ಐಆರ್ಸಿಟಿಸಿ 
ವಾಹನ

ಬೆಂಗಳೂರಿನಿಂದ ಚೀನಾಗೆ ಐಆರ್ಸಿಟಿಸಿ ವಿಶೇಷ ಪ್ಯಾಕೇಜ್ ಪ್ರಾರಂಭ, ಎಲ್ಲೆಲ್ಲಿ ವೀಕ್ಷಣೆ ಇಲ್ಲಿದೆ ಮಾಹಿತಿ

ಐಆರ್ಸಿಟಿಸಿ ಬೆಂಗಳುರಿನಿಂದ ನೂತನವಾಗಿ ಚೀನಾಗೆ ಏಳು ದಿನಗಳ ಪ್ರವಾಸ ಪ್ಯಾಕೇಜ್ ಮತ್ತು ಸ್ಕ್ಯಾಂಡಿನೇವಿಯಾ ಮತ್ತು ಐಸ್ ಲ್ಯಾಂಡ್ ಗೆ 15 ದಿನಗಳ ಪ್ಯಾಕೇಜ್ ಅನ್ನು ಆಯೋಜಿಸುತ್ತತ್ತಿದೆ.

ಬೆಂಗಳೂರು: ಐಆರ್ಸಿಟಿಸಿ ಬೆಂಗಳುರಿನಿಂದ ನೂತನವಾಗಿ ಚೀನಾಗೆ  ಏಳು ದಿನಗಳ ಪ್ರವಾಸ ಪ್ಯಾಕೇಜ್ ಮತ್ತು ಸ್ಕ್ಯಾಂಡಿನೇವಿಯಾ ಮತ್ತು ಐಸ್ ಲ್ಯಾಂಡ್ ಗೆ  15 ದಿನಗಳ ಪ್ಯಾಕೇಜ್ ಅನ್ನು ಆಯೋಜಿಸುತ್ತತ್ತಿದೆ.
ಚೀನಾ ಪ್ಯಾಕೇಜ್ ಶಾಂಘೈ ಮತ್ತು ಬೀಜಿಂಗ್ ಮತ್ತು ಬುಲೆಟ್ ರೈಲು ಪ್ರಯಾಣವನ್ನು ಒಳಗೊಂಡಿರಲಿದೆ ಎಂದು ಅಧಿಕೃತ ಪ್ರಕಟಣೆ ಹೇಳಿದೆ. 3-ಸ್ಟಾರ್ ಹೋಟೆಲ್ ಗಳಲ್ಲಿ ಇಬ್ಬರಿಗೆ  ಒಂದು ಕೋಣೆಯನ್ನು ಒದಗಿಸಲಾಗುವುದು.ಈ ಪ್ಯಾಕೇಜ್ ಓರ್ವ ವ್ಯಕ್ತಿಗೆ  87,700 ರೂ. ದರ ನಿಗದಿಪಡಿಸಿದ್ದು ವಿಮಾನ ಟಿಕೆಟ್, ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವನ್ನು ಒಳಗೊಂಡಿರಲಿದೆ. ಅಲ್ಲದೆ ಐಆರ್ಸಿಟಿಸಿ ಪ್ರವಾಸ ನಿರ್ವಾಹಕ, ಪ್ರವಾಸ ಮಾರ್ಗದರ್ಶಿ, ವೀಸಾ ಶುಲ್ಕಗಳು, ಎಲ್ಲಾ ಪ್ರಮುಖ ಸ್ಥಳಗಳಿಗೆ ಪ್ರವೇಶ ಶುಲ್ಕಗಳು.ಹಾಗೂ ವಿಮೆಯನ್ನೂ ಸಹ ಇದರಲ್ಲಿ ಸೇರಿಸಲಾಗಿದೆ.
ಸ್ಕ್ಯಾಂಡಿನೇವಿಯಾ ಪ್ಯಾಕೇಜ್ ಬರ್ಗೆನ್, ಕೋಪನ್ ಹ್ಯಾಗನ್, ಜಿಯಾಲೊ, ಹೆಲ್ಸಿಂಕಿ, ರೇಕ್ಜಾವಿಕ್, ಸ್ಟಾಕ್ಹೋಮ್ ಮತ್ತು ಟಾಲಿನ್.ಗಳನ್ನು ಒಳಗೊಂಡಿದ್ದು ಪ್ರತಿ ವ್ಯಕ್ತಿಗೆ 3,48,000 ರೂ. ನಿಗದಿಪಡಿಸಲಾಗಿದೆ.
ವೈಷ್ಣೋದೇವಿ ಪ್ರವಾಸ
ಮಾ ವೈಷ್ಣೋದೇವಿ ದರ್ಶನ್ ವಿಶೇಷ 12 ದಿನ ರೈಲು ಪ್ರವಾಸ ಪ್ಯಾಕೇಜ್ ಸಹ ಜೂನ್ 23 ರಿಂದ ಆಯೋಜಿಸಲಾಗುವುದು. ಬೆಂಗಳೂರಿಗರು ವೈಟ್ ಫೀಲ್ಡ್ ನಲ್ಲಿ ರೈಲು ಹತ್ತಿ ವೈಷ್ಣೋದೇವಿ ತಲುಪಬಹುದು. ಈ ಪ್ಯಾಕೇಜ್ ಗೆ ಒಬ್ಬರಿಗೆ `12,930 ರು. ದರವಿದ್ದು  ದೆಹಲಿ-ಅಮೃತಸರ್-ಹರಿದ್ವಾರ-ಮಥುರಾ ಹಾಗೂ ಆಗ್ರಾ ಸೇರಿ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ಒಳಗೊಂಡಿರಲಿದೆ.
ಪ್ಯಾಕೇಜ್ ಕುರಿತು ಹೆಚ್ಚಿನ ಮಾಹಿತಿ ಬೇಕಾದವರು ಈ ಮುಂದಿನ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಲು ಕೋರಲಾಗಿದೆ. 080-22960014, 9741426474, ಮತ್ತು 9746743045.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಜೂನ್ 30ರೊಳಗೆ ಮುಗಿಸಿ: ರಾಜ್ಯ ಸರ್ಕಾರಕ್ಕೆ 'ಸುಪ್ರೀಂ' ಗಡುವು

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

ಕ್ರಿಕೆಟ್ ಇತಿಹಾಸದಲ್ಲೇ ಮೊದಲು: ಅಂತಾರಾಷ್ಟ್ರೀಯ ಕ್ರಿಕೆಟ್ ಲೀಗ್ ನಲ್ಲಿ ಜೊತೆಯಾಗಿ ಕಣಕ್ಕಿಳಿದ ಅಪ್ಪ-ಮಗ.. ಯಾರಿವರು?

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

SCROLL FOR NEXT