ಕೇಂದ್ರ ಬಜೆಟ್

ಭಾರತದ ಜಿಡಿಪಿ ವೇಗವಾಗಿ ಬೆಳೆಯುತ್ತಿದೆ-ಪಿಯೂಷ್ ಗೋಯಲ್

Sumana Upadhyaya

ನವದೆಹಲಿ: ಕಳೆದ 5 ವರ್ಷಗಳಲ್ಲಿ ವಿಶ್ವದ ಆರ್ಥಿಕತೆಯಲ್ಲಿ ಭಾರತ ಪ್ರಗತಿಯತ್ತ ಸಾಗಿದ್ದು ಹಿಂದಿನ ಎಲ್ಲಾ ಸರ್ಕಾರಗಳಿಗಿಂತ ಎನ್ ಡಿಎ ಅವಧಿಯಲ್ಲಿ ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ವೇಗವಾಗಿ ಪ್ರಗತಿ ಹೊಂದಿದ್ದು, ಆರ್ಥಿಕ ಬೆಳವಣಿಗೆ ವಿಚಾರದಲ್ಲಿ ವಿಶ್ವದಲ್ಲಿ 6ನೇ ಸ್ಥಾನದಲ್ಲಿದೆ ಎಂದು ಕೇಂದ್ರ ವಿತ್ತ ಸಚಿವ ಪಿಯೂಷ್ ಗೋಯಲ್ ತಿಳಿಸಿದರು.

ಇಂದು ಲೋಕಸಭೆಯಲ್ಲಿ 2019ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸುತ್ತಾ, ಕಳೆದ 5 ವರ್ಷಗಳಲ್ಲಿ ಭಾರತ ಆರ್ಥಿಕ ವಿಚಾರದಲ್ಲಿ ಮಹತ್ತರ ಸಾಧನೆ ಮಾಡಿದ್ದು ವಿಶ್ವದಲ್ಲಿಯೇ ಗುರುತಿಸಿಕೊಂಡಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ದ್ವಿಗುಣ ಮೊತ್ತದ ಹಣದುಬ್ಬರವನ್ನು ತಡೆದಿದ್ದು ಮಾತ್ರವಲ್ಲದೆ ಅತಿ ಪ್ರಮಾಣದ ಹಣದುಬ್ಬರ ಕೂಡ ಕಡಿಮೆಯಾಗಿದೆ ಎಂದರು.

SCROLL FOR NEXT