Online Desk
ವಾಹನ

ಪೆಟ್ರೋಲ್ ಕಾರಿಗೆ ಹೇಳಿ ಗುಡ್ ಬೈ; 2026 ರಲ್ಲಿ ಕೇವಲ 8 ಲಕ್ಷದ ಬಜೆಟ್‌ನಲ್ಲಿ ಸಿಗುವ ಬೆಸ್ಟ್ Electric Cars ಇಲ್ಲಿವೆ!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಬೇಸತ್ತಿರುವ ಗ್ರಾಹಕರು ಈಗ ಎಲೆಕ್ಟ್ರಿಕ್ ಕಾರುಗಳ ಕಡೆಗೆ ಒಲವು ತೋರುತ್ತಿದ್ದಾರೆ. ಹಾಗಾಗಿ ಕೇವಲ ₹8 ಲಕ್ಷದ ಬಜೆಟ್‌ನಲ್ಲಿಯೇ ಸಿಂಗಲ್ ಚಾರ್ಜ್‌ಗೆ ಅಧಿಕ ಮೈಲೇಜ್ ನೀಡುವ ಅತ್ಯುತ್ತಮ ಫೀಚರ್ಸ್‌ ಹೊಂದಿದ ಕಾರುಗಳು ಕುರಿತ ಮಾಹಿತಿ ಇಲ್ಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಿರುವ ಕಾರಣ ಈಗ ಸಾಕಷ್ಟು ಜನರು ಎಲೆಕ್ಟ್ರಿಕ್ ಕಾರಿನ ಕಡೆ ನೋಡುತ್ತಿದ್ದಾರೆ. ಆದರೆ ಹಿಂದೆ ಇವಿ ಎಂದರೆ ದುಬಾರಿ ಮತ್ತು ಒಂದೆರಡು ನೂರು ಕಿಲೋಮೀಟರ್ ಓಡಿದರೆ ಚಾರ್ಜ್ ಮುಗಿಯುತ್ತದೆ ಎಂಬ ಭಯವಿತ್ತು. 2026 ರಲ್ಲಿ ಈ ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ. ಈಗ ₹8 ಲಕ್ಷದಿಂದ ಶುರುವಾಗುವ ಕಾರುಗಳಲ್ಲೂ 300 ಕಿಲೋಮೀಟರ್ ಗಿಂತ ಹೆಚ್ಚಿನ ರೇಂಜ್ ಸಿಗುತ್ತಿದೆ. ಮನೆಯಲ್ಲೇ ಚಾರ್ಜ್ ಮಾಡಿಕೊಂಡು ತಿಂಗಳಿಗೆ ಕೇವಲ ಸಾವಿರ ರೂಪಾಯಿಯಲ್ಲಿ ಸಾವಿರ ಕಿಲೋಮೀಟರ್ ಓಡಿಸಬಹುದು. ಹಾಗಾದರೆ ಈಗ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಬಜೆಟ್ ಎಲೆಕ್ಟ್ರಿಕ್ ಕಾರುಗಳು ಯಾವುವು ಮತ್ತು ಅವುಗಳ ವಿಶೇಷತೆ ಏನು ಎಂಬುದರ ಕುರಿತ ಮಾಹಿತಿ ಇಲ್ಲಿದೆ.

Tata's Tiago EV

ಈ ಪಟ್ಟಿಯಲ್ಲಿ ಮೊದಲಿಗೆ ಬರುವುದು Tata's Tiago EV; ಭಾರತದ ಅತ್ಯಂತ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ಟಾಟಾ ಸಂಸ್ಥೆಯ ಟಿಯಾಗೋ ಇವಿ. ಮಧ್ಯಮ ವರ್ಗದ ಸಾಮಾನ್ಯ ಕುಟುಂಬಗಳ ದಿನನಿತ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾದ ಈ ಹ್ಯಾಚ್‌ಬ್ಯಾಕ್ ಕಾರಿನ ಆರಂಭಿಕ ಬೆಲೆ ಕೇವಲ 6.99 ಲಕ್ಷ ರೂಪಾಯಿಗಳಾಗಿದೆ. ಟಾಟಾ ಸಂಸ್ಥೆಯು ಈ ಕಾರಿನಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಎರಡು ಬ್ಯಾಟರಿ ಆಯ್ಕೆಗಳನ್ನು ನೀಡಿದೆ. ನಗರ ಪ್ರದೇಶದಲ್ಲಿ ಮಾತ್ರ ಓಡಾಡುವವರಿಗಾಗಿ 19.2 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಮೀಡಿಯಂ ರೇಂಜ್ ಮಾದರಿ ಇದ್ದು, ಇದು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿದರೆ 226 ಕಿಲೋಮೀಟರ್ ದೂರ ಚಲಿಸುತ್ತದೆ. ಲಾಂಗ್ ಡ್ರೈವ್ ಹೋಗಲು ಬಯಸುವವರಿಗಾಗಿ 24 ಕಿಲೋವ್ಯಾಟ್ ಬ್ಯಾಟರಿ ಹೊಂದಿರುವ ಲಾಂಗ್ ರೇಂಜ್ ಮಾದರಿ ಇದ್ದು, ಇದು 285 ಕಿಲೋಮೀಟರ್ ವರೆಗೆ ಚಾರ್ಜ್ ಸಾಮರ್ಥ್ಯವನ್ನು ಹೊಂದಿದೆ. ಡಿಸಿ ಫಾಸ್ಟ್ ಚಾರ್ಜರ್ ಬಳಸಿ ಕೇವಲ 35 ನಿಮಿಷಗಳಲ್ಲಿ ಶೇಕಡಾ 80 ರಷ್ಟು ಚಾರ್ಜ್ ಮಾಡಬಹುದಾದ ಈ ಕಾರಿನಲ್ಲಿ ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಪ್ರಯಾಣಿಕರ ರಕ್ಷಣೆಗಾಗಿ ಆರು ಏರ್‌ಬ್ಯಾಗ್‌ಗಳಂತಹ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

MG ಕಾಮೆಟ್ EV

ಎರಡನೇದಾಗಿ MG ಕಾಮೆಟ್ EV; ಜನ ದಟ್ಟಣೆಯ ನಗರ ಪ್ರದೇಶಗಳಲ್ಲಿ ಮತ್ತು ಗಿಜಿಗುಡುವ ಸಿಟಿ ಟ್ರಾಫಿಕ್‌ನಲ್ಲಿ ಸುಲಭವಾಗಿ ಡ್ರೈವ್ ಮಾಡಲು ಮತ್ತು ಪಾರ್ಕಿಂಗ್ ಮಾಡಲು ಎಂಜಿ ಮೋಟಾರ್ಸ್ ಸಂಸ್ಥೆಯು ಕಾಮೆಟ್ ಇವಿ ಬೆಸ್ಟ್. ಕೇವಲ 2.9 ಮೀಟರ್ ಉದ್ದವಿರುವ ಈ ಅಲ್ಟ್ರಾ-ಕಾಂಪ್ಯಾಕ್ಟ್ ಕಾರಿನ ಬೆಲೆ 7.80 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ. ಇದರಲ್ಲಿ 17.4 ಕಿಲೋವ್ಯಾಟ್ ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಇದ್ದು, ಇದು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ ಸುಮಾರು 230 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಸಾಮಾನ್ಯವಾಗಿ ರಾತ್ರಿ ವೇಳೆ ಮನೆಯಲ್ಲಿ ಚಾರ್ಜ್ ಮಾಡಲು ಇದು 7 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಇನ್ನು, ಗಾತ್ರದಲ್ಲಿ ಚಿಕ್ಕದಾಗಿದ್ದರೂ ಕಾರು ಮಾತ್ರ ಅತ್ಯಂತ ಐಷಾರಾಮಿಯಾಗಿದೆ. ಅದ್ರಂತೆ, 26 ಸೆಂಟಿಮೀಟರ್‌ನ ಟ್ವಿನ್ ಟಚ್‌ಸ್ಕ್ರೀನ್ ಡಿಸ್ಪ್ಲೇ, ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್‌ಪ್ಲೇ ತಂತ್ರಜ್ಞಾನವನ್ನು ಒಳಗೊಂಡಿದೆ. ಸಣ್ಣ ಕುಟುಂಬಗಳಿಗೆ ಮತ್ತು ನಿತ್ಯ ಕಚೇರಿಗೆ ಹೋಗಿ ಬರುವ ಯುವ ಪೀಳಿಗೆಗೆ ಇದು ಅತ್ಯಂತ ಸ್ಮಾರ್ಟ್ ಆದ ಆಯ್ಕೆಯಾಗಿದೆ.

Tata Punch EV

ಮುಂದುವರೆದು, ಕಡಿಮೆ ಬಜೆಟ್‌ನಲ್ಲಿಯೇ ಬಲಿಷ್ಠ ಎಸ್‌ಯುವಿ ಮಾದರಿಯ ಲುಕ್ ಮತ್ತು ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಬಯಸುವ ಗ್ರಾಹಕರಿಗಾಗಿ ಟಾಟಾ ಸಂಸ್ಥೆಯು ಪಂಚ್ ಇವಿ ಕಾರನ್ನು ಪರಿಚಯಿಸಿದೆ. ಇದರ ಆರಂಭಿಕ ಬೆಲೆ 9.69 ಲಕ್ಷ ರೂಪಾಯಿಗಳಾಗಿದ್ದು, ಇದೂ ಸಹ ಎರಡು ಬ್ಯಾಟರಿ ರೂಪಾಂತರಗಳಲ್ಲಿ ಲಭ್ಯವಿದೆ. ಇದರ ಸ್ಮಾರ್ಟ್ ಆವೃತ್ತಿಯು 275 ಕಿಲೋಮೀಟರ್ ರೇಂಜ್ ನೀಡಿದರೆ, ಇದರ ಲಾಂಗ್ ರೇಂಜ್ ಆವೃತ್ತಿಯು ಸಿಂಗಲ್ ಚಾರ್ಜ್‌ನಲ್ಲಿ ಬರೋಬ್ಬರಿ 350 ಕಿಲೋಮೀಟರ್ ವರೆಗೆ ಚಲಿಸುವ ಅದ್ಭುತ ಸಾಮರ್ಥ್ಯ ಹೊಂದಿದೆ. ಗ್ಲೋಬಲ್ ಎನ್‌ಸಿಎಪಿ ಕ್ರಾಶ್ ಟೆಸ್ಟಿಂಗ್‌ನಲ್ಲಿ ಅತ್ಯುನ್ನತ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿರುವುದು ಈ ಕಾರಿನ ಅತ್ಯಂತ ದೊಡ್ಡ ಹೆಮ್ಮೆಯ ವಿಷಯವಾಗಿದೆ. ಬೆಟ್ಟ-ಗುಡ್ಡಗಳ ರಸ್ತೆಯಲ್ಲಿಯೂ ಸುಲಭವಾಗಿ ಚಲಿಸಲು ನೆರವಾಗುವ 195 ಎಂಎಂ ಹೈ ಗ್ರೌಂಡ್ ಕ್ಲಿಯರೆನ್ಸ್, 366 ಲೀಟರ್ ದೊಡ್ಡ ಡಿಕ್ಕಿ ಜಾಗ ಮತ್ತು ವಾಯ್ಸ್-ಅಸಿಸ್ಟೆಡ್ ಸನ್‌ರೂಫ್ ಈ ಕಾರಿನ ಪ್ರಮುಖ ಆಕರ್ಷಣೆಗಳಾಗಿವೆ. ರಫ್ ಅಂಡ್ ಟಫ್ ಬಳಕೆಗೆ ಮತ್ತು ವೀಕೆಂಡ್ ಲಾಂಗ್ ಟ್ರಿಪ್‌ಗಳಿಗೆ ಇದು ಅತ್ಯುತ್ತಮ ಎಸ್‌ಯುವಿ ಕಾರಾಗಿದೆ.

ಒಟ್ಟಾರೆಯಾಗಿ EV ಕಾರು ತೆಗೆದುಕೊಳ್ಳುವ ಮುನ್ನ ಒಂದು ವಿಷಯ ನೆನಪಿಡಬೇಕು. ಕಂಪನಿಗಳು ಹೇಳುವ ರೇಂಜ್‌ಗಿಂತ ನಿಜವಾಗಿ 20 ರಿಂದ 25 ಪ್ರತಿಶತ ಕಡಿಮೆ ಬರುತ್ತದೆ. ಹಾಗಾಗಿ, ಮನೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಹಾಕಿಸಿಕೊಳ್ಳುವುದು ಕಡ್ಡಾಯ. ಆದರೆ ಒಮ್ಮೆ ತೆಗೆದುಕೊಂಡರೆ ತಿಂಗಳಿಗೆ ಇಂಧನಕ್ಕೆ 8 ಸಾವಿರ ಖರ್ಚು ಮಾಡುವವರು ಈಗ ಕೇವಲ 1200 ರೂಪಾಯಿಯಲ್ಲಿ ಕೆಲಸ ಮುಗಿಸಬಹುದು. ಜೊತೆಗೆ 8 ವರ್ಷದ ಬ್ಯಾಟರಿ ವಾರಂಟಿ ಕೂಡ ಸಿಗುತ್ತದೆ. ಹಾಗಾಗಿ 2026 ರಲ್ಲಿ ಬಜೆಟ್ ಇವಿ ಖರೀದಿಸುವುದು ಲಾಭದಾಯಕ ನಿರ್ಧಾರ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ವಿಧಿವಶ

ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಮೇಲೆ ನಡೆದಿತ್ತು ಆ್ಯಸಿಡ್ ದಾಳಿ; ಎರಡು ಬಾರಿ ಸಾವು ಗೆದ್ದು ಬಂದಿದ್ದ ಚೆನ್ನಮ್ಮ!

ಬೆಂಗಳೂರು: ಕೆಆರ್ ಸರ್ಕಲ್​​ನಲ್ಲಿ ಮತ್ತೊಂದು ಭೀಕರ ಅಪಘಾತ; ಕಿಲ್ಲರ್ ಬಿಎಂಟಿಸಿಗೆ ಆಟೋ ಚಾಲಕ ಬಲಿ! Video

ನೆಲಮಂಗಲ ನೈತಿಕ ಪೊಲೀಸ್‌ಗಿರಿ: Hindu ಯುವಕನ ಮೇಲೆ ತೀವ್ರ ಹಲ್ಲೆ; ನೊಂದು ಆತ್ಮಹತ್ಯೆಗೆ ಯತ್ನಿಸಿದ ಮುಸ್ಲಿಂ ಯುವತಿ, Video!

ಅಹಮದಾಬಾದ್ ಪಟಾಕಿ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 8 ಕಾರ್ಮಿಕರ ದುರ್ಮರಣ; ಹಲವರಿಗೆ ಗಂಭೀರ ಗಾಯ