್ರಸ್ತಾವನೆಯ ಪ್ರಕಾರ, ದೇಶಿ ಪ್ರವಾಸಿಗರು, ಸಾರ್ಕ್ ಮತ್ತು ಬಿಮ್ಸ್‌ಟೆಕ್ ಪ್ರವಾಸಿಗರು ಹಾಗೂ ವಿದೇಶಿ ಪ್ರವಾಸಿಗರ ಪ್ರವೇಶದರವನ್ನು ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆಯಂತೆ. ತಾಜ್  ಮಹಲ್ ನ ಟಿಕೆಟ್ ದರದಲ್ಲಿ ಎಎಸ್‌ ಐ ಹಾಗೂ ಆಗ್ರಾ ಅಭಿವೃದ್ಧಿ ಪ್ರಾಧಿಕಾರದ ಪಾಲು ಇದ್ದು, ಪ್ರಸ್ತುತ ದೇಶಿ ಪ್ರವಾಸಿಗರಿಗೆ 40 ರೂಪಾಯಿ ಟಿಕೆಟ್ ದರ ಇದೆ. ಈ ಪೈಕಿ 30 ರೂಪಾಯಿ ಎಎಸ್‌ ಐ ಹಾಗೂ 10 ರೂಪಾಯಿ ಎಡಿಎಗೆ ಸಲ್ಲುತ್ತದೆ. ಇದನ್ನು 50 ರೂಪಾಯಿಗೆ ಹೆಚ್ಚಿಸಲು ಉದ್ದೇಶಿಸಲಾಗಿದ್ದು, ಎಎಸ್‌ ಐಗೆ 40 ರೂಪಾಯಿ ಪಾಲು ಸಿಗುವ ಸಾಧ್ಯತೆ ಇದೆ. 
ಇನ್ನು ವಿದೇಶಿ ಪ್ರವಾಸಿಗರಿಗೆ 1000 ರೂಪಾಯಿ ಶುಲ್ಕ ವಿಧಿಸಲಾಗುತ್ತಿದ್ದು, ಇದನ್ನು ಎಎಸ್‌ ಐ ಹಾಗೂ ಎಡಿಎ ಸಮಾನವಾಗಿ ಹಂಚಿಕೊಳ್ಳುತ್ತದೆ. ಡಿಸೆಂಬರ್ 21ರ ಹೊಸ ಅಧಿಸೂಚನೆ ಅನ್ವಯ ಈ ದರವನ್ನು 1100 ರೂಪಾಯಿಗೆ  ಹೆಚ್ಚಿಸಲಾಗಿದ್ದು, ಎಎಸ್‌ ಐ ಪಾಲು 600 ರೂಪಾಯಿ ಆಗಲಿದೆ ಎನ್ನಲಾಗಿದೆ. ಈ ಬಗ್ಗೆ ಎಎಸ್‌ ಐ ನ ಆಗ್ರಾ ವೃತ್ತದ ಅಧೀಕ್ಷಕ ಪ್ರಾಚ್ಯವಸ್ತು ತಜ್ಞ ಡಾ. ಭುವನ್ ವಿಕ್ರಮ್ ಸಿಂಗ್  ಅವರು ಮಾಹಿತಿ ನೀಡಿದ್ದು, 'ಎರಡು ದಿನ ಹಿಂದೆ ನಮಗೆ ಅಧಿಸೂಚನೆ ಪ್ರತಿ ಸಿಕ್ಕಿದೆ. ವಿಧಿವಿಧಾನದ ಪ್ರಕಾರ 45 ದಿನಗಳ ಕಾಲ ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿದೆ' ಎಂದು  ಹೇಳಿದ್ದಾರೆ. 
ದರ ಏರಿಕೆಗೆ ಪ್ರವಾಸೋದ್ಯಮ ಸಂಸ್ಥೆಗಳಿಂದ ಆಕ್ಷೇಪ
ಇನ್ನು ಎಸ್ ಐ ಇಲಾಖೆಯ ದರ ಏರಿಕೆ ನಿರ್ಧಾರದ ಸುದ್ದಿ ಹೊರಬೀಳುತ್ತಿದ್ದಂತೆಯೇ ಇದಕ್ಕೆ ಪ್ರವಾಸೋದ್ಯಮ ವಲಯದಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಪ್ರವೇಶದರವನ್ನು ಎರಡು ವರ್ಷಗಳಲ್ಲಿ ಎರಡನೇ ಬಾರಿಗೆ ಏರಿಕೆ ಮಾಡುತ್ತಿರುವುದು ಪ್ರವಾಸೋದ್ಯಮ ವಲಯದ ಕೆಂಗಣ್ಣಿಗೆ ಕಾರಣವಾಗಿದೆ. ಈ ಐತಿಹಾಸಿಕ ಸ್ಮಾರಕದ ವಾಣಿಜ್ಯೀಕರಣದ ಬದಲು ದಟ್ಟಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವಂಥ ಕ್ರಮಕ್ಕೆ ಒತ್ತು ನೀಡಬೇಕಾಗಿದೆ ಎಂಬ ಆಗ್ರಹ ಕೇಳಿಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

5 ರಾಜ್ಯಗಳಿಗೆ ರಾಜ್ಯಪಾಲರ ನೇಮಕ; ಇವರೇ ಕರ್ನಾಟಕದ ನೂತನ ರಾಜ್ಯಪಾಲರು...

ವಿಡಿಯೋ ಪ್ರಸಾರ ಮಾಡದಂತೆ ತಡೆಯಾಜ್ಞೆ ಕೋರಿ ಕೋರ್ಟ್ ಮೆಟ್ಟಿಲೇರಿದ ಮಾಜಿ ಮುಖ್ಯಮಂತ್ರಿ!

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ವಿಚ್ಛೇದನ: 7 ವರ್ಷದ ದಾಂಪತ್ಯಕ್ಕೆ ಅಂತ್ಯವಾಡಿದ ಕನ್ನಡದ ಕಿರುತೆರೆ ನಟಿ!

CM ಡಿಕೆಶಿ​​ ಕುರ್ತಾ ಹಿಡಿದು ಹಿಂದೆ ತಳ್ಳಿದ ರಾಹುಲ್ ಗಾಂಧಿ: ವಿಡಿಯೋ ವೈರಲ್; ಬಂಡೆಗೆ ಸಿಕ್ಕ ಮರ್ಯಾದೆ! ಫುಲ್‌ ಅನ್‌ ರೆಸ್ಪೆಕ್ಟು!

ಕರ್ನಾಟಕ ಸೇರಿ 5 ರಾಜ್ಯಗಳಿಗೆ 2 ದಿನಗಳಲ್ಲಿ ಭಾರೀ ಮಳೆ: IMD ಎಚ್ಚರಿಕೆ