ರೈಲ್ವೆ ಬಜೆಟ್ 2016-17: ಮಹಿಳೆಯರಿಗೆ ಏನೇನು ಸೌಲಭ್ಯ?
ಎಲ್ಲ ವಿಭಾಗದಲ್ಲಿಯೂ ಮಹಿಳೆಯರಿಗೆ ಶೇ. 33 ಸೀಟುಗಳು ಮೀಸಲು. ಅಮ್ಮನೊಂದಿಗೆ ಪ್ರಯಾಣಿಸುವ ಪುಟ್ಟ ಮಕ್ಕಳಿಗೆ ರೈಲಿನಲ್ಲಿ ಹಾಲು, ಬಿಸಿ ನೀರು, ಬೇಬಿ ಫುಡ್ ಸೌಲಭ್ಯ...
ನವದೆಹಲಿ: 2016-17 ಆರ್ಥಿಕ ವರ್ಷದ ರೈಲ್ವೆ ಬಜೆಟ್ ಕೇಂದ್ರ ರೈಲ್ವೇ ಸಚಿವ ಸುರೇಶ್ ಪ್ರಭು ಸಂಸತ್ನಲ್ಲಿ ಮಂಡನೆ ಮಾಡಿದ್ದಾರೆ.
ಇದು ಜನ ಸಾಮಾನ್ಯರ ಬಜೆಟ್ ಎಂದು ಹೇಳುವ ಮೂಲಕ ಸುರೇಶ್ ಪ್ರಭು ಬಜೆಟ್ ಮಂಡನೆ ಆರಂಭ ಮಾಡಿದ್ದರು. ಪ್ರಸ್ತುತ ಬಜೆಟ್ನಲ್ಲಿ ಮಹಿಳೆಯರಿಗೆ ರಕ್ಷಣೆ ನೀಡಲು ಪ್ರಾಧಾನ್ಯತೆ ನೀಡಬೇಕೆಂಬುದು ಎಲ್ಲರ ಒಕ್ಕೊರಲ ಒತ್ತಾಯವಾಗಿತ್ತು. ಅಂದ ಹಾಗೆ ಈ ಬಜೆಟ್ನಲ್ಲಿ ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಯಾವೆಲ್ಲಾ ಸೌಕರ್ಯಗಳನ್ನು ಕಲ್ಪಿಸಲಾಗಿದೆ?
ಇಲ್ಲಿದೆ ಬಜೆಟ್ ಅಪ್ಡೇಟ್
- ಮಹಿಳೆಯರಿಗೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚಿನ ಸೀಟುಗಳು ಮೀಸಲು
- ರೈಲಿನ ಮಧ್ಯ ಭಾಗದಲ್ಲಿ ಲೇಡಿಸ್ ಕಂಪಾರ್ಟ್ಮೆಂಟ್
- ಎಲ್ಲ ನಿಲ್ದಾಣಗಳಲ್ಲಿ ಸಿಸಿಟಿವಿ ಅಳವಡಿಕೆ
- ಹಿರಿಯ ನಾಗರಿಕರಿಗೆ ಶೇ. 50 ಸೀಟು ಹೆಚ್ಚಳ
- ಎಲ್ಲ ವಿಭಾಗದಲ್ಲಿಯೂ ಮಹಿಳೆಯರಿಗೆ ಶೇ. 33 ಸೀಟುಗಳು ಮೀಸಲು
- ಅಮ್ಮನೊಂದಿಗೆ ಪ್ರಯಾಣಿಸುವ ಪುಟ್ಟ ಮಕ್ಕಳಿಗೆ ರೈಲಿನಲ್ಲಿ ಹಾಲು, ಬಿಸಿ ನೀರು, ಬೇಬಿ ಫುಡ್ ಸೌಲಭ್ಯ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.