ಕೋಲ್ಕತ್ತಾ: ಸೋಮವಾರ ದೆಹಲಿಯಲ್ಲಿ ನಡೆಯಲಿರುವ ಬಜೆಟ್ ಪೂರ್ವ ಸರ್ವ ಪಕ್ಷ ಸಭೆಯಲ್ಲಿ ಭಾಗವಹಿಸದಿರಲು ತೃಣಮೂಲ ಕಾಂಗ್ರೆಸ್(ಟಿಎಂಸಿ) ನಿರ್ಧರಿಸಿದೆ.
ಕೇಂದ್ರ ಸರ್ಕಾರದ ನೋಟು ಅಮಾನ್ಯತೆ ನಿರ್ಧಾರವನ್ನು ಆರಂಭದಿಂದಲೂ ವಿರೋಧಿಸುತ್ತಲೇ ಬಂದಿರುವ ಟಿಎಂಸಿ ಸಭೆಯಲ್ಲಿ ಭಾಗವಹಿಸದಿರಲು ನಿರ್ಧರಿಸಿದೆ. ತಮ್ಮ ಕೋಲ್ಕತ್ತಾ ನಿವಾಸದಲ್ಲಿ ಇಂದು ನಾಯಕಿ ಮಮತಾ ಬ್ಯಾನರ್ಜಿ ಸಭೆ ಕರೆದಿದ್ದು, ಎಲ್ಲಾ ಸಂಸದರನ್ನು ಆಹ್ವಾನಿಸಿದ್ದಾರೆ.
ಮಮತಾ ಬ್ಯಾನರ್ಜಿಯವರು ಈ ಹಿಂದೆ ಫೆಬ್ರವರಿ 1ರಂದು ಬಜೆಟ್ ಮಂಡನೆ ದಿನಾಂಕವನ್ನು ಕೂಡ ಪ್ರಶ್ನಿಸಿದ್ದರು.
ಬಜೆಟ್ ಅಧಿವೇಶನ ಕಲಾಪ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಸಹಕರಿಸಬೇಕೆಂದು ಕೋರಲು ಸರ್ಕಾರ ಇಂದು ಸರ್ವ ಪಕ್ಷ ಸಭೆ ಕರೆದಿದೆ. ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಕೂಡ ಸಭೆ ಕರೆದಿದ್ದಾರೆ.
ಮುಂಬರುವ 5 ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ಬಜೆಟ್ ಮಂಡಿಸಲು ಆದೇಶ ನೀಡುವಂತೆ ಕೋರಿ 16 ಪ್ರತಿಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿದ್ದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics