ಟಾಟಾ 'ಪಂಚ್‌' ಕಾರು 
ವಾಹನ

ಟಾಟಾ 'ಪಂಚ್‌' ಸಣ್ಣ ಎಸ್‌ಯುವಿ ಬುಕಿಂಗ್‌ ಆರಂಭ, ಕಾರಿನ ವಿಶೇಷತೆಗಳ ಮಾಹಿತಿ ಇಲ್ಲಿದೆ

ಎಸ್‌ಯುವಿ ವಲಯದಲ್ಲಿ ಹಲವು ವಿನೂತನ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಟಾಟಾ ಮೋಟಾರ್ಸ್‌ ಈಗ, ಟಾಟಾ ಪಂಚ್‌ ಎಂಬ ಸಣ್ಣ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. 

ಬೆಂಗಳೂರು: ಎಸ್‌ಯುವಿ ವಲಯದಲ್ಲಿ ಹಲವು ವಿನೂತನ ಕಾರುಗಳನ್ನು ಬಿಡುಗಡೆಗೊಳಿಸುತ್ತಿರುವ ಟಾಟಾ ಮೋಟಾರ್ಸ್‌ ಈಗ, ಟಾಟಾ ಪಂಚ್‌ ಎಂಬ ಸಣ್ಣ ಎಸ್‌ಯುವಿಯನ್ನು ಅನಾವರಣಗೊಳಿಸಿದೆ. 

ಇದು ಭಾರತದ ಮೊದಲ ಸಬ್‌-ಕಾಂಪಾಕ್ಟ್‌ ಅಂದರೆ ಸಣ್ಣ ಎಸ್‌ಯುವಿಯಾಗಿದೆ. ಇದರ ಬುಕಿಂಗ್‌ ಈಗಾಗಲೇ ಆರಂಭಗೊಂಡಿದ್ದು, ಜನರು 21 ಸಾವಿರ ರೂ. ಪಾವತಿಸಿ, ಆನ್‌ಲೈನ್‌ ಮೂಲಕ ಕಾಯ್ದಿರಿಸಬಹುದಾಗಿದೆ. ಕಡಿಮೆ ಬಜೆಟ್‌ನಲ್ಲಿ ಎಸ್‌ಯುವಿ ಮಾದರಿಯ ಕಾರನ್ನು ಇಷ್ಟಪಡುವ ಜನರಿಗೆ ಇದು ಉತ್ತಮ ಆಯ್ಕೆಯಾಗಲಿದೆ. ಇದನ್ನು ತಯಾರಿಸಲು ಭಾರತ, ಬ್ರಿಟನ್‌ ಹಾಗೂ ಇಟಲಿಯ ಟಾಟಾ ಮೋಟಾರ್ಸ್‌ ಡಿಸೈನ್‌ ಸ್ಟುಡಿಯೋಗಳು ಒಟ್ಟಾಗಿ ಕೆಲಸ ಮಾಡಿವೆಯಂತೆ. ಗಾತ್ರದಲ್ಲಿ ಸಣ್ಣದಾದರೂ, ಒಂದು ಸ್ಪೇಷಿಯಸ್‌ ಎಸ್‌ಯುವಿಯನ್ನು ನೀಡುವ ಗುರಿಯನ್ನು ಟಾಟಾ ಹೊಂದಿದೆ ಎನ್ನಲಾಗಿದೆ.

ಅಲ್ಫಾ ಆರ್ಕಿಟೆಕ್ಚರ್‌ ತಂತ್ರಜ್ಞಾನದಿಂದ ತಯಾರಾಗಿರುವ ಟಾಟಾ ಪಂಚ್, 3,827 ಮಿಲಿಮೀಟರ್‌ ಉದ್ದ, 1,945ಎಂಎಂ ಅಗಲ, 1,615ಎಂಎಂ ಉದ್ದ, 2,445ಎಂಎಂ ವೀಲ್ ಬೇಸ್, 366 ಲೀಟರ್ ಬೂಟ್ ಸ್ಪೇಸ್ ಅನ್ನು ಹೊಂದಿದೆ.  ಅಂತೆಯೇ 1.2 ಲೀಟರ್‌ ಪೆಟ್ರೋಲ್‌ ಇಂಜಿನ್ ಒಳಗೊಂಡಿದ್ದು, ಇದು ಎಸ್‌ಯುವಿಯ ಲುಕ್‌ ಹೊಂದಿದೆ ಹಾಗೂ ಹ್ಯಾಚ್ ಬ್ಯಾಕ್‌ನ ಗಾತ್ರ ಹೊಂದಿದೆ. ಆದರೆ, ಇದರ 187 ಮಿಮಿ ಗ್ರೌಂಡ್‌ ಕ್ಲಿಯರೆನ್ಸ್‌ ಇದನ್ನು ಎಸ್‌ಯುವಿ ವಿಭಾಗಕ್ಕೆ ಸೇರಿಸುತ್ತದೆ. ಗ್ರೈನೈಡ್‌ ಗ್ರೇ ಡಾಷ್‌ಬೋರ್ಡ್‌ ಇದೆ… ಸೀಟಿನ ತುಂಬೆಲ್ಲಾ ಟಾಟಾದ ಸಿಗ್ನೇಚರ್‌ ಟ್ರೈ ಆ್ಯರೋ ಪಾಟ್ರನ್‌ ಇದೆ.

ಟಾಟಾ ಪಂಚ್‌ ಅನ್ನು ಪುಣೆಯಲ್ಲಿ ಲೇಜರ್‌ ಬ್ರೇಜಿಂಗ್‌ನಂತಹ ತಂತ್ರಜ್ಞಾನ ಬಳಸಲಾಗಿದೆ. ಇದು ಪ್ಯೂರ್‌, ಅಡ್ವೆಂಚರ್‌ , ಅಕಂಪ್ಲಿಸ್ಡ್‌, ಕ್ರಿಯೇಟಿವ್ ಎಂಬ ನಾಲ್ಕು ಪರ್ಸೋನಾಗಳಲ್ಲಿ ಲಭ್ಯವಿರಲಿದೆ. ಇದು ಬಿಳಿ, ಕೇಸರಿ, ಕೆಂಪು ನೀಲಿ,ಗ್ರೇ, ಬ್ರಾನ್ಸ್‌, ಟ್ರಾಪಿಕಲ್‌ ಮಿಸ್ಟ್‌ ಬಣ್ಣಗಳಲ್ಲಿ ಮಾರುಕಟ್ಟೆಗೆ ಬರಲಿವೆ. ಕೆಲವು ಎಸ್‌ಯುವಿಗಳಲ್ಲಿ ಕಪ್ಪು-ಬಿಳಿ ಬಣ್ಣಗಳ ಡ್ಯುಯಲ್‌ ಟೋನ್‌ ಸನ್‌ರೂಫ್‌ ಆಯ್ಕೆಗಳು ಕೂಡ ಇರಲಿವೆ.

ಇದರ 90 ಡಿಗ್ರಿ ಓಪನ್‌ ಆಗುವ ಡೋರ್‌ಗಳು, ಹಾಗೂ ಸ್ಪೇಷಿಯಸ್‌ ಲೆಗ್‌ ರೂಂ ಎಲ್ಲಾ ವಯಸ್ಸಿನ ಜನರಿಗೆ ಆರಾಮದಾಯಕ ಪ್ರಯಾಣ ಒದಗಿಸುತ್ತದೆ. 7 ಇಂಚಿನ ಹಿಂದಿನ ಸೀಟಿನಲ್ಲಿ 3 ಪ್ರಯಾಣಿಕರು ಅರಾಮಾಗಿ ಕುಳಿತುಕೊಳ್ಳಬಹುದಾಗಿದೆ.

ಇದಲ್ಲದೆ, ಎಲ್‌ಇಡಿ ಟೈಲ್‌ಲ್ಯಾಂಪ್‌, ಟಚ್‌ ಸ್ಕ್ರೀನ್ ಇನ್ಫೊಟೈನ್‌ಮೆಂಟ್‌, ನ್ಯಾಚುರಲ್‌ ವಾಯ್ಸ್‌ ರೆಕನ್ಷಿಷನ್‌ ಟೆಕ್ನಾಲಜಿ, ಅಡ್ವಾನ್ಸ್‌ ಅಡ್ರೆಸಿಂಗ್‌ ಸಿಸ್ಟಮ್‌ ಹಾಗೂ ಎರಡು ಏರ್‌ಬ್ಯಾಗ್‌, ಎಬಿಎಸ್‌, ಬ್ರೇಕ್‌ ಸ್ವೇ ಕಂಟ್ರೋಲ್, ಪ್ಯಾರಾಮೆಟ್ರಿಕ್‌ ಅಲಾರ್ಮ್ ಸಿಸ್ಟಮ್‌, ಸೀಟ್‌ ಬೆಲ್ಟ್‌ ಅಲಾರ್ಮ್‌ಗಳು ಇದನ್ನು ಐಷಾರಾಮಿ ಹಾಗೂ ಸುರಕ್ಷಾ ವಾಹನವನ್ನಾಗಿಸುತ್ತದೆ.

ಇದರಲ್ಲಿ ಒಂದು ಸ್ಪೇರ್‌ ಚಕ್ರದ ಜೊತೆಗೆ, ಟೈರ್‌ ಪಂಕ್ಚರ್‌ ಸರಿಪಡಿಸುವ ಉಪಕರಣಗಳನ್ನು ಕೂಡ ನೀಡಲಾಗುತ್ತದೆ. ಟಾಟಾಮೊಟಾರ್ಸ್‌ ಪ್ರಕಾರ, ಅಕ್ಟೋಬರ್‌ ತಿಂಗಳಲ್ಲಿ ಈ ಕಾರು ಬಿಡುಗಡೆಯಾಗುವ ನಿರೀಕ್ಷೆಯಿದೆ. ಅದರ ನಿರ್ದಿಷ್ಟ ದರ ಕೂಡ ಮುಂದಿನ ದಿನಗಳಲ್ಲಿ ಬಹಿರಂಗಗೊಳ್ಳಲಿದೆ. ಈಗ 5ರಿಂದ 6 ಲಕ್ಷ ರೂ. ಶೋರೂಂ ದರ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಿರುಮಲ ಬಳಿಕ ಶಬರಿಮಲೆ ತುಪ್ಪದಲ್ಲೂ ಗೋಲ್ ಮಾಲ್: ವಿಜಿಲೆನ್ಸ್ ತನಿಖೆಗೆ ಕೇರಳ ಹೈಕೋರ್ಟ್ ಆದೇಶ!

Iran Unrest: ಪ್ರತಿಭಟನೆ ಮುಂದುವರೆಸಿ- ಜನತೆಗೆ ಟ್ರಂಪ್ ಕರೆ ಬೆನ್ನಲ್ಲೇ UNSC ಗೆ ಇರಾನ್ ಪತ್ರ!

ಯಾವ ಸಂದೇಶವೂ ಇಲ್ಲ, ಪಕ್ಷದ ನಾಯಕರ ಜತೆಗಿನ ಮಾತುಕತೆ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡಲ್ಲ: ಡಿ.ಕೆ. ಶಿವಕುಮಾರ್

ಇರಾನ್ ಹಿಂಸಾಚಾರ: ಆಡಳಿತ ವಿರೋಧಿ ಪ್ರತಿಭಟನಾಕಾರನ ಗಲ್ಲಿಗೇರಿಸಲು ಸರ್ಕಾರ ಆದೇಶ!

ನಿಷೇಧದ ನಡುವೆಯೂ ಕಬಿನಿಯಲ್ಲಿ ಅಕ್ರಮ ದೋಣಿ ಸಫಾರಿ: ಪರಿಸರವಾದಿಗಳ ಕಳವಳ

SCROLL FOR NEXT